»   » ಖ್ಯಾತ ತಾರೆ ಮಂಜುಳಾ ವಿಜಯ್ ಕುಮಾರ್ ನಿಧನ

ಖ್ಯಾತ ತಾರೆ ಮಂಜುಳಾ ವಿಜಯ್ ಕುಮಾರ್ ನಿಧನ

Posted By:
Subscribe to Filmibeat Kannada

ದಕ್ಷಿಣ ಚಿತ್ರರಂಗದ ಖ್ಯಾತ ಅಭಿನೇತ್ರಿ ಮಂಜುಳಾ ವಿಜಯ್ ಕುಮಾರ್ ಅವರು ಮಂಗಳವಾರ (ಜು.23) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಚೆನ್ನೈನ ಎಸ್ಆರ್ಎಂಸಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಮನೆಯಲ್ಲಿ ಕುಸಿದು ಬಿದ್ದ ಕಾರಣ ಅವರನ್ನು ಒಂದು ವಾರದ ಹಿಂದೆ ಚಿಕಿತ್ಸೆಗಾಗಿ ಶ್ರೀ ರಾಮಚಂದ್ರ ಮೆಡಿಕಲ್ (ಎಸ್ಆರ್ಎಂಸಿ) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಜಾಂಡೀಸ್ ಆಗಿರುವುದು ಪತ್ತೆಯಾಗಿತ್ತು.

Actress Manjula Vijayakumar

ಮಂಜುಳಾ ಅವರಿಗೆ ಪತಿ ಹಾಗೂ ಮೂವರು ಪುತ್ರಿಯರಿದ್ದಾರೆ. ಮಂಜುಳಾ ಅವರ ಪತಿ ವಿಜಯ್ ಕುಮಾರ್ ಅವರು ತಮಿಳುನಾಡಿನ ರಾಜಕೀಯ ಕ್ಷೇತ್ರದಲ್ಲಿ ಹಾಗೂ ನಟನಾಗಿ ಗುರುತಿಸಿಕೊಂಡಿದ್ದಾರೆ. ಇಬ್ಬರು ಪುತ್ರಿಯರಾದ ಶ್ರೀದೇವಿ ಹಾಗೂ ಪ್ರೀತಾ ಅವರು ಈಗಾಗಲೆ ತಮಿಳು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

1969ರಲ್ಲಿ ತಮಿಳಿನ 'ಶಾಂತಿ ನಿಲಯಂ' ಎಂಬ ಚಿತ್ರದ ಮೂಲಕ ಮಂಜುಳಾ ಅವರು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಎಪ್ಪತ್ತರ ದಶಕದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದ ತಾರೆ. ತಮಿಳಿನ ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಎಂಜಿಆರ್, ಎನ್ಟಿಆರ್, ಅಕ್ಕಿನೇನಿ ನಾಗಶ್ವರರಾವ್, ವಿಷ್ಣುವರ್ಧನ್, ಕಮಲ್ ಹಾಸನ್ ಹಾಗೂ ರಜನಿಕಾಂತ್ ಜೊತೆ ಅಭಿನಯಿಸಿದ ಖ್ಯಾತಿ ಮಂಜುಳಾ ಅವರದು.

ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ತಮ್ಮನ್ನು ತೊಡಿಸಿಕೊಂಡ ಮಂಜುಳಾ ಸುಮಾರು 100 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಕನ್ನಡದ 'ಸಿರಿತನಕ್ಕೆ ಸವಾಲ್' (1977) ಚಿತ್ರದಲ್ಲಿ ಹಾಗೂ 'ಗಲಾಟೆ ಸಂಸಾರ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
South Indian actress Manjula Vijayakumar passed away in Chennai today (July 23). The actress died at the SRMC hospital. She was 59. Manjula is survived by husband and three daughters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada