For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ 'ಕಬಾಲಿ' ಬರೆದ ಬಹಿರಂಗ ಪತ್ರದಲ್ಲೇನಿದೆ.?

  By Suneetha
  |

  ಪಾ ರಂಜಿತ್ ನಿರ್ದೇಶನದ 'ಕಬಾಲಿ' ಬಿಡುಗಡೆ ಆದ ನಂತರ ಅಷ್ಟಾಗಿ ಹಿಟ್ ಆಗದಿದ್ದರೂ, ರಜನಿ ಅಭಿಮಾನಿಗಳಿಗೆ ಮಾತ್ರ ತುಂಬಾ ಹಿಡಿಸಿದೆ. ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಲು ಅರ್ಧಕರ್ಧ ರಜನಿಕಾಂತ್ ಅವರ ಅಭಿಮಾನಿ ದೇವರುಗಳು ಕಾರಣ.

  'ಕಬಾಲಿ' ಶೂಟಿಂಗ್ ಕಂಪ್ಲೀಟ್ ಆಗಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ನಡೆಯುತ್ತಿರುವಾಗ ರಜನಿ ಅವರು ತಮ್ಮ ಮಗಳು ಐಶ್ವರ್ಯ ಧನುಷ್ ಅವರ ಜೊತೆ ಅಮೆರಿಕಕ್ಕೆ ಹೊರಟುಬಿಟ್ಟಿದ್ದರು.

  ಇದೀಗ ಅಮೆರಿಕ ಪ್ರವಾಸದಿಂದ ಚೆನ್ನೈಗೆ ವಾಪಸಾಗಿರುವ ರಜನಿಕಾಂತ್ 'ಕಬಾಲಿ' ಚಿತ್ರದ ಯಶಸ್ಸಿನ ಬಗ್ಗೆ ಬಾಯಿ ಬಿಟ್ಟಿದ್ದಾರೆ.['ಕಬಾಲಿ' ಚಿತ್ರಕ್ಕೆ ರಜನಿ ಪಡೆದುಕೊಂಡ ಸಂಭಾವನೆ ಎಷ್ಟು.?]

  ಜೊತೆಗೆ 'ಕಬಾಲಿ' ಚಿತ್ರ ಮಾಸ್ ಹಿಟ್ ಆಗಿದ್ದಕ್ಕೆ, ಖುದ್ದು ರಜನಿಕಾಂತ್ ಅವರೇ ತಮ್ಮ ಅಭಿಮಾನಿಗಳಿಗೆ ಹಾಗೂ ಮಾಧ್ಯಮದವರು ನೀಡಿದ ಸಪೋರ್ಟ್ ಗೆ, ಬಹಿರಂಗ ಪತ್ರ ಬರೆಯುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

  ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಕೈಯಾರೆ ಬರೆದಿರುವ ಪತ್ರವನ್ನು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

  ರಜನಿಕಾಂತ್ ಅವರ ಬಹಿರಂಗ ಪತ್ರದಲ್ಲೇನಿದೆ?, ಎಂಬುದನ್ನು ವಿವರವಾಗಿ ನೋಡಲು ಮುಂದೆ ಓದಿ...

  'ಕಬಾಲಿ' ಬಹಿರಂಗ ಪತ್ರ

  'ಕಬಾಲಿ' ಬಹಿರಂಗ ಪತ್ರ

  "ಕಬಾಲಿ' ಯಶಸ್ಸಿನ ಬಗ್ಗೆ ತಿಳಿದು ಭಾರತಕ್ಕೆ ಆಗಮಿಸಿದ್ದೇನೆ. ಇಷ್ಟು ದಿನ ವಿಶ್ರಾಂತಿ ಪಡೆಯಲು ವಿದೇಶಕ್ಕೆ ಪ್ರವಾಸ ಹೋಗಿದ್ದೆ", ಎಂದು ಸೂಪರ್ ಸ್ಟಾರ್ ರಜನಿಕಾಂತ್ ಪತ್ರದಲ್ಲಿ ಪೀಠಿಕೆ ಹಾಕಿದ್ದಾರೆ.[ಮಾಡೋಕ್ ಬೇರೆ ಕೆಲ್ಸ ಇಲ್ಲ: ಯೂಟ್ಯೂಬ್ ನಲ್ಲಿ ಕಬಾಲಿ 'ತಿಥಿ']

  ಎಲ್ಲಾರೂಕ್ಕು ನಂನ್ಡ್ರಿ (ಎಲ್ಲರಿಗೂ ಧನ್ಯವಾದ)

  ಎಲ್ಲಾರೂಕ್ಕು ನಂನ್ಡ್ರಿ (ಎಲ್ಲರಿಗೂ ಧನ್ಯವಾದ)

  "ಕಬಾಲಿ ನಿರ್ದೇಶಕರು, ನಿರ್ಮಾಪಕರು, ಸಿನಿಮಾ ತಂಡ, ಥಿಯೇಟರ್ ಮಾಲೀಕರು, ಮಾಧ್ಯಮದ ಮಿತ್ರರು ಹಾಗೂ ಕೋಟ್ಯಾಂತರ ಅಭಿಮಾನಿಗಳು ಹಾಗೂ ಜನರು ನನಗೆ ಬೆಂಬಲ ನೀಡಿದ್ದೀರಿ. ಅದಕ್ಕಾಗಿ ನಿಮಗೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು" ಎಂದು ರಜನಿಕಾಂತ್ ತಿಳಿಸಿದ್ದಾರೆ.

  ಬಿಡುವಿಲ್ಲದೆ ದಣಿದಿದ್ದೇನೆ

  ಬಿಡುವಿಲ್ಲದೆ ದಣಿದಿದ್ದೇನೆ

  "ನಾನು 'ಕಬಾಲಿ' ಮತ್ತು 'ಎಂದಿರನ್ 2.0', ಚಿತ್ರಕ್ಕೆ ಬಿಡುವಿಲ್ಲದೆ ದುಡಿದಿದ್ದರಿಂದ ನನ್ನ ದೇಹ ಮತ್ತು ಮನಸ್ಸು ತುಂಬಾ ದಣಿದಿತ್ತು. ಆ ಕಾರಣದಿಂದ ಕೊಂಚ ರಿಲ್ಯಾಕ್ಸ್ ಆಗಲು ನಾನು ನನ್ನ ಮಗಳು ಐಶ್ವರ್ಯ ಧನುಷ್ ಜೊತೆ 2 ತಿಂಗಳು ಅಮೆರಿಕದತ್ತ ಪ್ರವಾಸ ಮಾಡಿದ್ದೆ". -ರಜನಿಕಾಂತ್

  ನಾನೀಗ ಫಿಟ್ ಆಗಿದ್ದೇನೆ

  ನಾನೀಗ ಫಿಟ್ ಆಗಿದ್ದೇನೆ

  "ಇದೇ ಸಂದರ್ಭದಲ್ಲಿ ನಾನು ನನ್ನ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡೆ. ಇದೀಗ ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ. ಸದ್ಯದಲ್ಲೇ ಶಂಕರ್ ಅವರ 'ಎಂದಿರನ್ 2.0' ಚಿತ್ರದ ಶೂಟ್ ನಲ್ಲಿ ಬಾಗಿಯಾಗುತ್ತೇನೆ" ಎಂದು ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

  'ಕಬಾಲಿ' ಅಬ್ಬರ

  'ಕಬಾಲಿ' ಅಬ್ಬರ

  ರಜನಿಕಾಂತ್, ರಾಧಿಕಾ ಆಪ್ಟೆ, ಸಾಯಿ ಧನ್ಸಿಕಾ, ಕಿಶೋರ್ ಮುಂತಾದವರು ಒಂದಾಗಿ ಕಾಣಿಸಿಕೊಂಡಿದ್ದ 'ಕಬಾಲಿ' ಇದೀಗ ಬಾಕ್ಸಾಫೀಸ್ ನಲ್ಲಿ ಘರ್ಜನೆ ಮಾಡುತ್ತಿದೆ. 4 ದಿನದಲ್ಲಿ ಬರೋಬ್ಬರಿ 400 ಕೋಟಿ ಕಲೆಕ್ಷನ್ ಮಾಡಿ, 'ಸುಲ್ತಾನ್', 'ಪಿ.ಕೆ' ಮತ್ತು 'ಬಾಹುಬಲಿ' ದಾಖಲೆ ಮುರಿಯುವತ್ತ ಮುನ್ನುಗ್ಗುತ್ತಿದೆ.[4 ದಿನದ ಕಲೆಕ್ಷನ್: ರಜನಿ ಹಳೇ ದಾಖಲೆ ಮುರಿದ 'ಕಬಾಲಿ']

  English summary
  Superstar Rajinikanth expressed his gratitude to his fans, Kabali producer 'Kalaipuli' S Thanu, director Pa Ranjith, theatre owners and distributors for the grand success of his latest film 'Kabali'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X