»   » 'ಮಫ್ತಿ' ಚಿತ್ರದ ನಂತರ ದೊಡ್ಡ ಸಾಹಸಕ್ಕೆ ಕೈ ಹಾಕಿದ ಶ್ರೀಮುರಳಿ

'ಮಫ್ತಿ' ಚಿತ್ರದ ನಂತರ ದೊಡ್ಡ ಸಾಹಸಕ್ಕೆ ಕೈ ಹಾಕಿದ ಶ್ರೀಮುರಳಿ

Posted By:
Subscribe to Filmibeat Kannada

ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಸದ್ಯ, 'ಮಫ್ತಿ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಹೀಗಿರುವಾಗ, 'ಮಫ್ತಿ' ಚಿತ್ರದ ನಂತರ ಶ್ರೀ ಮುರಳಿ ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕಿದ್ದಾರಂತೆ.

ದರ್ಶನ್-ಸುದೀಪ್ ಸ್ನೇಹ ಸಮರದ ಮಧ್ಯೆ ಶ್ರೀಮುರಳಿ 'ಉಗ್ರ'ಪ್ರತಾಪ!

'ಉಗ್ರಂ' ಅಂತಹ ದೊಡ್ಡ ಯಶಸ್ಸಿನ ನಂತರ ವಿಭಿನ್ನ ಕಥೆಗಳನ್ನ ಆಯ್ಕೆ ಮಾಡಿಕೊಳ್ಳುತ್ತಿರುವ ಶ್ರೀಮುರಳಿ ಈಗ ಮತ್ತೊಂದು ಡಿಫ್ರೆಂಟ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಕಥೆಯೇ ವಿಭಿನ್ನವೆನಿಸಿಕೊಂಡಿದೆ. ಈ ವಿಭಿನ್ನ ಕಥೆ ಜೊತೆಗೆ ನೂತನ ಸಾಹಸಕ್ಕೆ ಶ್ರೀ ಮುರುಳಿ ಮುಂದಾಗಿದ್ದಾರಂತೆ.

ಅಂದ್ಹಾಗೆ, 'ಮಫ್ತಿ' ಚಿತ್ರದ ನಂತರ ಶ್ರೀ ಮುರಳಿ ಹೊಸ ಸಿನಿಮಾ ಯಾವುದು.? ಆ ಚಿತ್ರದ ವಿಶೇಷತೆಗಳೇನು ಎಂಬುದನ್ನ ಮುಂದೆ ಓದಿ....

ಹೊಸ ಚಿತ್ರದ ಪ್ಲಾನಿಂಗ್

'ಮಫ್ತಿ' ಚಿತ್ರದ ನಂತರ ಶ್ರೀ ಮುರಳಿ ಯಾವ ಸಿನಿಮಾ ಮಾಡ್ತಾರೆ ಎಂಬ ನಿರೀಕ್ಷೆ ಅನೇಕರಿಗೆ ಇತ್ತು. ಇದಕ್ಕೀಗ ಉತ್ತರ ಸಿಕ್ಕಿದೆ. 'ಮಫ್ತಿ' ರಿಲೀಸ್ ಆಗುವುದಕ್ಕೂ ಮೊದಲೇ ಹೆಸರಿಡದ ಚಿತ್ರವೊಂದಕ್ಕೆ ರೋರಿಂಗ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ದೊಡ್ಡ ಸಾಹಸ

ಈ ಹೊಸ ಚಿತ್ರದಲ್ಲಿ ಶ್ರೀಮುರಳಿ ದೊಡ್ಡ ಸಾಹಸ ಮಾಡುವುದಕ್ಕೆ ಮುಂದಾಗಿದ್ದಾರೆ. ಅದೇನಪ್ಪಾ ಅಂದ್ರೆ,
ಈ ಚಿತ್ರದಲ್ಲಿ ಬರೋಬ್ಬರಿ 100 ಪಾತ್ರಗಳು ಇರಲಿದ್ದು, ಎಲ್ಲ ಪಾತ್ರಗಳು ತುಂಬಾನೇ ಪ್ರಮುಖವಾಗಿರಲಿದೆಯಂತೆ.

ವಿಭಿನ್ನ ಕಥೆ

ಈ ಚಿತ್ರದ ಕಥೆ ತುಂಬನೇ ವಿಭಿನ್ನವಾಗಿದೆಯಂತೆ. ನಾಯಕ, ನಾಯಕಿ ಪಾತ್ರದಷ್ಟೇ ಪ್ರಾಮುಖ್ಯತೆ ಚಿತ್ರದ 100 ಪಾತ್ರಗಳಿಗೂ ಇದೆಯಂತೆ. ಈ ಮೂಲಕ ಎಲ್ಲ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ತೆರೆ ಮೇಲೆ ತರಲು ನಿರ್ಧರಿಸಿದ್ದಾರಂತೆ.

ಜಯಣ್ಣ ಬಂಡವಾಳ

ಈ ಚಿತ್ರ ಜಯಣ್ಣ ಕಂಬೈನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿದೆಯಂತೆ. ಇನ್ನು ನಿರ್ದೇಶಕರ ಹೆಸರನ್ನು ಸದ್ಯದಲ್ಲೇ ಘೋಷಣೆ ಮಾಡಲಾಗುವುದಂತೆ.

ಚಿತ್ರೀಕರಣ ಯಾವಾಗ?

ಶ್ರೀ ಮುರಳಿ ಅವರ ಈ ಹೊಸ ಸಿನಿಮಾ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಶುರುವಾಗುವ ಸಾಧ್ಯತೆ ಇದೆ.

'ಮಫ್ತಿ' ಬಳಿಕ ಚಿತ್ರದ ವಿವರ

'ಮಫ್ತಿ'ಯ ಕೊನೆಯ ಹಂತದ ಶೂಟಿಂಗ್ ನಲ್ಲಿ ಶ್ರೀ ಮುರಳಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಬಿಡುಗಡೆಯ ನಂತರ ಈ ಹೊಸ ಚಿತ್ರದ ಬಗ್ಗೆ ಎಲ್ಲ ವಿವರಗಳನ್ನು ಚಿತ್ರತಂಡ ನೀಡಲಿದೆಯಂತೆ.

English summary
Actor 'Sri Murali' Planning to do a another different Movie after Mufti.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada