»   » ಪ್ರಜ್ವಲ್-ದಿಗಂತ್ ಬೆಂಬಲಕ್ಕೆ ನಿಂತ ಲವ್ಲಿಸ್ಟಾರ್ ಪ್ರೇಮ್

ಪ್ರಜ್ವಲ್-ದಿಗಂತ್ ಬೆಂಬಲಕ್ಕೆ ನಿಂತ ಲವ್ಲಿಸ್ಟಾರ್ ಪ್ರೇಮ್

Posted By:
Subscribe to Filmibeat Kannada
Chowka Movie | Public Response | Filmibeat Kannada

ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಅವರ ಮೇಲೆ ಬಂದಿರುವ ಆರೋಪದ ಬಗ್ಗೆ ಸಹ ನಟ ಪ್ರೇಮ್ ಮಾತನಾಡಿದ್ದಾರೆ. ಸದ್ಯ, ಪ್ರಜ್ವಲ್ ದೇವರಾಜ್ ಜೊತೆ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರದಲ್ಲಿ ನಟಿಸುತ್ತಿರುವ ಪ್ರೇಮ್ ಈ ಆರೋಪವನ್ನ ನಿರಾಕರಿಸಿದ್ದಾರೆ.

ಈ ಸುದ್ದಿ ಹಬ್ಬಿಸುತ್ತಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರೇಮ್, ತಮ್ಮ ಸ್ನೇಹಿತರ ಬೆಂಬಲಕ್ಕೆ ನಿಂತಿದ್ದಾರೆ. ಈ ಪ್ರಕರಣದಲ್ಲಿ ಇವರಿಬ್ಬರ ಪಾತ್ರವಿಲ್ಲವೆಂದು ಸ್ಪಷ್ಟವಾಗಿ ಪ್ರೇಮ್ ಹೇಳುತ್ತಿದ್ದಾರೆ.

ಹಾಗಿದ್ರೆ, ಪ್ರಜ್ವಲ್ ಮತ್ತು ದಿಗಂತ್ ಮೇಲಿನ ಆರೋಪದ ಬಗ್ಗೆ ಪ್ರೇಮ್ ಏನಂದ್ರು? ಮುಂದೆ ಓದಿ.....

ಈ ಸುದ್ದಿಯಿಂದ ಬೇಸರವಾಗಿದೆ

''ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಅವರ ವಿರುದ್ಧ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಸುದ್ದಿಯಿಂದ ನನಗೆ ತುಂಬಾ ಬೇಜಾರಾಗಿದೆ. ಇದು ಅವರ ಕುಟುಂಬಗಳಿಗೂ ಕೂಡ ನೀವುಂಟು ಮಾಡಿದೆ'' - ಪ್ರೇಮ್, ನಟ

ತಂತ್ರಜ್ಞಾನದಿಂದ ಹುಡುಕಬಹುದು

''ಇಂದಿನ ತಂತ್ರಜ್ಞಾನದಲ್ಲಿ ಟವರ್ ಲೊಕೆಶನ್ ಮೂಲಕ ಪ್ರಜ್ವಲ್ ಎಲ್ಲಿದ್ದರು ಎಂಬುದನ್ನ ಹುಡುಕಬಹುದು. ಅಲ್ಲೇ ಗೊತ್ತಾಗುತ್ತೆ ಸತ್ಯ ಏನು ಅಂತ'' - ಪ್ರೇಮ್, ನಟ

ಅಪಘಾತ, ಡ್ರಗ್ಸ್ ಆರೋಪಕ್ಕೆ ಪ್ರಜ್ವಲ್ ದೇವರಾಜ್, ದಿಗಂತ್ ಸ್ಪಷ್ಟನೆ

ದಿಗಂತ್ ಕೂಡ ಇರಲಿಲ್ಲ

''ದಿಗಂತ್ ಕೂಡ ಕನಕಪುರದಲ್ಲಿ ಶೂಟಿಂಗ್ ಮಾಡುತ್ತಿದ್ದಾನೆ. ಪ್ರಜ್ವಲ್ ಮತ್ತು ದಿಗಂತ್ ಇಬ್ಬರು ಆ ಅಪಘಾತದಲ್ಲಿ ಇರಲಿಲ್ಲ ಎಂದು ಒತ್ತಿ ಹೇಳುತ್ತಿದ್ದೇನೆ'' - ಪ್ರೇಮ್, ನಟ

ಪ್ರಜ್ವಲ್ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ದಿನಕರ್

ಮರು ಪರಿಶೀಲನೆ ಮಾಡಿ

''ಆ ದಿನ ಪಬ್ ನಲ್ಲಿ ಯಾರಿದ್ದರು ಎಂಬುದಕ್ಕೆ ಸಿಸಿಟಿವಿ ಚೆಕ್ ಮಾಡಿ, ಪುನಃ ಈ ಪ್ರಕರಣ ಮರು ಪರಿಶೀಲನೆ ಮಾಡಿ. ಈ ರೀತಿಯಾದ ಸುಳ್ಳು ಸುದ್ದಿಗಳನ್ನ ಹಬ್ಬಿಸಿ ಅವರ ಭವಿಷ್ಯಕ್ಕೆ ಸಮಸ್ಯೆಯಾಗಿಸಬೇಡಿ'' - ಪ್ರೇಮ್, ನಟ

ನಟ ಪ್ರೇಮ್ ಅವರು ಮಾತನಾಡಿರುವ ವಿಡಿಯೋ ಇಲ್ಲಿದೆ

English summary
Kannada Actor, Lovely Star Prem clarifed about Kannada Actor Prajwal and Diganth's incident.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X