Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನಾನು ಡಬ್ಬಾ ಸಿನಿಮಾ ಮಾಡಿದಾಗಲೂ ನೋಡಿದ್ದೀರಾ": ದರ್ಶನ್
'ಕ್ರಾಂತಿ' ಚಿತ್ರದ 4ನೇ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಡೋಂಟ್ ಮೆಸ್ ವಿತ್ ಹಿಮ್' ಅಂತ ಶುರುವಾಗುವ ಹಾಡನ್ನು ತುಮಕೂರಿನಲ್ಲಿ ನಿನ್ನೆ(ಜನವರಿ 14) ಸಂಜೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ರಾಜ್ಯಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಎಲ್ಲೇ ಹೋದರು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. 'ಕ್ರಾಂತಿ' ಸಿನಿಮಾ ಸಾಂಗ್ ಬಿಡುಗಡೆಗಾಗಿ ತುಮಕೂರಿನ ಡಾ. ಶಿವಕುಮಾರ ಸ್ವಾಮೀಜಿ ಸರ್ಕಲ್‌ಗೆ ದರ್ಶನ್ ಬರ್ತಾರೆ ಎನ್ನುವ ಸುದ್ದಿ ಕೇಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಚಿತ್ರತಂಡ ಬಸ್ ಮೂಲಕ ಸಂಜೆ ವೇಳೆಗೆ ಜಾಗ ತಲುಪಿತ್ತು. ಆದರೆ ವೇದಿಕೆ ಏರಲೂ ಕೂಡ ಸಾಧ್ಯವಾದಷ್ಟು ಮಟ್ಟಿಗೆ ಅಭಿಮಾನಿ ಸಾಗರ ನೆರೆದಿತ್ತು. ಕೊನೆಗೆ ದರ್ಶನ್ ಬಸ್ ಮೇಲೆಯೇ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ಡೋಂಟ್
ಮೆಸ್
ವಿತ್
ಹಿಮ್,
ಇರಲಿ
ಜಾಗೃತೆ:
'ಕ್ರಾಂತಿ'ಯ
ಹೊಸ
ಮಾಸ್
ಹಾಡು
ಬಿಡುಗಡೆ
ರಚಿತಾ ರಾಮ್ ಸೇರಿದಂತೆ ಚಿತ್ರತಂಡ ಎಲ್ಲರೂ ಬಸ್‌ನ ಒಳಗೆ ಉಳಿದರು. ರಚ್ಚು ಬಸ್ ಒಳಗಿನಿಂದಲೇ ಮಾತನಾಡಿದರು. ದರ್ಶನ್ ಬಸ್ ಮೇಲೆ ಏರಿ ಅಭಿಮಾನಿಗಳಿಗೆ ದರ್ಶನ ಕೊಟ್ಟರು. ರವಿ ಎನ್ನುವ ತಮ್ಮ ಅಭಿಮಾನಿಯನ್ನು ಬಸ್ ಮೇಲೆ ಹತ್ತಿಸಿಕೊಂಡು ಸಾಂಗ್ ರಿಲೀಸ್ ಮಾಡಿಸಿದರು.

ಡಬ್ಬಾ ಚಿತ್ರಗಳನ್ನು ನೋಡಿದ್ದೀರಾ
ನಾನು ಒಳ್ಳೆ ಸಿನಿಮಾ ಮಾಡಿದ್ರು, ಡಬ್ಬಾ ಸಿನಿಮಾ ಮಾಡಿದ್ರು, ಆವರೇಜ್ ಸಿನಿಮಾ ಮಾಡಿದ್ರು, ಅದನ್ನು ನೋಡಿದ ಹರಿಸಿದ, ನನಗೆ ಊಟ ಹಾಕಿದ ನನ್ನ ಎಲ್ಲಾ ಸೆಲೆಬ್ರೆಟಿಗಳಿಗೆ ಅನಂತ ಅನಂತ ಧನ್ಯವಾದಗಳು. ನಾವು ಇನ್ನು ಬೇಗ ಬರಬೇಕಿತ್ತು. ಶನಿವಾರ ಆದ್ರಿಂದ ಎಲ್ಲಾ ಕಡೆ ಟೋಲ್‌ನಲ್ಲಿ ನಿಂತು ನಿಂತು ಬರಬೇಕಾಯಿತು. ಹಾಗಾಗಿ ಬೇಸರ ಮಾಡಿಕೊಳ್ಳಬೇಡಿ. ಇಷ್ಟೊತ್ತು ಲಿರಿಕಲ್ ವಿಡಿಯೋ ನೋಡಿದ್ದೀರಾ. ವಿಡಿಯೋ ಸಾಂಗ್ ಸಿನಿಮಾದಲ್ಲಿ ನೋಡೋಕೆ ಇಷ್ಟ ಇದೆ ಅಲ್ವಾ? ನಿರ್ಮಾಪಕರು, ನಾಯಕಿ ಎಲ್ಲರೂ ಬಸ್ ಒಳಗೆ ಕೂತಿದ್ದಾರೆ. ನಾವು ಬಸ್ ಬಿಟ್ಟು ವೇದಿಕೆಗೆ ಬರಲು ಸಾಧ್ಯವಿಲ್ಲ" ಎಂದರು.

ತುಮಕೂರು ರಸ್ತೆಗಳು ಬ್ಲಾಕ್
ದರ್ಶನ್ ತುಮಕೂರಿಗೆ ಬರ್ತಾರೆ ಎಂದು ತಿಳಿದು ದೊಡ್ಡ ಸಂಖ್ಯೆ ಅಭಿಮಾನಿಗಳು ಒಮ್ಮೆಲೆ ಡಾ. ಶಿವಕುಮಾರ ಸ್ವಾಮೀಜಿ ಸರ್ಕಲ್ ಕಡೆ ಧಾವಿಸಿದ್ದರಿಂದ ರಸ್ತೆಗಳು ಬ್ಲಾಕ್ ಆಗಿತ್ತು. 'ಕ್ರಾಂತಿ' ಚಿತ್ರತಂಡ ಇದ್ದ ಬಸ್ ವೇದಿಕೆ ಸ್ಥಳಕ್ಕೆ ಬರುವುದು ಕೂಡ ಇದರಿಂದ ತಡವಾಯಿತು. ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮರಗಳನ್ನು ಏರಿದ ಪ್ರಸಂಗ ಕೂಡ ನಡೀತು. ಡಿ ಬಾಸ್.. ಡಿ ಬಾಸ್ ಎನ್ನುವ ಕೂಗು ಮುಗಿಲು ಮುಟ್ಟಿತ್ತು.

ಕಿಕ್ ಕೊಡ್ತಿದೆ 4ನೇ ಸಾಂಗ್
'ಕ್ರಾಂತಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ವಿ. ಹರಿಕೃಷ್ಣ ಟ್ಯೂನ್ ಹಾಕಿದ್ದಾರೆ. 'ಡೋಂಟ್ ಮೆಸ್ ವಿತ್ ಹಿಮ್' ಸಾಂಗ್‌ಗೆ ಬಹದ್ದೂರ್ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಟಿಪ್ಪು, ರಂಜಿತ್ ಮತ್ತು ಅನಿರುದ್ಧ್ ಶಾಸ್ತ್ರಿ ವಾಯ್ಸ್‌ನಲ್ಲಿ ಸಾಂಗ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಸದ್ಯ ಲಿರಿಕಲ್ ಸಾಂಗ್ ನೋಡಿರುವ ಫ್ಯಾನ್ಸ್ ತೆರೆಮೇಲೆ ವಿಡಿಯೋ ಸಾಂಗ್ ನೋಡಲು ಕಾಯುತ್ತಿದ್ದಾರೆ.

ಜ. 26ಕ್ಕೆ 'ಕ್ರಾಂತಿ' ರಿಲೀಸ್
ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ನಿರ್ಮಾಣದ 'ಕ್ರಾಂತಿ' ಸಿನಿಮಾ ಜನವರಿ 26ಕ್ಕೆ ತೆರೆಗೆ ಬರ್ತಿದೆ. ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಒಂದೊಳ್ಳೆ ಸಂದೇಶವನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗುತ್ತಿದೆ. ಈಗಾಗಲೇ ಚಿತ್ರದ 4 ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಬೊಂಬೆ ಬೊಂಬೆ', 'ಶೇಕ್ ಇಟ್ ಪುಷ್ಪವತಿ' ಸಾಂಗ್ಸ್ ಹೆಚ್ಚೇ ಸದ್ದು ಮಾಡ್ತಿವೆ.