»   » ಸೆಕೆಂಡ್ ಇನ್ನಿಂಗ್ಸ್ ಗೆ ಅಣಿಯಾದ ನಟಿ ನಿಖಿತಾ ತುಕ್ರಲ್

ಸೆಕೆಂಡ್ ಇನ್ನಿಂಗ್ಸ್ ಗೆ ಅಣಿಯಾದ ನಟಿ ನಿಖಿತಾ ತುಕ್ರಲ್

By: ಶಂಕರ್, ಚೆನ್ನೈ
Subscribe to Filmibeat Kannada

ನಟಿ ನಿಖಿತಾ ತುಕ್ರಲ್ ಎಲ್ಲಿ ಹೋದರು ಎಂದು ಹುಡುಕುತ್ತಿದ್ದವರಿಗೆ ಇಲ್ಲಿದೆ ನೋಡಿ ಭರ್ಜರಿ ಸುದ್ದಿ. ಸ್ಯಾಂಡಲ್ ವುಡ್ ನಲ್ಲಿ ನಿಖಿತಾ ಅಭಿನಯದ 'ರಿಂಗ್ ರೋಡ್ ಶುಭ' ಚಿತ್ರಕ್ಕೆ ಇನ್ನೂ ಬಿಡುಗಡೆ ಭಾಗ್ಯ ಕೂಡಿಬಂದಿಲ್ಲ. ಆದರೆ ನಿಖಿತಾ ಮಾತ್ರ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ.

ಇದೀಗ ತಮಿಳಿನ 'ಪಾಯುಮ್ ಪುಲಿ' ಚಿತ್ರದಲ್ಲಿ ತಮ್ಮ ಬಳ್ಳಿಯಂತಹ ಸೊಂಟವನ್ನು ಬಳುಕಿಸಿದ್ದಾರೆ ನಿಖಿತಾ. ವಿಶಾಲ್ ಹಾಗೂ ಕಾಜಲ್ ಅಗರವಾಲ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ನಿಖಿತಾ ಅವರದು ಐಟಂ ಡಾನ್ಸ್ ಎಂಬುದು ವಿಶೇಷ.

Actress Nikita Thukral starts second innings

ಇತ್ತೀಚೆಗಷ್ಟೇ ಈ ಹಾಡಿನ ಚಿತ್ರೀಕರಣ ಚೆನ್ನೈನಲ್ಲಿ ನಡೆದಿದ್ದು, ಸಖತ್ ಎಂಜಾಯ್ ಮಾಡಿದೆ ಎಂದು ಸ್ವತಃ ನಿಖಿತಾ ಹೇಳಿಕೊಂಡಿದ್ದಾರೆ. "ಇದೊಂದು ಸೋಲೋ ನಂಬರ್ ಆಗಿದ್ದು, ಚೆನ್ನೈನ ಬಿನ್ನಿ ಮಿಲ್ ಪ್ರದೇಶದಲ್ಲಿ ಚಿತ್ರೀಕರಿಸಿದ್ದೇವೆ. ಈ ಹಾಡಿನ ಬಗ್ಗೆ ನಿರ್ಮಾಪಕರು ಹೇಳಿದಾಗ ಕೂಡಲೆ ಒಪ್ಪಿಕೊಂಡೆ. ಏಕೆಂದರೆ ಹಾಡು ಅಷ್ಟು ಚೆನ್ನಾಗಿತ್ತು" ಎನ್ನುತ್ತಾರೆ ನಿಖಿತಾ.

ಶೋಭಿ ಮಾಸ್ಟರ್ ಅವರ ನೃತ್ಯಸಂಯೋಜನೆಯಲ್ಲಿ ಐದು ದಿನಗಳ ಕಾಲ ಈ ಹಾಡನ್ನು ಚಿತ್ರೀಕರಿಸಿದ್ದೇವೆ. ಮಾರ್ಕೆಟ್ ಸೆಟ್ ಹಿನ್ನೆಲೆಯಲ್ಲಿ ಈ ಹಾಡು ತೆರೆಗೆ ತರಲಾಗಿದೆ. ಇಡೀ ಹಾಡಿನ ಶೂಟಿಂಗ್ ಸೆಟ್ ಬಹಳ ಸೊಗಸಾಗಿತ್ತು. ಚಿತ್ರೀಕರಣವನ್ನು ಬಹಳ ಎಂಜಾಯ್ ಮಾಡಿದರಂತೆ ನಿಖಿತಾ.

'ಬಿಗ್ ಬಾಸ್ ಕನ್ನಡ' ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಸಾಕಷ್ಟು ಹತ್ತಿರವಾಗಿದ್ದ ಈ ನಟಿಯನ್ನು ಗುರುತಿಸುವುದೇ ಸ್ಯಾಂಡಲ್ ವುಡ್ ಬೆಡಗಿಯಂದೆ. ಕನ್ನಡ ಅಷ್ಟಾಗಿ ಬಾರ ಮುಂಬೈ ಮೂಲದ ಈ ಬೆಡಗಿ ಇದೀಗ ಐಟಂ ಡಾನ್ಸ್ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ.

English summary
Sandalwood actress Nikita Thukral starts second innings in Kollywood. The actress will now be seen in a special number in the Vishal-Kajal Aggarwal-starrer Tamil film Paayum Puli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada