ಮಂಡ್ಯ ಟು ಮುಂಬೈ ಹೋಗ್ತಿದ್ದ ರಾಕೇಶ್ ಗೆ ಗಾಯ
ಸಿನಿಮಾದ ನಟರು ಶೂಟಿಂಗ್ ನಲ್ಲಿ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ರೆ ದೊಡ್ಡ ಸುದ್ದಿಯಾಗುತ್ತೆ. ಮಾಧ್ಯಮಗಳು ಧಾವಿಸಿ ಆಸ್ಪತ್ರೆಯ ಮುಂದೆ ಕಾದು ನಿಂತು ಸುದ್ದಿಯನ್ನ ಕೊಟ್ಟು ಅಭಿಮಾನಿಗಳ ಆತಂಕ ಕಡಿಮೆಯಾಗೋ ಹಾಗೆ ಮಾಡ್ತಾರೆ. ಇದರ ಜೊತೆಗೆ ಆ ನಟನಿಗೂ ಕೂಡ ದೊಡ್ಡ ಮಟ್ಟದ ಪಬ್ಲಿಸಿಟಿ ಸಿಕ್ಕಿಬಿಟ್ಟಿರುತ್ತೆ.
ಆದರೆ ಇತ್ತೀಚೆಗೆ 'ಜೋಶ್' ರಾಕೇಶ್ ಫೈಟ್ ಶೂಟಿಂಗ್ ನಲ್ಲಿ ಬಿದ್ದು ಗಾಯವಾದರೂ ಸುದ್ದಿಯೇ ಆಗಿಲ್ಲ. ಜೋಶ್ ಹುಡುಗ ರಾಕೇಶ್ ನಾಲ್ಕಾರು ಸಿನಿಮಾಗಳನ್ನ ಮಾಡಿ ಪ್ರಬುದ್ಧ ನಟನಾಗಿ ಬೆಳೀತಾ ಇದ್ದರೂ ತನ್ನನ್ನ ಸ್ಟಾರ್ ಅಂತ ಅಂದುಕೊಳ್ಳೋದೇ ಇಲ್ಲ. ['ಕೊಲವೆರಿ ಡಿ' ಶೈಲಿಯಲ್ಲಿ ಜೋಶ್ ರಾಕೇಶ್ ಹಾಡು]

ಈ ಹಿಂದೆ 'ಆನೆಕೆರೆ ಬೀದಿ' ಅಂತ ಶುರುವಾದ ಚಿತ್ರ ಈಗ 'ಮಂಡ್ಯ ಟು ಮುಂಬೈ' ಅನ್ನೋ ಟೈಟಲ್ ಇಟ್ಕೊಂಡು ಶೂಟಿಂಗ್ ನಡೆಸ್ತಿದೆ. ಚಿತ್ರದ ಶೂಟಿಂಗ್ ಗೆ ತೊಂದರೆಯಾಗಬಾರ್ದು ಅಂತ ರಾಕೇಶ್ ನೋವನ್ನೂ ಸಹಿಸಿಕೊಂಡು ಸುಮ್ಮನಾಗಿದ್ದಾರೆ. ಸಣ್ಣ ತರಚಿದ ಗಾಯಕ್ಕೇ ಸಿಕ್ಕಾಪಟ್ಟೆ ಪಬ್ಲಿಸಿಟಿ ಪಡ್ಕೊಳ್ಳೋ ದೊಡ್ಡ ದೊಡ್ಡ ಸ್ಟಾರ್ ಗಳ ಎದುರು ಜೋಶ್ ಹುಡುಗ ರಾಕೇಶ್ ಭಿನ್ನ ಅನ್ನಿಸಿಕೊಳ್ತಾರೆ ಅಲ್ವಾ?


Click it and Unblock the Notifications











