»   » ಟ್ವಿಟ್ಟರ್ ಲೋಕಕ್ಕೆ ಅಡಿಯಿಟ್ಟ ಬಣ್ಣದ ಚಿಟ್ಟೆ ಚಾರ್ಮಿ

ಟ್ವಿಟ್ಟರ್ ಲೋಕಕ್ಕೆ ಅಡಿಯಿಟ್ಟ ಬಣ್ಣದ ಚಿಟ್ಟೆ ಚಾರ್ಮಿ

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಈಗಾಗಲೆ ಬಣ್ಣದ ಜಗತ್ತಿನ ಹಲವಾರು ಬಣ್ಣಬಣ್ಣದ ಚಿಟ್ಟೆಗಳು ಹಾರಾಡುತ್ತಿವೆ. ಈ ಬಣ್ಣದ ಚಿಟ್ಟೆಗಳ ಸಾಲಿಗೆ ತಡವಾಗಿಯಾದರೂ ಮತ್ತೊಂದು ಬಣ್ಣದ ಚಿಟ್ಟೆ ಸೇರ್ಪಡೆಯಾಗಿದೆ. ಅವರು ಬೇರಾರು ಅಲ್ಲ ಚಾರ್ಮಿಂಗ್ ತಾರೆ ಚಾರ್ಮಿ ಕೌರ್.

ಆಕೆಯ ಟ್ವಿಟ್ಟರ್ ಖಾತೆ ಅಡ್ರಸ್ @Charmiofficialಗೆ ಒಮ್ಮೆ ಭೇಟಿ ನೀಡಬಹುದು. ಇತ್ತೀಚೆಗೆ ಚಾರ್ಮಿ ಚಿತ್ರಗಳು ಬಾಕ್ಸಾಫೀಸಲ್ಲಿ ಡುಮುಕಿ ಮೇಲೆ ಡುಮುಕಿ ಹೊಡೆಯುತ್ತಿವೆ. ಊರಿಗೆ ಬಂದವಳು ನೀರಿಗೆ ಬರದಿರುತ್ತಾಳೆಯೇ ಎಂಬಂತೆ ಚಿತ್ರರಂಗಕ್ಕೆ ಬಂದವಳು ಟ್ವಿಟ್ಟರ್ ಗೆ ಒಂದಲ್ಲ ಒಂದು ದಿನ ಬಂದೇ ಬರಬೇಕು.


ಇಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲೇಬೇಕು. ಚಾರ್ಮಿ ಕೂಡ ಇದೇ ಉದ್ದೇಶದಿಂದ ಟ್ವಿಟ್ಟರ್ ಗೆ ಅಡಿಯಿಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವ ಉದ್ದೇಶ ಆಕೆಯದು. ಸದ್ಯಕ್ಕೆ ಆಕೆಯ ಕೈಯಲ್ಲಿ ಹೇಳಿಕೊಳ್ಳುವಂತಹ ಚಿತ್ರಗಳ್ಯಾವುದೂ ಇಲ್ಲ.

ಇನ್ನೇನು ಅಭಿಮಾನಿಗಳು ಹಾಗೂ ಮಾಧ್ಯಮಗಳು ಚಾರ್ಮಿಯನ್ನು ಮರೆತೇ ಬಿಟ್ಟರೇನೋ ಎಂಬಂತಹ ಸನ್ನಿವೇಶ ನಿರ್ಮಾಣವಾಗಿತ್ತು. ತಾನು ಇನ್ನೂ ಚಿತ್ರರಂಗದಲ್ಲಿ ಇದ್ದೇನೆ ಎಂಬುದನ್ನು ನೆನಪಿಸಲು ಚಾರ್ಮಿ ಟ್ವಿಟ್ಟರ್ ಗೆ ಅಡಿಯಿಟ್ಟಿದ್ದಾರೆ.

ಅವರ ಮೊದಲ ಟ್ವೀಟ್, "HI guys this my official ... i got in twitter and face book..." ಇದು. ಇಪ್ಪತ್ತೈದರ ಹರೆಯದ ಈಕೆ ಮತ್ತೊಮ್ಮೆ ಚಿತ್ರರಂಗದಲ್ಲಿ ತಮ್ಮ ಚಾರ್ಮ್ ತೋರಿಸಲು ಸಜ್ಜಾಗಿದ್ದಾರೆ. (ಬಾಲಿವುಡ್ ತಾರೆಗಳ ಟ್ವಿಟ್ಟರ್ ಜಗತ್ತಿಗೆ ಒಮ್ಮೆ ಭೇಟಿ ನೀಡಿ)

ಈ ಹಿಂದೆ ಚಾರ್ಮಿ ಕೌರ್ ಕನ್ನಡದ 'ಲವ ಕುಶ' ಚಿತ್ರದಲ್ಲಿ ಅಭಿನಯಿಸಿದ್ದರು. ಇಂದ್ರಜಿತ್ ಲಂಕೇಶ್ ನಿರ್ದೇಶನದ 'ದೇವ್, ಸನ್ ಆಫ್ ಮುದ್ದೇಗೌಡ' ಚಿತ್ರದಲ್ಲೂ ಚಾರ್ಮಿ ತಮ್ಮ ಗ್ಲಾಮರ್ ಪ್ರದರ್ಶಿಸಿದ್ದಾರೆ. ಅದು ಬಿಟ್ಟರ ಹೆಚ್ಚಾಗಿ ತಮಿಳು,ತೆಲುಗು ಚಿತ್ರಗಳಲ್ಲಿ ಚಾರ್ಮಿ ತೊಡಗಿಕೊಂಡಿದ್ದಾರೆ.

ತನ್ನ ಹದಿನಾರನೇ ವಯಸ್ಸಿಗೇ ಚಿತ್ರರಂಗಕ್ಕೆ ಅಡಿಯಿಟ್ಟ ಈ ತುಂಬುಗೆನ್ನೆ ನಟಿ ಎಲ್ಲೂ ಸರಿಯಾಗಿ ನೆಲೆ ನಿಲ್ಲಲಿಲ್ಲ. ತೆಲುಗಿನಿಂದ ತಮಿಳಿಗೆ ಅಲ್ಲಿಂದ ಅವಕಾಶ ಸಿಕ್ಕಿದರೆ ಕನ್ನಡಕ್ಕೆ ಹೀಗೆ ಆಕೆಯ ಪಯಣ ಸಾಗುತ್ತಿದೆ. ಟ್ವಿಟ್ಟರ್ ಗೆ ಬಂದ ಮೇಲಾದರೂ ಆಕೆಗೆ ಸಾಕಷ್ಟು ಅವಕಾಶಗಳು ಸಿಗಲಿ ಎಂದು ಆಶಿಸೋಣ. (ಏಜೆನ್ಸೀಸ್)

English summary
South Indian actress Charmi Kaur too joined the list of celebrities that are on Twitter. Her Twitter handle is Charmiofficial. Charmi has not been in news of late as her films didn’t do well.
Please Wait while comments are loading...