»   » ಹಂಸಿಕಾರ ಐಫೋನ್, ಐಪಾಡ್, ಐಪ್ಯಾಡ್ ಚೋರಿ

ಹಂಸಿಕಾರ ಐಫೋನ್, ಐಪಾಡ್, ಐಪ್ಯಾಡ್ ಚೋರಿ

Posted By:
Subscribe to Filmibeat Kannada
ತಾರೆ ಹಂಸಿಕಾ ಮೋತ್ವಾನಿಯ ಐಫೋನ್, ಐಪಾಡ್ ಹಾಗೂ ಐಪ್ಯಾಡ್ ಸೇರಿದಂತೆ ಒಂದಷ್ಟು ಹಣ ಚೋರಿಯಾಗಿದೆ. ಇದು ನಡೆದಿರುವುದು ದೂರದ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ. ಈಕೆ ಅಭಿನಯಿಸುತ್ತಿರುವ ಚಿತ್ರದ ಶೂಟಿಂಗ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯುತ್ತಿದೆ.

ಸನ್ನಿವೇಶವೊಂದರಲ್ಲಿ ಅಭಿನಯಿಸಿ ಮರಳಿಬಂದು ತನ್ನ ಬ್ಯಾಗ್ ಚೆಕ್ ಮಾಡಿದರೆ ಮೇಲಿನ ಐಟಂಗಳು ನಾಪತ್ತೆ. ಶಾಕ್ ಆದ ಆಕೆ ಬಳಿಕ ಝೂರಿಚ್‌ನಲ್ಲಿ ಪೊಲೀಸರಲ್ಲಿ ದೂರು ದಾಖಲಿದ್ದಾರೆ.

ಆಫೆಲ್ ಕಂಪನಿಯ ತನ್ನ ಎಲ್ಲಾ ಗ್ಯಾಡ್ಜೆಟ್ಸ್ ಕಳುವಾಗಿರುವ ಬಗ್ಗೆ ಆಕೆಗೆ ಸಹಜವಾಗಿಯೇ ದುಃಖವಾಗಿದೆ. ಇದಕ್ಕಿಂತಲೂ ಹೆಚ್ಚಾಗಿ ಆಕೆಯ ಆತಂಕಕ್ಕೆ ಕಾರಣವಾಗಿರುವುದು ಅವುಗಳಲ್ಲಿದ್ದ ತನ್ನ ಪರ್ಸನಲ್ ಡೀಟೇಲ್ಸ್.

ಐಫೋನ್, ಐಪ್ಯಾಡ್ ಹಾಗೂ ಐಪಾಡ್ ನಲ್ಲಿ ಆಕೆಯ ಹಲವಾರು ಫೋಟೋಗಳು, ಇ-ಮೇಲ್, ಮುಂಬರುವ ಚಿತ್ರಗಳ ವಿವರಗಳು ಇದ್ದವಂತೆ. ಈ ವಿವರಗಳೆಲ್ಲಾ ಎಲ್ಲಿ ದುರ್ಬಳಕೆಯಾಗುತ್ತವೋ ಎಂಬುದು ಆಕೆಯ ಆತಂಕಕ್ಕೆ ಕಾರಣವಾಗಿದೆ.

ಯೂರೋಪ್ ರಾಷ್ಟ್ರಗಳಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆಕೆ ಮೊದಲೇ ಹೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಜಾಗ್ರತೆಯನ್ನೂ ವಹಿಸಿದ್ದರಂತೆ. ಆದರೂ ಆಕೆಯ ಐಟಂಗಳು ಚೋರಿಯಾಗಿವೆ.

ಈ ಹಿಂದೊಮ್ಮೆ ಮಾರಿ ಕಣ್ಣು ಹೋರಿ ಮ್ಯಾಲೆ ಎಂಬಂತೆ ಆದಾಯ ತೆರಿಗೆ ಅಧಿಕಾರಿಗಳ ಕಣ್ಣು 'ಬಿಂದಾಸ್' ಬೆಡಗಿ ಹಂಸಿಕಾ ಮೋತ್ವಾನಿ ಮೇಲೆ ಬಿದ್ದಿತ್ತು. ಅವರ ಕಣ್ಣು ಈಕೆಯ ಮೇಲೆ ಬೀಳಲು ಕಾರಣವಾಗಿರುವುದು ಇತ್ತೀಚೆಗೆ ಆಕೆ ತಿರುಗಾಡುತ್ತಿರುವ ಐಶಾರಾಮಿ ಕಾರು. ಸಂಪೂರ್ಣ ಸುದ್ದಿ ಇಲ್ಲಿದೆ ಓದಿ. (ಏಜೆನ್ಸೀಸ್)

English summary
Actress Hansika Motwani was in Switzerland for the shooting of the film. She left her bag in the production van and participated in the film’s shoot. After returning from a shot, Hansika shockingly found her bag missing. Reportedly she lost her iPhone, iPod,iPad, some money, and also an expensive make up kit, and also some currency.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada