»   » ಬೆಳ್ಳಿತೆರೆಗೆ ತಾರೆ ನವ್ಯಾ ನಾಯರ್ ಪುನರಾಗಮನ

ಬೆಳ್ಳಿತೆರೆಗೆ ತಾರೆ ನವ್ಯಾ ನಾಯರ್ ಪುನರಾಗಮನ

Posted By:
Subscribe to Filmibeat Kannada
ತಾರೆ ನವ್ಯಾ ನಾಯರ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಬಳಿಕ ಬೆಳ್ಳಿಪರದೆಯಿಂದ ಕಾಣೆಯಾಗಿದ್ದರು. ಕಳೆದ ಕೆಲ ವರ್ಷಗಳಿಂದ ಬಣ್ಣದ ಬದುಕಿನಿಂದ ದೂರವಾಗಿದ್ದ ಅವರನ್ನು ಚಿತ್ರರಸಿಕರು ಇನ್ನೇನು ಮರೆತೇಬಿಟ್ಟಿದ್ದರು. ಈಗವರ ಪುನರಾಗಮನವಾಗುತ್ತಿದೆ.

ನವ್ಯಾ ನಾಯರ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿರುವುದು ದಕ್ಷಿಣ ಭಾರತದಲ್ಲೇ ಆದರೂ ಕನ್ನಡ ಚಿತ್ರದಲ್ಲಂತೂ ಖಂಡಿತ ಅಲ್ಲವೇ ಅಲ್ಲ. ಮಲಯಾಳಂನ ಈ ಬೆಡಗಿ ತಮ್ಮ ತಾಯ್ನಾಡಿನಲ್ಲಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಆಕೆ ಅಭಿನಯಿಸಲಿರುವ ಚಿತ್ರಕ್ಕೆ 'ಸೀನ್ 1: ನಮ್ಮೂಡೆ ವೀಡು' ಎಂದು ಹೆಸರಿಡಲಾಗಿದೆ.

ಈ ಚಿತ್ರದಲ್ಲಿ ನವ್ಯಾ ನಾಯರ್ ಅವರದು ಶಾಲಾ ಶಿಕ್ಷಕಿ ಪಾತ್ರ. ಹಿರಿಯ ಪ್ರೌಢಶಾಲೆ ಶಿಕ್ಷಕಿಯಾಗಿ ಅವರು ಪಾತ್ರ ಪೋಷಿಸಲಿದ್ದಾರೆ. ಈಗಾಗಲೆ ಒಂದು ಗಂಡುಮಗುವಿನ ತಾಯಿಯಾಗಿರುವ ನವ್ಯಾ ಅವರಿಗೆ ಅತ್ತೆಯೋ, ಅಮ್ಮನೋ ಪಾತ್ರ ಸಿಗಬೇಕಾಗಿತ್ತು. ಆದರೆ ಅವರಿಗೆ ಶಿಕ್ಷಕಿ ಪಾತ್ರ ಅರಸಿ ಬಂದಿರುವುದು ವಿಶೇಷ.

ನವ್ಯಾ ನಾಯರ್ ಕನ್ನಡದಲ್ಲಿ ಛಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ 'ಬಾಸ್' ಹಾಗೂ 'ಗಜ' ಚಿತ್ರಗಳಲ್ಲಿ, ಶಿವರಾಜ್ ಕುಮಾರ್ ಅವರೊಂದಿಗೆ 'ಭಾಗ್ಯದ ಬಳೆಗಾರ' ಚಿತ್ರದಲ್ಲಿ ಅಭಿನಯಿಸಿದ್ದಾರೆ. 'ನಮ್ ಯಜಮಾನ್ರು' ಹಾಗೂ 'ಕಲ್ಲರಳಿ ಹೂವಾಗಿ' ಚಿತ್ರಗಳಲ್ಲೂ ಗಮನಸೆಳೆಯುವ ಪಾತ್ರಗಳಲ್ಲಿ ನವ್ಯಾ ಕಾಣಿಸಿಕೊಂಡಿದ್ದರು.

ಬಹುರಾಷ್ಟ್ರೀಯ ಕಂಪನಿಯೊಂದರ ಉದ್ಯೋಗಿ ಸಂತೋಷ್ ಮೆನನ್ ಕೈಹಿಡಿದಿರುವ ಸನವ್ಯಾ ನಾಯರ್ ಅವರಿಗೆ ಈಗ ಮುದ್ದಾದ ಗಂಡುಮಗು ಇದೆ. ಶ್ರೀಕೃಷ್ಣನ ಪರಮಭಕ್ತೆಯಾದ ನವ್ಯಾ ನಾಯರ್, ತನ್ನ ಮಗನಿಗೆ ಸಾಯಿ ಕೃಷ್ಣ ಎಂದು ಹೆಸರಿಟ್ಟಿದ್ದಾರೆ. ಒಟ್ಟಿನಲ್ಲಿ ಅವರ ಸಂಸಾರ ಹಾಲುಜೇನು ಒಂದಾದ ಹಾಗೆ ಸಾಗುತ್ತಿದೆ. (ಏಜೆನ್ಸೀಸ್)

English summary
South Indian actress Navya Nair to make a comeback with Malayalam film. Navya Nair was not seen on screen after she entered wedlock a few years ago. The actress will start her second innings with a Malayalam film titled 'Scene 1: Nammude Veedu'. She will play the role of a higher secondary teacher in this flick.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada