For Quick Alerts
  ALLOW NOTIFICATIONS  
  For Daily Alerts

  ಶಿವನಿಗಾಗಿ ಪಂಚೆ ಕಟ್ಟಿದ ರಿಷಬ್‌: ಇದು ಶೆಟ್ರ ಪಂಚೆ ರಹಸ್ಯ

  |

  'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ನಂತಹ ರಾಷ್ಟ ಪ್ರಶಸ್ತಿ ಪುರಸ್ಕೃತ ಚಿತ್ರಗಳನ್ನು ನೀಡಿರುವ ರಿಷಬ್‌ ಶೆಟ್ಟಿ ಇದೀಗ ಮತ್ತೊಂದು ಹೊಸ ಪ್ರಯೋಗ ಮಾಡಿ ಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ. 'ರಿಕ್ಕಿ', 'ಕಿರಿಕ್‌ ಪಾರ್ಟಿ', 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು', ಬಳಿಕ ರಿಷಬ್ ಶೆಟ್ಟಿ ನಿದೇರ್ಶಕನ ಮಾಡಿರುವ ನಾಲ್ಕನೇ ಚಿತ್ರ 'ಕಾಂತಾರ' ಸಪ್ಟೆಂಬರ್‌ 30ರಂದು ಬಿಡುಗಡೆಯಾಗಲಿದೆ.

  'ಯುವರತ್ನ', 'ರಾಜಕುಮಾರ' ಸೇರಿದಂತೆ ಪುನೀತ್‌ ಅಭಿನಯದ ಮೂರು ಚಿತ್ರಗಳಿಗೆ ಹಾಗೂ 'ಕೆಜಿಎಫ್ ', 'ಕೆಜಿಎಫ್‌ ಚಾಪ್ಟರ್‌ 2' ಸೇರಿ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಮೂರು ಚಿತ್ರಗಳಿಗೆ ಬಂಡವಾಳ ಹಾಕಿರುವ ಹೊಂಬಾಳೆ ಫಿಲ್ಮ್ಸ್ ಇದೇ ಮೊದಲ ಬಾರಿಗೆ ರಿಷಬ್‌ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹಾಕಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಅದ್ಧೂರಿಯಾಗಿ ಮೂಡಿಬಂದಿರುವ ಕಾಂತಾರ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಬಹಳಷ್ಟು ನಿರೀಕ್ಷೆಯಿದೆ.

  'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?

  ಕಾಂತಾರ ಚಿತ್ರ ಟ್ರೈಲರ್‌, ಪೋಸ್ಟರ್‌ ಹಾಗೂ ಮೇಕಿಂಗ್‌ ವಿಡಿಯೋಗಳಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಹೊಸ ಹೊಸ ಪ್ರಯೋಗಗಳ ಮೂಲಕ ಚಿತ್ರತಂಡ 'ಕಾಂತಾರ' ಪ್ರಚಾರದಲ್ಲಿ ತೊಡಗಿಕೊಂಡಿದೆ. 'ಕಾಂತಾರ' ಇದೊಂದು ದಂತಕತೆ ಎಂದಿರುವ ಚಿತ್ರತಂಡ 'ದಿ ವಲ್ಡ್‌ ಆಫ್‌ ಕಾಂತಾರ' ಹೆಸರಿನಲ್ಲಿ ಮೇಕಿಂಗ್ ವಿಡಿಯೋ ಹಾಗೂ ಚಿತ್ರದ ಪ್ರಮುಖ ಪಾತ್ರಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ದುಪ್ಪಟ್ಟುಗೊಳಿಸಿದೆ.

  ನೋಡುಗರ ಕುತೂಹಲ ಹೆಚ್ಚಿಸಿದ ಪಂಚೆ ರಹಸ್ಯ

  ನೋಡುಗರ ಕುತೂಹಲ ಹೆಚ್ಚಿಸಿದ ಪಂಚೆ ರಹಸ್ಯ

  ಚಿತ್ರದ ನಾಯಕ ರಿಷಬ್‌ ಶೆಟ್ಟಿ, ನಾಯಕಿ ಸಪ್ತಮಿ ಗೌಡ, ಹಾಗೂ ಪ್ರಮುಖ ಪಾತ್ರಗಳಲ್ಲಿ ಗುರುತಿಸಿಕೊಂಡಿರುವ ಎಲ್ಲಾ ಕಲಾವಿದರು ಸದ್ಯ 'ಕಾಂತಾರ' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 'ಕಾಂತಾರ' ಚಿತ್ರತಂಡದ ಅನೇಕ ಸಂದರ್ಶನಗಳು ವೈರಲ್‌ ಆಗುತ್ತಿದ್ದು, ನೋಡುಗರು ಎಲ್ಲಾ ಸಂದರ್ಶನದಲ್ಲಿಯೂ ಸಾಮಾನ್ಯ ವಿಚಾರವೊಂದನ್ನು ಗುರುತಿಸಿದ್ದಾರೆ. ಎಲ್ಲಾ ಸಂದರ್ಶನಗಳಲ್ಲೂ ಚಿತ್ರದ ನಾಯಕ ನಟ ರಿಷಬ್‌ ಶೆಟ್ಟಿ ಪಂಚೆ ಧರಿಸಿ ಗುರುತಿಸಿಕೊಂಡಿದ್ದಾರೆ. ಸ್ವತಃ ಹೊಂಬಾಳೆ ಫಿಲ್ಮ್ಸ್ ನಲ್ಲಿ ಬಿಡುಗೆಡೆಗೊಳಿಸಲಾದ ವಿಡಿಯೋದಲ್ಲಿ ಕೂಡ ರಿಷಬ್‌ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ.

  'ಕಾಂತಾರ' ಎಂದರೇನು? ಹೆಸರು ಸೂಚಿಸಿದ್ದು ಯಾರು?'ಕಾಂತಾರ' ಎಂದರೇನು? ಹೆಸರು ಸೂಚಿಸಿದ್ದು ಯಾರು?

  ರಿಷಬ್‌ ಪಂಚೆಯ ಹಿಂದೆ ಒಂದು ಮಹತ್ತರ ಉದ್ದೇಶ

  ರಿಷಬ್‌ ಪಂಚೆಯ ಹಿಂದೆ ಒಂದು ಮಹತ್ತರ ಉದ್ದೇಶ

  ಸದ್ಯ ಪ್ಯಾಂಟುಗಳನ್ನು ಮೂಟೆ ಕಟ್ಟಿರುವ ರಿಷಬ್‌ ಚಿತ್ರದ ಪ್ರಚಾರದ ಎಲ್ಲಾ ಕಾರ್ಯಕ್ರಗಳಲ್ಲಿ ಪಂಚೆ ಧರಿಸಿ ಹಾಜರಾಗಿದ್ದರು. ಈ ವಿಚಾರವನ್ನು ಕೆಲ ಪ್ರೇಕ್ಷಕರು ಗುರುತಿಸಿದ್ದು, ಗರುಡ ಗಮನ ವೃಷಭ ವಾಹನ ನಿರ್ದೇಶಕ ರಾಜ್‌ ಬಿ. ಶೆಟ್ಟಿಯವರಂತೆ ರಿಷಬ್‌ ಕೂಡ ಪಂಚೆಯ ಹಾದಿ ಹಿಡಿದಿದ್ದಾರಾ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಹಲವು ಗುಸು ಗುಸು ಚರ್ಚೆಗಳು ಕೂಡ ಆರಂಭವಾಗಿದೆ. ಆದರೆ ರಿಷಬ್‌ ಪಂಚೆಯ ಹಿಂದೆ ಒಂದು ಮಹತ್ತರ ಉದ್ದೇಶವಿರುವುದು ತಿಳಿದು ಬಂದಿದೆ.

  ಕಂಬಳ, ಭೂತಕೋಲ..ಇನ್ನು ಏನೇನಿದೆ ಕಾಂತಾರದಲ್ಲಿ

  ಕಂಬಳ, ಭೂತಕೋಲ..ಇನ್ನು ಏನೇನಿದೆ ಕಾಂತಾರದಲ್ಲಿ

  'ಕಾಂತಾರ ಸಿನಿಮಾವು' ಕರಾವಳಿ ಭಾಗದ ಸಂಸ್ಕೃತಿಗಳನ್ನು ಒಳಗೂಡಿಸಿಕೊಂಡು ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸಂಘರ್ಷದ ಬಗ್ಗೆ ತಿಳಿಸಲು ಹೊರಟಿರುವ ಚಿತ್ರವಾಗಿದೆ. ಚಿತ್ರದಲ್ಲಿ ಪ್ರಮುಖವಾಗಿ ಕರಾವಳಿಯ ಕಂಬಳ, ಭೂತಕೋಲ, ನಾಗಾರಾಧನೆ ಸೇರಿದಂತೆ ಕರಾವಳಿಯಲ್ಲಿ ನಡೆಯುವ ಪ್ರಮುಖ ಆಚರಣೆಗಳನ್ನು ವಿಸ್ತ್ರತವಾಗಿ ತೋರಿಸಲಾಗಿದೆ. ಕರಾವಳಿಯ ಸಂಸ್ಕಾರ ಸಂಸ್ಕೃತಿಯ ಸುತ್ತಲೇ ಚಿತ್ರದ ಕತೆ ಸುತ್ತಲಿದೆ. ಹೀಗಾಗಿ ಕಾಂತಾರ ಬಿಡುಗಡೆಯ ಪ್ರಚಾರದಲ್ಲಿರುವ ಚಿತ್ರತಂಡ ಅಲ್ಲಿನ ಸಂಸ್ಕೃತಿಯನ್ನೇ ಅನುಸರಿಸುತ್ತಿದೆ.

  ಉತ್ತರ ಭಾರತದಲ್ಲಿ '777 ಚಾರ್ಲಿ' ಕ್ರೇಜ್: ಅಬ್ಬಬ್ಬಾ ಇಂದಿಗೂ ಥಿಯೇಟರ್‌ನಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ!ಉತ್ತರ ಭಾರತದಲ್ಲಿ '777 ಚಾರ್ಲಿ' ಕ್ರೇಜ್: ಅಬ್ಬಬ್ಬಾ ಇಂದಿಗೂ ಥಿಯೇಟರ್‌ನಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ!

  ಸೀರೆ ಧರಿಸಿ ಪ್ರಚಾರ ನಡೆಸಿದ ಸಪ್ತಮಿ ಗೌಡ

  ಸೀರೆ ಧರಿಸಿ ಪ್ರಚಾರ ನಡೆಸಿದ ಸಪ್ತಮಿ ಗೌಡ

  'ಕಾಂತಾರ' ಚಿತ್ರದಲ್ಲಿ ರಿಷಬ್‌ ಶೆಟ್ಟಿ ಶಿವ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರವು ಕರಾವಳಿಯ ಯುವಕನೊಬ್ಬನ ಜೀವನ ಶೈಲಿಯನ್ನು ಬಿಚ್ಚಿಡುತ್ತಾ ಹೋಗುತ್ತದೆ. ಹೀಗಾಗಿ ಶಿವನ ಪಾತ್ರವನ್ನು ಪ್ರತಿನಿಧಿಸುವ ರೀತಿಯಲ್ಲಿ ರಿಷಬ್‌ ಶೆಟ್ಟಿ ಚಿತ್ರದ ಪ್ರಚಾರದಲ್ಲಿ ಪಂಚೆ ಧರಿಸುತ್ತಿದ್ದಾರೆ. ಜೊತೆಗೆ ಇದು ಕರಾವಳಿ ಸಂಸ್ಕೃತಿಯ ಒಂದು ಭಾಗ ಎನ್ನುವುದನ್ನು ಈ ಮೂಲಕ ತಿಳಿಸುತ್ತಿದ್ದಾರೆ. ಇನ್ನು ಚಿತ್ರದ ನಾಯಕಿ ಸಪ್ತಮಿ ಗೌಡ ಕೂಡ 'ಕಾಂತಾರ' ಪ್ರಚಾರದ ಎಲ್ಲಾ ಕಾರ್ಯಕ್ರಮದಲ್ಲಿಯೂ, ಎಲ್ಲಾ ಸಂದರ್ಶನದಲ್ಲಿಯೂ ಸೀರೆಯನ್ನೇ ಧರಿಸಿದ್ದಾರೆ. ಈ ಮೂಲಕ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

  English summary
  Sandalwood actor Rishab shetty represent karavali culture in Kantara movie promotion.
  Wednesday, September 28, 2022, 17:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X