twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗು ಬೃಂದಾವನಂ ರೀಮೇಕ್‍‌ಗೆ ನಟ ದರ್ಶನ್

    By Rajendra
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ರೀಮೇಕ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ತೆಲುಗಿನಲ್ಲಿ ಸೂಪರ್ ಡೂಪರ್ ಹಿಟ್ ದಾಖಲಿಸಿದ 'ಬೃಂದಾವನಂ' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಈ ಹಿಂದೆ ತೆಲುಗಿನ 'ಪೋಕಿರಿ' ಚಿತ್ರವನ್ನು 'ಪೊರ್ಕಿ'ಯಾಗಿ ಕನ್ನಡಕ್ಕೆ ತರಲಾಗಿತ್ತು.

    ಜೂನಿಯರ್ ಎನ್ಟಿಆರ್ ಮುಖ್ಯಭೂಮಿಕೆಯಲ್ಲಿದ್ದ 'ಬೃಂದಾವನಂ' ಚಿತ್ರ 2010ರಲ್ಲಿ ತೆರೆಕಂಡಿತ್ತು. ಆಕ್ಷನ್, ಕಾಮಿಡಿ, ರೊಮ್ಯಾಂಟಿಕ್ ಚಿತ್ರ ಇದಾಗಿತ್ತು. ಮೋಹಕ ತಾರೆಯರಾದ ಸಮಂತಾ ಹಾಗೂ ಕಾಜಲ್ ಅಗರವಾಲ್ ಚಿತ್ರದ ನಾಯಕಿಯರಾಗಿದ್ದರು.

    ಈ ಚಿತ್ರದ ರೀಮೇಕ್ ಹಕ್ಕುಗಳು ನಿರ್ಮಾಪಕ ಸುರೇಶ್ ಗೌಡ ಪಾಲಾಗಿದ್ದು, ಕೆ ಮಾದೇಶ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ಮಾದೇಶ್ ತಮಿಳಿನ 'ನಾಡೋಡಿಗಳ್' ಚಿತ್ರದ ರೀಮೇಕ್ 'ಹುಡುಗರು' ಚಿತ್ರವನ್ನು ನಿರ್ದೇಶಿಸಿದ್ದರು.

    ಸದ್ಯಕ್ಕೆ ದರ್ಶನ್ ಸಖತ್ ಬಿಜಿಯಾಗಿದ್ದು ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಭಾರಿ ಬಜೆಟ್ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವಿರಾಟ್, ಬುಲ್ ಬುಲ್ ನಿರ್ಮಾಣ ಹಂತದಲ್ಲಿವೆ. ಬುಲ್ ಬುಲ್ ಚಿತ್ರ ತೆಲುಗಿನ 'ಡಾರ್ಲಿಂಗ್' ರೀಮೇಕ್.

    ಈಗ ಮತ್ತೊಂದು ರೀಮೇಕ್ ಚಿತ್ರವನ್ನು ಒಪ್ಪಿಕೊಳ್ಳುವ ಮೂಲಕ ದರ್ಶನ್ ಕನ್ನಡದಲ್ಲಿ ಮತ್ತೊಬ್ಬ ರೀಮೇಕ್ ರಾಜನಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳು ಇವೆ. "ಅದು ಯಾವುದೇ ಭಾಷೆಯ ಚಿತ್ರವಾಗಿರಲಿ, ನನಗೆ ಕತೆ ಮುಖ್ಯ. ನನ್ನ ಇಮೇಜ್‌ಗೆ ತಕ್ಕಂತ್ತಿದ್ದು, ಅಭಿಮಾನಿಗಳಿಗೆ ಇಷ್ಟವಾದರೆ ಸಾಕು" ಎಂದಿದ್ದಾರೆ.

    'ಬೃಂದಾವನಂ' ಕನ್ನಡ ರೀಮೇಕ್‌ ಚಿತ್ರದ ನಾಯಕಿಯರು ಯಾರು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಕನ್ನಡದಲ್ಲಿ ಚಿತ್ರಕ್ಕೆ ಏನು ಶೀರ್ಷಿಕೆ ಕೊಡಲಾಗುತ್ತದೆ ಎಂಬುದನ್ನು ನಿರೀಕ್ಷಿಸಲಾಗಿದೆ. 'ಬುಲ್ ಬುಲ್' ಚಿತ್ರದ ಬಳಿಕವಷ್ಟೇ ಬೃಂದಾವನಂ ರೀಮೇಕ್ ಚಿತ್ರ ಸೆಟ್ಟೇರಲಿದೆ. ಜುಲೈನಲ್ಲಿ 'ಬುಲ್ ಬುಲ್' ಸೆಟ್ಟೇರಲಿದೆ.

    ತೆಲುಗಿನಲ್ಲಿ ರು.30 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ್ದ ಈ ಚಿತ್ರ ಬಾಕ್ಸಾಫೀಸಲ್ಲಿ ರು.62 ಕೋಟಿ ಬಾಚಿತ್ತು. ಆದರೆ ಜೂ. ಎನ್ಟಿಆರ್ ವೃತ್ತಿಜೀವನದಲ್ಲಿ ಅಂತಹ ಭಾರಿ ತಿರುವನ್ನೇನು ನೀಡಲಿಲ್ಲ. ಅವರು ಮಾಸ್ ಇಮೇಜಿನಿಂದ ಹೊರಬರಲಷ್ಟೇ ಈ ಚಿತ್ರ ಸಹಾಯ ಮಾಡಿತ್ತು.

    ಚಿತ್ರದಲ್ಲಿ ಕಾಮಿಡಿ ಹೈಲೈಟ್ ಆಗಿತ್ತು. ಕತೆ ಔಟ್ ಡೇಟೆಡ್, ಎನ್ಟಿಆರ್‌ಗೆ ಈ ಪಾತ್ರ ಹೊಂದಾಣಿಕೆಯಾಗಿಲ್ಲ. ಆದರೆ ಸಂಭಾಷಣೆ ಮಾತ್ರ ಸೂಪರ್ ಎಂಬ ವಿಮರ್ಶೆಗಳು ತೆಲುಗಿನಲ್ಲಿ ವ್ಯಕ್ತವಾಗಿದ್ದವು. ದರ್ಶನ್ ಕೂಡ ಈ ಚಿತ್ರದ ಮೂಲಕ ಮಾಸ್ ಇಮೇಜ್‌ನಿಂದ ಹೊರಬಂದು ಫ್ಯಾಮಿಲಿ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಬಹುದು. (ಏಜೆನ್ಸೀಸ್)

    English summary
    Telugu biggest hit film Brindavanam to be remade in Kannada. Darshan in lead role; the heroine is yet to be chosen. K Madesh, who has made several remake films before, has been selected as the director.
    Thursday, June 7, 2012, 14:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X