»   » 'ಚೌಕ'ದಿಂದ ಚಿರು ಹೋದ್ರು, ಚಿನ್ನಾರಿ ಮುತ್ತಾ ಬಂದ್ರು

'ಚೌಕ'ದಿಂದ ಚಿರು ಹೋದ್ರು, ಚಿನ್ನಾರಿ ಮುತ್ತಾ ಬಂದ್ರು

Posted By:
Subscribe to Filmibeat Kannada

ಹಿರಿಯ ನಟ ಕಮ್ ನಿರ್ಮಾಪಕ ಹಾಗೂ ಸ್ಯಾಂಡಲ್ ವುಡ್ ನ ಕುಳ್ಳ ಅಂತಾನೇ ಖ್ಯಾತಿ ಗಳಿಸಿರುವ ನಟ ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಹುತಾರಾಗಣ ಇರುವ 'ಚೌಕ' ಚಿತ್ರ ಹೊಸ ವರ್ಷದ ದಿನದಂದು (ಜನವರಿ 1) ಸದ್ದಿಲ್ಲದೆ ಶೂಟಿಂಗ್ ಆರಂಭಿಸಿದೆ.

ನಟ ತರುಣ್ ಸುಧೀರ್ ಅವರು ಇದೇ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳುತ್ತಿರುವ 'ಚೌಕ'ದಲ್ಲಿ ಲವ್ಲಿ ಸ್ಟಾರ್ ಪ್ರೇಮ್, ದೂದ್ ಪೇಡಾ ದಿಗಂತ್, ವಿಜಯ ರಾಘವೇಂದ್ರ ಮತ್ತು ಪ್ರಜ್ವಲ್ ದೇವರಾಜ್ ಮುಂತಾದವರು ಮೊಟ್ಟ ಮೊದಲ ಬಾರಿಗೆ ಒಂದಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ.[ದೀಪಾವಳಿ ಹಬ್ಬದ ಉಡುಗೊರೆ ; 'ರಾಮ್ ಲೀಲಾ' ತೆರೆಗೆ ]

Actor Vijay Raghavendra replaced by Chiranjeevi Sarja in 'Chowka'

ಈ ಮೊದಲು ಬಹುತಾರಾಗಣ ಇರುವ ಈ ಸಿನಿಮಾದಲ್ಲಿ ನಟ ಚಿರಂಜೀವಿ ಸರ್ಜಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಚಿರು ಸರ್ಜಾ ಅವರು ಮಾಡಬೇಕಿದ್ದ ಪಾತ್ರ ಇದೀಗ ವಿಜಯ ರಾಘವೇಂದ್ರ ಅವರ ಪಾಲಾಗಿದೆ.[ವಿಮರ್ಶೆ: ಹಳ್ಳಿ ಸೊಗಡಿನ ಕಲರ್ ಫುಲ್ 'ವಂಶೋದ್ಧಾರಕ' ]

ಈಗಾಗಲೇ ನಟ ವಿಜಯ ರಾಘವೇಂದ್ರ ಅವರು ಸುಮಾರು ಹೊಸ ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದು, ಇದು ಅವರ ಹೊಸ ಪ್ರಾಜೆಕ್ಟ್ ಗೆ ಮತ್ತೊಂದು ಸೇರ್ಪಡೆ. ಅಂದಹಾಗೆ 'ಆಟಗಾರ' [ದ್ವೀಪದ ನಡುವೆ 'ಆಟಗಾರನ' ನೋಟ ಚೆನ್ನ, ಎಲ್ಲವೂ ಇಲ್ಲಿ ವಿಭಿನ್ನ]ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಚಿರು ಅವರು ಬದಲಾಗಿದ್ದೇಕೆ ಎಂಬ ಪ್ರಶ್ನೆಗೆ ಇನ್ನು ಉತ್ತರ ದೊರೆತಿಲ್ಲ.

Actor Vijay Raghavendra replaced by Chiranjeevi Sarja in 'Chowka'

ದ್ವಾರಕೀಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 50 ನೇ ಸಿನಿಮಾ ಇದಾಗಿದ್ದು, ಹಿರಿಯ ನಟ ದ್ವಾರಕೀಶ್ ಅವರ ಪುತ್ರ ಯೋಗೀಶ್ ದ್ವಾರಕೀಶ್ ಅವರು 'ಚೌಕ'ಕ್ಕೆ ಬಂಡವಾಳ ಹೂಡಲಿದ್ದಾರೆ. ಜೊತೆಗೆ 'ಚೌಕ' ಚಿತ್ರದ ಕಥೆಯನ್ನು ನಿರ್ದೇಶಕ ತರುಣ್ ಸುಧೀರ್ ಅವರೇ ಬರೆದಿದ್ದಾರೆ.

English summary
Kannada Actor Vijay Raghavendra replaced by Chiranjeevi Sarja in Dwarakish's Kannada Movie 'Chowka'. The movie is directed by Tarun Sudhir.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada