For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರಣಿತಾ ಮಗಳ ಹೆಸ್ರು 'ಆರ್ನಾ': ಹೆಸರಲ್ಲಿ ವಿಶೇಷವಾದ ಅರ್ಥ ಅಡಗಿದೆ!

  |

  ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪ್ರಣಿತಾ ಸುಭಾಷ್ ಇತ್ತೀಚೆಗೆ ತಾನು ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಈ ಬಗ್ಗೆ ಆಗಾಗ ಫೋಟೋ ಹಂಚಿಕೊಳ್ಳುವ ಮೂಲಕ ಮಾಹಿತಿಯನ್ನೂ ಶೇರ್ ಮಾಡಿಕೊಂಡಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಣಿತಾ ಈಗ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

  ಪ್ರಣಿತಾ ಸುಭಾಷ್ ಸೌತ್ ಸಿನಿಮಾರಂಗದಲ್ಲಿ ಹಲವು ವರ್ಷಗಳು ಕೆಲಸ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಪ್ರಣಿತಾ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇನ್ನು ಇತ್ತೀಚೆಗೆ ಅವರು ಸಿನಿಮಾಗಳ ಬದಲಿಗೆ ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿ ಗಮನ ಸೆಳೆಯುತ್ತಿದ್ದಾರೆ.

  ವೈರಲ್ ಆಯ್ತು ನಟಿ ಪ್ರಣಿತಾ ಸುಭಾಷ್ ಬೇಬಿ ಬಂಪ್ ಪೋಟೊಶೂಟ್ವೈರಲ್ ಆಯ್ತು ನಟಿ ಪ್ರಣಿತಾ ಸುಭಾಷ್ ಬೇಬಿ ಬಂಪ್ ಪೋಟೊಶೂಟ್

  ಸರಳವಾಗಿ ಮನೆಯವರ ಸಮ್ಮುಖದಲ್ಲಿ ನಟಿ ಪ್ರಣಿತಾ ಸುಭಾಷ್ ಮದುವೆ ಆದರು. ಹೆಚ್ಚು ಸುದ್ದಿ ಮಾಡದೇ, ಗೌಪ್ಯವಾಗಿ ಆಪ್ತರ ಸಮ್ಮುಖದಲ್ಲಿ ಮದುವೆ ಆಗಿದ್ದರು ಪ್ರಣಿತಾ. ಮದುವೆ ಬಳಿಕ ಮಗುವಿಗೆ ಜನ್ಮ ನೀಡಿ ಸುದ್ದಿ ಆಗಿದ್ದಾರೆ. ಸದ್ಯ ಮುದ್ದು ಮಗಳ ಫೋಟೋ ಹಂಚಿಕೊಂಡು, ಪ್ರಣಿತಾ ಮಗಳ ಹೆಸರು ರಿವೀಲ್ ಮಾಡಿದ್ದಾರೆ.

  ಮಗಳ ಜೊತೆಗೆ ಪ್ರಣಿತಾ ಫೊಟೋ ಶೂಟ್!

  ಮಗಳ ಜೊತೆಗೆ ಪ್ರಣಿತಾ ಫೊಟೋ ಶೂಟ್!

  ಪ್ರಣಿತಾ ಸೋಷಿಯಲ್ ಮೀಡಿಯಾದಲ್ಲಿ ಮುದ್ದು ಮಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಣಿತಾ ಈ ಮೊದಲು ಮಗು ಹುಟ್ಟಿದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಕಂದನ ಫೊಟೋವನ್ನು ಎಲ್ಲೂ ಕೂಡ ರಿವೀಲ್ ಮಾಡಿರಲಿಲ್ಲ. ಈಗ ವಿಶೇಷವಾಗಿ ಫೋಟೋ ಶೂಟ್ ಮಾಡಿಸಿ, ಮಗುವಿನ ಫೊಟೋ ಹಂಚಿಕೊಂಡಿದ್ದಾರೆ.

  ಆರ್ನಾ ಎಂದರೆ ದೊಡ್ಡ ಶಕ್ತಿ!

  ನಟಿ ಪ್ರಣಿತಾ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ. ಕಂದನ ಮುದ್ದು ಫೋಟೊಗಳನ್ನು ಹಂಚಿಕೊಂಡು ಪ್ರಣಿತಾ ತಮ್ಮ ಮಗಳ ಹೆಸರನ್ನು ಹಂಚಿಕೊಂಡಿದ್ದಾರೆ. ಪ್ರಣಿತಾ ಮಗಳ ಹೆಸರು 'ಆರ್ನಾ'. ಈ ಪೋಸ್ಟ್​ನಲ್ಲಿ 'ಆರ್ನಾ'ಳನ್ನು ಪರಿಚಯ ಮಾಡಿಸುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಆರ್ನಾ ಎಂದರೆ 'ಬೆಟ್ಟದಂಹತ ಶಕ್ತಿ' ಎನ್ನುವ ಅರ್ಥ ಬರುತ್ತದೆ. ಪ್ರಣಿತಾ ಮಗಳ ಫೋಟೋ ನೋಡಿ ಅಭಿಮಾನಿಗಳು ಫುಲ್ ದಿಲ್ ಖುಷ್ ಆಗಿದ್ದಾರೆ.

  2021ರಲ್ಲಿ ಪ್ರಣಿತಾ ಮದುವೆ!

  2021ರಲ್ಲಿ ಪ್ರಣಿತಾ ಮದುವೆ!

  2021ರ ಮೇ ತಿಂಗಳಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ಪ್ರಣಿತಾ ಮದುವೆ ನೆರವೇರಿದೆ. ಕೊರೊನಾ ಮುಂಜಾಗ್ರತೆ ಕ್ರಮವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ಸಮಾರಂಭ ನಡೆದಿತ್ತು. ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್​. ಮದುವೆ ಬಳಿಕ ಪ್ರಣಿತಾ ತಾಯಿಯಾಗುವ ಬಗ್ಗೆ ಸುದ್ದಿಯನ್ನು ಹಂಚಿಕೊಂಡಿದ್ದರು. ಆಗ ಸೋಶಿಯಲ್ ಮೀಡಿಯಾದಲ್ಲಿ ಪತಿ ಜೊತೆಗಿನ ಸ್ಪೆಷಲ್ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಈ ಸಿಹಿ ಸುದ್ದಿಯನ್ನು ಅವರು ಹಂಚಿಕೊಂಡಿದ್ದರು.

  ಪ್ರಣಿತಾ ಸುಭಾಷ್ ಕಮ್‌ಬ್ಯಾಕ್ ಯಾವಾಗ?

  ಪ್ರಣಿತಾ ಸುಭಾಷ್ ಕಮ್‌ಬ್ಯಾಕ್ ಯಾವಾಗ?

  2010ರಿಂದಲೂ ಪ್ರಣಿತಾ ಸುಭಾಷ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ 'ಪೊರ್ಕಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಣಿತಾ ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲಿ ಕೂಡ ಪ್ರಣಿತಾ ಅಭಿನಯಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಪ್ರಣಿತ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಮತ್ತೆ ಪ್ರಣಿತಾ ಯಾವಾಗ ಕಮ್‌ಬ್ಯಾಕ್ ಮಾಡುತ್ತಾರೆ ಎನ್ನುವ ಬಗ್ಗೆ ಕೂಡ ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ.

  Recommended Video

  Vikranth Rona 1st week collection |100 ಕೋಟಿ ಸಮೀಪದಲ್ಲಿ 'ವಿಕ್ರಾಂತ್ ರೋಣ' ಕಲೆಕ್ಷನ್ | Filmibeat Kannada
  English summary
  Actres Pranitha Subhash Baby Girl Got Name, Its Arna, Know More,
  Tuesday, August 2, 2022, 9:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X