»   » ನಟ ಸುನಿಲ್ ಶೆಟ್ಟಿ ಕನ್ನಡಕ್ಕೆ ಬರೋದು ಕನ್ಫರ್ಮ್

ನಟ ಸುನಿಲ್ ಶೆಟ್ಟಿ ಕನ್ನಡಕ್ಕೆ ಬರೋದು ಕನ್ಫರ್ಮ್

By: ಜೀವನರಸಿಕ
Subscribe to Filmibeat Kannada

ನಮ್ಮ ಕರಾವಳಿಯ ಕಂಚಿನ ಕಂಠ ಸುನಿಲ್ ಶೆಟ್ಟಿ ಬಾಲಿವುಡ್ ಸಿನಿಪ್ರೇಮಿಗಳ ಮನಗೆದ್ದಿರೋ ನಟ. ಸುನಿಲ್ ಶೆಟ್ಟಿಯನ್ನ ಕನ್ನಡಕ್ಕೆ ತರೋಕೆ ಅದೆಷ್ಟೋ ಚಿತ್ರತಂಡಗಳು ಪ್ರಯತ್ನಿಸ್ತಾನೇ ಇದ್ದವು. ಆದರೆ ಈಗ ಸುನಿಲ್ ಶೆಟ್ಟಿ ಕನ್ನಡಕ್ಕೆ ಬರೋದು ಪಕ್ಕಾ. ಅದೂ ಹಾರರ್ ಸಿನಿಮಾ ಮೂಲಕ.

ಇತ್ತೀಚೆಗೆ ಮುಹೂರ್ತ ಮುಗಿಸಿದ ಹಾರರ್ ಸಿನಿಮಾ 'ಅಲೋನ್'ನಲ್ಲಿ ಸುನಿಲ್ ಶೆಟ್ಟಿ ಕನ್ನಡಕ್ಕೆ ಎಂಟ್ರಿಕೊಡ್ತಿದ್ದಾರೆ. ಪಾತ್ರ ಏನು ಅನ್ನೋದು ಗೊತ್ತಾಗದಿದ್ರೂ ಈ ಬಾಲಿವುಡ್ ನಟನನ್ನ ಕನ್ನಡದಲ್ಲಿ ನೋಡೋದೆ ಥ್ರಿಲ್ಲಿಂಗ್ ಅನುಭವ. [ತುಂಡುಡುಗೆಯಲ್ಲಿ ಹುಟ್ಟುಮಚ್ಚೆ ಪ್ರದರ್ಶಿಸಿದ ನಿಕೇಶಾ]

Actor Sunil Shetty

'ಅಲೋನ್' ಚಿತ್ರವನ್ನ ಜೆಕೆಎಸ್ ನಿರ್ದೇಶಿಸ್ತಾ ಇದ್ದು. ಶ್ರೀನಗರ ಕಿಟ್ಟಿ ಅಭಿನಯದ 'ಸುಬ್ರಮಣಿ' ಚಿತ್ರವನ್ನ ಮುಗಿಸಿದ ಕೂಡ್ಲೇ 'ಅಲೋನ್' ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ ಜೆಕೆಎಸ್. ಇಷ್ಟಕ್ಕೂ ಸುನೀಲ್ ಶೆಟ್ಟಿ ದೊಡ್ಡ ಪಾತ್ರ ಮಾಡೋದು ಡೌಟು. ಚಿತ್ರದಲ್ಲಿ ಅವರದು ಪೊಲೀಸ್ ಅಧಿಕಾರಿ ಪಾತ್ರ ಎನ್ನಲಾಗಿದೆ.

ಹಾರರ್ ಸಿನಿಮಾದಲ್ಲೊಂದು ಪವರ್ ಫುಲ್ ಪಾತ್ರ ಮಾಡೋ ಸಾಧ್ಯತೆಯಿದ್ದು ಸುನೀಲ್ ಶೆಟ್ಟಿ ಡೇಟ್ಸ್ ಕೂಡ ಪಕ್ಕಾ ಆಗಿದೆ. ಒಟ್ಟಾರೆ ಬಾಲಿವುಡ್ ನ ಮತ್ತೊಬ್ಬ ನಟ ಕನ್ನಡಕ್ಕೆ ಬರ್ತಿರೋದು ಸಂತಸದ ಸಂಗತಿ.

ಸದ್ಯಕ್ಕೆ ಮಂಗಳೂರಿನ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರವನ್ನು ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ಬಿಡುಗಡೆ ಮಾಡಲಾಗುತ್ತದೆ. ಸಮುದ್ರ ತೀರದ ಒಂಟಿ ಮನೆಯಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಚಿತ್ರಕ್ಕಿದೆ. ನಿಕೇಶಾ ಪಟೇಲ್ ಮತ್ತು ಕಾಮ್ನಾ ಜೇಠ್ಮಲಾನಿ ಚಿತ್ರದ ನಾಯಕಿಯರು.

ಸುಜಿತ್ ಶೆಟ್ಟಿ ಸಂಗೀತ ಚಿತ್ರಕ್ಕಿದ್ದು, ಜೈ ಆನಂದ್ ಅವರ ಛಾಯಾಗ್ರಹಣ 'ಅಲೋನ್' ಚಿತ್ರಕ್ಕಿದೆ. ಅನಂತ್ ಮತ್ತು ರಾಮಲಿಂಗಯ್ಯ ಅವರು ಈ ಚಿತ್ರವನ್ನು ಬಹಳ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕ ಜೆಕೆಎಸ್.

English summary
Bollywood actor Sunil Shetty makes an appearance as cop in Kannada film ‘Alone’ in the direction of JKS. It's a trilingual suspense thriller. Nikesha Patel and Kamana Jethmalani playing lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada