»   » ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈಗ 'ಚಾಲಾಕಿ'

ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈಗ 'ಚಾಲಾಕಿ'

Posted By:
Subscribe to Filmibeat Kannada

ಕಳೆದ ವರ್ಷ ನಟ ಪ್ರಜ್ವಲ್ ದೇವರಾಜ್ ಅವರ ಪಾಲಿಗೆ ಅಷ್ಟೇನು ಆಶಾದಾಯಕವಾಗಿರಲಿಲ್ಲ. ಈ ವರ್ಷ ಅವರು ಸ್ವಲ್ಪ ಭಿನ್ನ ಕಥಾಹಂದರದ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅವುಗಳಲ್ಲಿ 'ಮೃಗಶಿರ' ಚಿತ್ರವೂ ಒಂದು. ಇದೀಗ ಅವರು 'ಚಾಲಾಕಿ'ಯಾಗಿದ್ದಾರೆ.

ಸ್ಯಾಂಡಲ್ ವುಡ್ ಸಿನಿಮಾ ರಂಗದವರ ಪಾಲಿಗೆ ಬಹು ಜನಪ್ರಿಯ ಹಾಗೂ ಅದೃಷ್ಟದ ತಾಣ ಬೆಂಗಳೂರು ರಾಜಾಜಿನಗರ ಮೋದಿ ಆಸ್ಪತ್ರೆ ರಸ್ತೆಯಲ್ಲಿರು ಗಣೇಶ ಗುಡಿ. ಇಲ್ಲಿ ಸೋಮವಾರ (ಫೆ.23) ಸಂಜೆ 'ಚಾಲಾಕಿ' ಬರ್ತಾ ಇದ್ದಾನೆ.

Actor Prajwal Devraj next titled as Chaalaki

ಹೌದು ಪ್ರಜ್ವಲ್ ದೇವರಾಜ್ ಅವರ 25ನೇ ಸಿನಿಮಾ ಇದು. ಇಲ್ಲಿ 'ಚಾಲಾಕಿ' ಸ್ಕ್ರಿಪ್ಟ್ ಪೂಜೆಯ ಕಾರ್ಯಕ್ರಮ ನಡೆಸಲಾಗುವುದು. ಇದೆ ದೇವಸ್ಥಾನದಲ್ಲಿ 'ಮುಂಗಾರು ಮಳೆ' ಅಂತಹ ಸಿನಿಮಾ ಸಹ ಸೆಟ್ಟೇರಿದ್ದು, ಬಳಿಕ ಆ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ.

ಇಂದು ಮೋದಿ ಆಸ್ಪತ್ರೆ ರಸ್ತೆಯಲ್ಲಿಯ ಗಣೇಶ ಗುಡಿಯಲ್ಲಿ ವಿದ್ಯುಕ್ತವಾಗಿ ಪೂಜೆ ನೆರವೇರಿಸಿಕೊಂಡು ಚಿತ್ರ ತಂಡ ಸಧ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದೆ. ಈ ಬಾರಿ ಪ್ರಜ್ವಲ್ ದೇವರಾಜ್ ಗೆ ನಾಯಕಿಯಾಗುತ್ತಿರುವವರು ಸೋನಮ್ ಶೆಟ್ಟಿ.

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ವೇಣುಗೋಪಾಲ್. ಪ್ರವೀಣ್ ಕುಮಾರ್ ಚಿತ್ರದ ನಿರ್ಮಾಪಕರು, ಪಿ ರಾಜನ್ ಅವರ ಛಾಯಾಗ್ರಹಣ, ಪ್ರೇಮ್ ಕುಮಾರ್ ಅವರ ಸಂಗೀತ, ದೀಪು ಅವರ ಸಂಕಲನ (ದೀಪು ಎಸ್ ಕುಮಾರ್ ಅಲ್ಲ) ಬಾಬು ಖಾನ್ ಅವರ ಕಲಾ ನಿರ್ದೇಶನ, ಜಾಲಹಳ್ಳಿ ನರಸಿಂಹ ಅವರ ಮೇಲ್ವಿಚಾರಣೆ ಚಿತ್ರಕ್ಕೆ ಇದೆ. (ಫಿಲ್ಮಿಬೀಟ್ ಕನ್ನಡ)

English summary
Dynamic Prince Prajwal Devaraj new movie has been titled as 'Chaalaki', directed by Venu Gopal. Actress Sonam Shetty is the heroine of the movie. It is said to be a mass action entertainer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada