»   » ಲಾಂಗ್ ಎಕ್ಸ್ ಪರ್ಟ್ ಶಿವಣ್ಣನನ್ನು ಮೀರಿಸಿದ ಮಾಲಾಶ್ರೀ!

ಲಾಂಗ್ ಎಕ್ಸ್ ಪರ್ಟ್ ಶಿವಣ್ಣನನ್ನು ಮೀರಿಸಿದ ಮಾಲಾಶ್ರೀ!

Posted By:
Subscribe to Filmibeat Kannada

ಒಂದ್ಕಾಲದಲ್ಲಿ ಬೆಳ್ಳಿ ಬೊಂಬೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟ 'ಕನಸಿನ ರಾಣಿ' ಮಾಲಾಶ್ರೀ ಅಳುಮುಂಜಿಯಾಗಿ, ತೆರೆಮೇಲೆ ಲವ್ವಿ ಡವ್ವಿ ಆಡುವ ಕಾಲ ಯಾವಾಗ್ಲೋ ಮುಗಿದ್ಹೋಯ್ತು. ಮಾಲಾಶ್ರೀ ಈಗೇನಿದ್ದರೂ ಲೇಡಿ ಬಾಂಡ್. ದುಷ್ಟರನ್ನ ಸಂಹಾರ ಮಾಡೋ ಹೆಣ್ ಚಿರತೆ.

ದುಷ್ಟರನ್ನ ಶಿಕ್ಷಿಸಿ, ಶಿಷ್ಟರನ್ನ ರಕ್ಷಿಸೋ ಮಾಡರ್ನ್ ದುರ್ಗಿ ಮಾಲಾಶ್ರೀ, 'ಮಹಾಕಾಳಿ'ಯ ಅವತಾರವೆತ್ತಿರುವ ವಿಷಯ ನಿಮ್ಗೆಲ್ಲಾ ಗೊತ್ತಿದೆ ತಾನೆ. ಅನ್ಯಾಯದ ವಿರುದ್ಧ ಸಿಡಿದೇಳುವ 'ಸ್ಯಾಂಡಲ್ ವುಡ್ ಚಾಮುಂಡಿ' ಎಸ್.ಮಹೇಂದರ್ ಗರಡಿಯಲ್ಲಿ 'ಮಹಾಕಾಳಿ'ಯಾಗಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Actress Malashree1

'ಮಹಾಕಾಳಿ'ಯ ರೌದ್ರಾವತಾರ ತಾಳಿರುವ ಮಾಲಾಶ್ರೀ ಕೈಯಲ್ಲಿ ಯಾವ ಆಯುಧ ಇರಬಹುದು ಅಂತ ಎಂದಾದರೂ ಊಹಿಸಿದ್ದೀರಾ? ಇಲ್ಲಾಂದ್ರೆ, ಫೋಟೋ ಸಮೇತ ಇಂದು ಮಾಲಾಶ್ರೀಯ 'ಮಹಾಕಾಳಿ' ದರ್ಶನ ಮಾಡಿಸುತ್ತೀವಿ ನೋಡಿ....

ಸ್ಯಾಂಡಲ್ ವುಡ್ ಇಮೇಜ್ ಗೆ ತಕ್ಕಂತೆ ಮಾಲಾ ಮೇಡಂ 'ಮಹಾಕಾಳಿ'ಯಾಗಿ ಕೈಲಿ 'ಲಾಂಗ್' ಇಟ್ಟುಕೊಂಡಿದ್ದಾರೆ. ಲಾಂಗ್ ಎಕ್ಸ್ ಪರ್ಟ್ ಶಿವಣ್ಣನನ್ನೇ ಮೀರಿಸುವ ಮಟ್ಟಕ್ಕೆ ಅಕ್ಕ ಬಾಂಡ್ ಮಾಲಾಶ್ರೀ ಕೈಲಿ ಲಾಂಗ್ ಹಿಡಿದಿದ್ದಾರೆ. ['ಘರ್ಷಣೆ' ವಿಮರ್ಶೆ: ಸಸ್ಪೆನ್ಸ್ ಪ್ರಿಯರಿಗೆ ಅರ್ಪಣೆ]

Actress Malashree2

ಇದರೊಂದಿಗೆ ತ್ರಿಶೂಲ, ಢಮರುಗ, ಬೆಲ್ಟ್ ಹಿಡಿದುಕೊಂಡು ವೀರಾವೇಷ ಮೆರೆದಿದ್ದಾರೆ 'ಗಾಂಧಿನಗರದ ವೀರವನಿತೆ'. ಭಿನ್ನವಿಭಿನ್ನ ಗೆಟಪ್ ನಲ್ಲಿ ತರಹೇವಾರಿ ಆಯುಧಗಳನ್ನು ಹಿಡಿದುಕೊಂಡಿರುವ ಮಾಲಾಶ್ರೀ, ಚಿತ್ರದಲ್ಲಿ ಅನ್ಯಾಯದ ವಿರುದ್ಧ ಹೋರಾಡೋ ದಿಟ್ಟ ಮಹಿಳೆ.

ಓರ್ವ ಸಾಮಾನ್ಯ ಮಹಿಳೆಯಾಗಿ, ತನ್ನದೇ ಆದ ಸೈನ್ಯ ಕಟ್ಟಿಕೊಂಡು ನೊಂದ ಯುವತಿಯರಿಗೆ ಆಶಾಕಿರಣವಾಗುವ ಮಾದರಿ ಹೆಣ್ಣಿನ ಪಾತ್ರದಲ್ಲಿ ಮಾಲಾಶ್ರೀ 'ಮಹಾಕಾಳಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. [ಗುಂಡಿನ ಮತ್ತು ಗಮ್ಮತ್ತಿನಲ್ಲಿ ಕನಸಿನರಾಣಿ ಮಾಲಾಶ್ರೀ]

Actress Malashree3

''ಬೇರೆ ಸಿನಿಮಾಗಳಿಗಿಂತ ಕೊಂಚ ವಿಭಿನ್ನವಾಗಿರಲಿ ಅಂತ ಇಲ್ಲಿ ಮಾಲಾಶ್ರೀ ಕೈಲಿ ಭಿನ್ನ ಭಿನ್ನ ಆಯುಧಗಳನ್ನು ಹಿಡಿಸಿದ್ದೀವಿ'', ಅಂತಾರೆ ನಿರ್ದೇಶಕ ಎಸ್.ಮಹೇಂದರ್.

ಹೆಂಗಸರಿಗೆ ತಕ್ಕ ಸೆಂಟಿಮೆಂಟ್ ಚಿತ್ರಗಳನ್ನು ಮಾಡುವುದು ಬಿಟ್ಟು, ಲೇಡಿ ರ್ಯಾಂಬೋ ಮಾಲಾಶ್ರೀಗಾಗಿ, ಮಾಲಾ ಮೇಡಂ ಇಮೇಜ್ ಗೆ ತಕ್ಕಂತೆ ಆಕ್ಷನ್ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ನಿರ್ದೇಶಕ ಎಸ್.ಮಹೇಂದರ್.

Actress Malashree4

''ಇಲ್ಲಿವರೆಗೂ ಸೆಂಟಿಮೆಂಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದೀನಿ. ಇದು ನನಗೆ ವಿಭಿನ್ನ ಅನುಭವ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ'', ಅಂತ 'ಮಹಾಕಾಳಿ'ಗೆ ಕುಂಬಳಕಾಯಿ ಹೊಡೆದ ಸಂತಸದಲ್ಲಿ 'ಫಿಲ್ಮಿಬೀಟ್ ಕನ್ನಡ'ಗೆ ಎಸ್.ಮಹೇಂದರ್ ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ 'ಮಹಾಕಾಳಿ' ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ನಲ್ಲಿ ಸದ್ಯ ಬಿಜಿಯಾಗಿರುವ 'ಮಹಾಕಾಳಿ' ನಿಮ್ಮೆಲ್ಲರ ಮುಂದೆ ಬರುವುದು ಮುಂದಿನ ವರ್ಷದಲ್ಲಿ. (ಫಿಲ್ಮಿಬೀಟ್ ಕನ್ನಡ)

English summary
Actress Malashree's upcoming movie Mahakali is at post-production stage. Malashree's looks are daring and dashing in S.Mahender directorial Mahakali. Take a look at her looks.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada