»   » ಕನ್ನಡ ಸಿನಿಮಾ ಮಾಡ್ತಾರಂತೆ ನಟಿ ಅನುಷ್ಕಾ ಶೆಟ್ಟಿ.!

ಕನ್ನಡ ಸಿನಿಮಾ ಮಾಡ್ತಾರಂತೆ ನಟಿ ಅನುಷ್ಕಾ ಶೆಟ್ಟಿ.!

Posted By:
Subscribe to Filmibeat Kannada

ಮಂಗಳೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದ ನಟಿ ಅನುಷ್ಕಾ ಶೆಟ್ಟಿ ಖ್ಯಾತಿಯ ಉತ್ತುಂಗಕ್ಕೆ ಏರಿರುವುದು ಮಾತ್ರ ಪಕ್ಕದ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ. ವರ್ಷಗಳಿಂದ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೇ ಬಿಜಿಯಾಗಿರುವ ನಟಿ ಅನುಷ್ಕಾ ಶೆಟ್ಟಿ, ಕನ್ನಡ ಚಿತ್ರದಲ್ಲಿ ನಟಿಸುತ್ತಾರಾ? ಅಸಲಿಗೆ ಅವರಿಗೆ ಕನ್ನಡ ಬರುತ್ತಾ? [ಗಾಂಧಿನಗರದ 'ಲೇಡಿ ಸಿಂಗಂ' ಆಗ್ತಾರಾ ಅನುಷ್ಕಾ ಶೆಟ್ಟಿ?]

ಈ ಪ್ರಶ್ನೆ ಅನೇಕ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿತ್ತು. ಈ ಡೌಟ್ ಈಗ ಕ್ಲಿಯರ್ ಆಗಿದೆ. ನಟಿ ಅನುಷ್ಕಾ ಶೆಟ್ಟಿಗೆ ಕನ್ನಡ ಸರಾಗ. ಇನ್ನೂ ಅವಕಾಶ ಸಿಕ್ಕರೆ ಕನ್ನಡ ಚಿತ್ರರಂಗ ಪ್ರವೇಶ ಖಚಿತ ಅಂದಿದ್ದಾರೆ ಅನುಷ್ಕಾ. ಈ ವಿಚಾರವನ್ನ ನಟಿ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕೆ ಪುರಾವೆ ಈ ವಿಡಿಯೋದಲ್ಲಿದೆ ನೋಡಿ....

Actress Anushka Shetty is ready to act in Kannada Films

ಹೌದು, ನಟಿ ಅನುಷ್ಕಾ ಶೆಟ್ಟಿ ಬಾಯಲ್ಲಿ ಕನ್ನಡ ಪದ ನಲಿದಾಡಿದೆ. ''ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ, ಖಂಡಿತ ಕನ್ನಡ ಸಿನಿಮಾ ಮಾಡುತ್ತೇನೆ'' ಅಂತ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲೇ ಉತ್ತರಿಸಿದರು. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅನುಷ್ಕಾ ಶೆಟ್ಟಿ ನಾಯಕಿ?]

ಅನುಷ್ಕಾ ಶೆಟ್ಟಿಯ ಸ್ಪಷ್ಟ ಕನ್ನಡ ಕೇಳಿ, ಪಕ್ಕದಲ್ಲಿ ಕುಳಿತಿದ್ದ ತಮನ್ನಾ, ಪ್ರಭಾಸ್ ಮತ್ತು ರಾಣಾ ಬೆಕ್ಕಸ ಬೆರಗಾದರು. 'ಬಾಹುಬಲಿ' ಚಿತ್ರದ ಟ್ರೈಲರ್ ಲಾಂಚ್ ಸಮಾರಂಭದ ನಂತರ, ಟ್ವಿಟ್ಟರ್ ಅಭಿಮಾನಿಗಳೊಂದಿಗೆ ಒಂದು ಗಂಟೆ ಕಾಲ ಪ್ರಭಾಸ್, ರಾಣಾ, ತಮನ್ನಾ ಮತ್ತು ಅನುಷ್ಕಾ ಶೆಟ್ಟಿ ಹರಟಿದರು. ['ಬಾಹುಬಲಿ' ಚಿತ್ರದ ಅನುಷ್ಕಾ ಶೆಟ್ಟಿ ಫಸ್ಟ್ ಲುಕ್ ರಿಲೀಸ್]

Actress Anushka Shetty is ready to act in Kannada Films

ಈ ವೇಳೆ ತೂರಿಬಂದ ಕನ್ನಡ ಪ್ರಶ್ನೆಗೆ 'ಸ್ವೀಟಿ' ಕೊಟ್ಟ ಉತ್ತರ, ಕನ್ನಡಿಗರಿಗೆ ಸ್ವೀಟ್ ತಿಂದಷ್ಟೇ ಖುಷಿಯಾಗಿದೆ. ಅಂತೂ ಅನುಷ್ಕಾ ಕನ್ನಡ ಚಿತ್ರದಲ್ಲಿ ನಟಿಸುವುದಕ್ಕೆ ರೆಡಿಯಿದ್ದಾರೆ. ಕನ್ನಡ ಭಾಷೆ ಬಗ್ಗೆ ಹಿಡಿತ ಇದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ. ಅಂದ್ಮೇಲೆ ನಿರ್ಮಾಪಕರು ಒಳ್ಳೆ ಕಥೆ ಹುಡುಕಬೇಕಷ್ಟೆ.

English summary
Tollywood Actress Anushka Shetty has revealed that she is ready to act in Kannada Films provided with good script. Interestingly, Anushka Shetty told this in Kannada during her Live chat with Twitter Fans.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada