»   » ರಾಗಿಣಿ ಐಪಿಎಸ್ ಆಯ್ತು ಈಗ ಕರಡಿ ಐಪಿಎಸ್

ರಾಗಿಣಿ ಐಪಿಎಸ್ ಆಯ್ತು ಈಗ ಕರಡಿ ಐಪಿಎಸ್

Posted By:
Subscribe to Filmibeat Kannada
'ರಾಗಿಣಿ ಐಪಿಎಸ್' ಚಿತ್ರ ಇನ್ನೇನು ತೆರೆಕಾಣಲು ಸಿದ್ಧವಾಗಿದೆ. ಈಗ ಇನ್ನೊಂದು ಚಿತ್ರ 'ಕರಡಿ ಐಪಿಎಸ್' ಶೀಘ್ರದಲ್ಲೇ ಸೆಟ್ಟೇರಲಿದೆ. ಆದರೆ ಈ ಚಿತ್ರದಲ್ಲಿ ರಾಗಿಣಿ ಇರುವುದಿಲ್ಲ. ಇದು ಹಾಸ್ಯನಟ ಕೋಮಲ್ ಅವರ ಮತ್ತೊಂದು ಚಿತ್ರದ ಹೆಸರು.

ಇದೇ ಮೊಟ್ಟಮೊದಲ ಬಾರಿಗೆ ಕೋಮಲ್ ತಮ್ಮ ವೃತ್ತಿಜೀವನದಲ್ಲಿ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು. ತಮ್ಮ ಪಾತ್ರಕ್ಕಾಗಿ ಒಂದಷ್ಟು ತೆಳ್ಳಗೂ ಆಗಿದ್ದಾರೆ. ಬೆಳಗಿನ ತಿಂಡಿ ಮಾತ್ರ ತಿನ್ನುತ್ತಿದ್ದು ಉಳಿದಂತೆ ಅವರು ಊಟ ತ್ಯಜಿಸಿದ್ದಾರೆ. ಅಯ್ಯೋ ಅವರು ಏನೂ ತಿನ್ನೋದೇ ಇಲ್ವಾ ಎಂದರೆ...

ಉಳಿದ ಹೊತ್ತಲ್ಲಿ ಹಣ್ಣು ಹಂಪಲು ತರಕಾರಿ ತಿನ್ನುತ್ತಿದ್ದಾರೆ. ಈ ಮೂಲಕ ಹದಿನೈದು ದಿನಗಳಲ್ಲಿ ನಾಲ್ಕು ಕೆ.ಜಿ ತೂಕ ಕಡಿಮೆಯಾಗಿದ್ದಾರೆ. ಮೈತೂಕ ಇಳಿಸಿಕೊಳ್ಳಲು ಒಂದಷ್ಟು ಕಸರತ್ತಿಗೂ ಕೈಹಾಕಿದ್ದಾರೆ. ಏತನ್ಮಧ್ಯೆ ಅವರು ಕೆಲವು ಚಿತ್ರಗಳಲ್ಲೂ ಬಿಜಿಯೋ ಬಿಜಿ.

ಪ್ಯಾರ್ ಗೆ ಆಗ್ಬುಟ್ಟೈತೆ ಹಾಗೂ ಗೋವಾ ಚಿತ್ರಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರ ಜೊತೆಗೆ 'ಪುಂಗಿ ದಾಸ' ಚಿತ್ರ ಸಹ ಅನೌನ್ಸ್ ಆಗಿದೆ. ಒಟ್ಟಾರೆಯಾಗಿ ಅವರು ಪುರುಸೊತ್ತಿಲ್ಲದಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.

ಪುಂಗಿದಾಸ ಚಿತ್ರೀಕರಣ ಜೂನ್ ತಿಂಗಳಿಂದ ಆರಂಭವಾಗಲಿದೆ. ಏತನ್ಮಧ್ಯೆ ಕೋಮಲ್ ಅಭಿನಯದ 'ಗೋವಿಂದಾಯ ನಮಃ' ಚಿತ್ರ ಪರಭಾಷೆಗಳಿಗೆ ರಿಮೇಕ್ ಆಗುತ್ತಿರುವುದು ಗೊತ್ತೇ ಇದೆ. ಇದರ ಜೊತೆಗೆ ವಾಸ್ಕೋಡ ಗಾಮ, ಮೀರ್ ಸಾಧಿಕ್ ಎಂಬೆರಡು ಚಿತ್ರಗಳೂ ಅವರ ಕೈಯಲ್ಲಿವೆ. (ಏಜೆನ್ಸೀಸ್)

English summary
Comedy actor Komal Kumar is now Karadi IPS. For the first time the actor is playing the cop role in his career. Meanwhile he is busy in films Pyaar Ge Ag Buttaithe, Goa and Pungi Daasa.
Please Wait while comments are loading...