For Quick Alerts
  ALLOW NOTIFICATIONS  
  For Daily Alerts

  ಕೆಲಸದ ಆಮೀಷ ಒಡ್ಡಿ 5 ಲಕ್ಷಕ್ಕೆ ನಾಮ ಹಾಕಿದ ನಟ

  By ಶಂಕರ್, ಚೆನ್ನೈ
  |

  ವಿದೇಶದಲ್ಲಿ ಉದ್ಯೋಗ ಕೊಡುಸ್ತೀನಿ ಎಂದು ಹೇಳಿ ರು.5 ಲಕ್ಷಕ್ಕೆ ನಾಮ ಹಾಕಿದ ಸಂಬಂಧ ಯುವ ನಟನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಣಿಕಂಠನ್ ಎಂಬುವವರು ಪೊಲೀಸರಿಗೆ ದೂರು ನೀಡಿದ ಸಂಬಂಧ ಚೆನ್ನೈನ ಅಯನವರಂ ಪೊಲೀಸರು ನಟ ಪವನ್ ಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ.

  ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಣಿಕಂಠನ್ ಎಂಬುವವರಿಂದ ರು.5 ಲಕ್ಷ ತೆಗೆದುಕೊಂಡಿದ್ದ. ಬಳಿಕ ಕೆಲಸವೂ ಇಲ್ಲದೆ ದುಡ್ಡು ಕೊಡದೆ ಕಣ್ಣುತಪ್ಪಿಸಿಕೊಂಡು ಅಲೆದಾಡುತ್ತಿದ್ದ. ಈತ ತನಗೆ ನಂಬಿಸಿ ಮೋಸ ಮಾಡಿರುವ ಸಂಗತಿ ಗೊತ್ತಾಗುತ್ತಿದ್ದಂತೆ ಮಣಿಕಂಠನ್ ಪೊಲೀಸರಿಗೆ ದೂರು ನೀಡಿದ್ದಾನೆ.

  ಈತ ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾನೆ. ಈತ ಟೋಪಿ ಹಾಕಿರುವುದು ತನ್ನ ಖಾಸಾ ದೋಸ್ತ್ ಗೆ ಎಂಬುದು ವಿಶೇಷ. "ನಾನು ಮತ್ತು ಪವನ್ ಗೆಳೆಯರು. ಕೆಲಸ ಕೊಡಿಸುತ್ತೇನೆ ರು.5 ಲಕ್ಷ ಕೊಡು ಎಂದು ತೆಗೆದುಕೊಂಡಿದ್ದ. ಕಾದು ಕಾದು ಸಾಕಾಯಿತೆ ಹೊರತು ಈತ ಕೆಲಸ ಕೊಡಿಸುವ ಮಾತು ದೂರವಾಗಿಯೇ ಉಳಿಯಿತು" ಎಂದಿದ್ದಾನೆ ಮಣಿಕಂಠನ್.

  ಹಣ ವಾಪಸ್ ಕೊಡು ಎಂದರೆ ಅದಕ್ಕೂ ಈತ ಕ್ಯಾರೆ ಅನ್ನಲಿಲ್ಲ. ತೀರಾ ಬಲವಂತ ಮಾಡಿದರೆ ಕೊಲೆ ಬೆದರಿಕೆ ಹಾಕುತ್ತಿದ್ದ. ಈತ ಇನ್ನು ಹಣ ಕೊಡುವುದಿಲ್ಲ ಎಂದು ಕನ್ಫರ್ಮ್ ಆಯಿತು. ಹಾಗಾಗಿ ಚೆನ್ನೈ ಸೆಂಟ್ರಲ್ ಕ್ರೈಮ್ ಬ್ರಾಂಚ್ ಪೊಲೀಸ್ ಅಸಿಸ್ಟೆಂಟ್ ಕಮೀಷನರ್ ಅವರಿಗೆ ದೂರು ನೀಡಿದೆ ಎಂದಿದ್ದಾನೆ ಮಣಿಕಂಠನ್.

  ಆತನ ದೂರನ್ನು ಸ್ವೀಕರಿಸಿದ ಪೊಲೀಸರು ನಟ ಪವನ್ ಕುಮಾರ್ ನನ್ನು ಬಂಧಿಸಿದ್ದಾರೆ. ಆತನ ವಿಚಾರಣೆ ನಡೆಯುತ್ತಿದ್ದು ಇನ್ನಷ್ಟೇ ಸತ್ಯಾಸತ್ಯತೆಗಳು ಹೊರಬೀಳಬೇಕಾಗಿವೆ. ಅಲ್ಲಿಯವರೆಗೂ ಪೊಲೀಸರ ಅತಿಥಿಸತ್ಕಾರ ಪವನ್ ಕುಮಾರ್ ಗೆ ನಡೆಯಲಿದೆ.

  English summary
  Telugu and Tamil actor Pawankumar was arrested on charges of defrauding individual of Rs.5 lakhs after promising him job in Dubai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X