»   » ಹ್ಯಾಂಡ್ಸಮ್ ನಟ ನಾಗಕಿರಣ್ ಈಗ ಹೇಗಿದ್ದಾರೆ ಗೊತ್ತಾ?

ಹ್ಯಾಂಡ್ಸಮ್ ನಟ ನಾಗಕಿರಣ್ ಈಗ ಹೇಗಿದ್ದಾರೆ ಗೊತ್ತಾ?

Posted By: ಕುಸುಮ
Subscribe to Filmibeat Kannada

ಸ್ಯಾಂಡಲ್ ವುಡ್ನ ಹ್ಯಾಂಡಸಮ್ ಹೀರೋ ನಾಗಕಿರಣ್ ಇತ್ತೀಚೆಗೆ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಎಲ್ಲಿ ಹೋದರು ಈ ಕೊಡಗಿನ ಸುರಸುಂದರಾಂಗ ಅಂತ ನೀವು ಅಂದುಕೊಳ್ಳುತ್ತಿದ್ದರೆ, ಈಗ 'ಆದರ್ಶ' ಸಿನಿಮಾ ಮೂಲಕ ನಾಗಕಿರಣ್ ಮತ್ತೆ ಸ್ಯಾಂಡಲ್ ವುಡ್ಗೆ ಕಂಬ್ಯಾಕ್ ಮಾಡೋಕೆ ರೆಡಿಯಾಗಿದ್ದಾರೆ. ಅಂದಹಾಗೆ ನಾಗಕಿರಣ್ ಎಂಟ್ರಿ ಕೊಟ್ಟಿರೋದು ದೊಡ್ಡ ಸುದ್ದಿಯಲ್ಲ. ಅವರು ಎಂಟ್ರಿ ಕೊಟ್ಟಿರುವ ರೀತಿ ಈಗ ವಿಭಿನ್ನವಾಗಿದೆ.

ಎಂದಿನಂತೆ ಹಿಂದಿನಂತೆ ಅಂತ ನಾಗಕಿರಣ್ ಸ್ಯಾಂಡಲ್ ವುಡ್ಗೆ ಬಂದಿಲ್ಲ. ಪ್ರಸಾದ್ ಬಿದ್ದಪ್ಪ ಮಾಡೆಲಿಂಗ್ ಗರಡಿಯ ಈ ಹೀರೋ ಈಗ ಸ್ಪರ್ಧಾತ್ಮಕವಾಗಿ ಚಿತ್ರರಂಗಕ್ಕಿಳಿದಿದ್ದಾರೆ. ಕಟ್ಟುಮಸ್ತಾಗಿ ಬಾಡಿಬಿಲ್ಡ್ ಮಾಡಿಕೊಂಡು ಹೊಸ ಹುರುಪಿನಲ್ಲಿ ಕಾಲಿಟ್ಟಿದ್ದಾರೆ. ಮೂಲತಃ ಮಾಡೆಲ್ ಆಗಿದ್ದ ಕೊಡಗಿನ ಸೋಮವಾರಪೇಟೆಯ ಈ ಚೆಲುವ 'ಮಸ್ತ್ ಮಜಾಮಾಡಿ', 'ಮಳೆ ಬರಲಿ ಮಂಜು ಇರಲಿ', 'ಅನು' ಮುಂತಾದ ಕಮರ್ಷಿಯಲ್ ಚಿತ್ರಗಳಲ್ಲಿ ಮಿಂಚಿದ್ದರು.

Actor Nagakiran comes back with a bang

ಕಲಾತ್ಮಕ ಚಿತ್ರ 'ಇಜ್ಜೋಡು'ನಲ್ಲಿ ನಾಗಕಿರಣ್ ಪ್ರಬುದ್ಧ ನಟನಾಗೋ ಭರವಸೆ ಮೂಡಿಸಿದ್ದರು. ಆದರೆ ಮೂರು ವರ್ಷಗಳಿಂದ ಸೈಡಿಗೆ ಸರಿದಿದ್ದ ನಾಗಕಿರಣ್, ಈ ನಡುವಲ್ಲಿ ಎಂ ಎಂ' ಅನ್ನೋ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಕೂಡ ಬಂದಿತ್ತು. ಆದರೆ ಆ ಸಿನಿಮಾ ಕೂಡ ಮುಂದುವರಿದಿಲ್ಲ.

ಈ ನಡುವೆ ತೆಲುಗಿನಲ್ಲಿ ಕೂಡ ನಟಿಸಿದ ನಾಗಕಿರಣ್ ಅವರಿಗೆ ಅಲ್ಲೂ ಅದೃಷ್ಟ ಕೈ ಹಿಡಿಯಲಿಲ್ಲ. ಈಗ 'ಆದರ್ಶ' ಸಿನಿಮಾ ಮೂಲಕ ತೆರೆಗೆ ಬರುತ್ತಿರೋ ನಾಗಕಿರಣ್ ಅದೃಷ್ಟ ಪರೀಕ್ಷೆಗೆ ಮುಂದಿನ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

English summary
What actor Nagakiran is doing these days? Where did this handsome actor from Coorg vanish? This model trained under Prasad Biddappa had not gone anywhere. But, he has come back with better physique through Kannada movie Adarsha. All the best Nagakiran. ಹ್ಯಾಂಡ್ಸಮ್ ನಟ ನಾಗಕಿರಣ್ ಈಗ ಹೇಗಿದ್ದಾರೆ ಗೊತ್ತಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada