For Quick Alerts
  ALLOW NOTIFICATIONS  
  For Daily Alerts

  'ಹೊಯ್ಸಳ' ಶೂಟಿಂಗ್‌ನಲ್ಲಿ ನಟಿ ರಮ್ಯಾ ಭಾಗಿ!

  |

  ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ,‌ ಸಿನಿಮಾರಂಗದ ಕೆಲಸಗಳಲ್ಲಿ ಬ್ಯುಸಿಯಾಗಿರುವುದು ಮಾತ್ರ ಅಲ್ಲ. ‌ಸಿನಿಮಾ ಮಂದಿಗೆ ಸರ್ಪ್ರೈಸ್ ಕೂಡ ಕೊಡ್ತಾರೆ.‌‌ ಸಿನಿಮಾ ರಂಗದ ಕಾರ್ಯಕ್ರಗಳಲ್ಲಿ ಭಾಗಿ ಆಗಿ ಸುದ್ದಿ ‌ಆಗ್ತಾರೆ.

  ಹೌದು, ನಟಿ ರಮ್ಯಾ ಇತ್ತೀಚೆಗೆ ಹೆಚ್ಚಾಗಿ ‌ಸಿನಿಮಾ‌ ಚಟುವಟಿಕೆಗಳಲ್ಲಿ ಭಾಗಿ ಆಗ್ತಿದ್ದಾರೆ. ಜೊತೆಗೆ ಸಿನಿಮಾ ಮಂದಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಾರೆ.‌ ಈ ಮೂಲಕ ರಮ್ಯಾ ಸುದ್ದಿ ಆಗುತ್ತಾರೆ.

  ಸಿನಿಮಾ ಸುದ್ದಿ ಕೊಡದೇ ಬ್ಯಾಂಕಾಕ್‌ಗೆ ಹಾರಿದ ನಟಿ ರಮ್ಯಾ!ಸಿನಿಮಾ ಸುದ್ದಿ ಕೊಡದೇ ಬ್ಯಾಂಕಾಕ್‌ಗೆ ಹಾರಿದ ನಟಿ ರಮ್ಯಾ!

  ಈಗ ಚಿತ್ರದ ಶೂಟಿಂಗ್ ಸ್ಥಳಕ್ಕೆ ಭೇಟಿ ಕೊಟ್ಟು ಸುದ್ದಿ ಆಗಿದ್ದಾರೆ. ಹೌದು, ನಟ ಧನಂಜಯ್ ಅಭಿನಯದ ಮುಂದಿನ‌ ಸಿನಿಮಾ 'ಹೊಯ್ಸಳ' ಶೂಟಿಂಗ್ ಸ್ಪಾಟ್ ಗೆ ರಮ್ಯಾ ಭೇಟಿ ಕೊಟ್ಟಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ಓದಿ...

  'ಹೊಯ್ಸಳ‌' ಚಿತ್ರದಲ್ಲಿ ಖಾಕಿ ತೊಟ್ಟ ಧನಂಜಯ್!

  'ಹೊಯ್ಸಳ‌' ಚಿತ್ರದಲ್ಲಿ ಖಾಕಿ ತೊಟ್ಟ ಧನಂಜಯ್!

  ನಟ ಧನಂಜಯ್ ಅಭಿನಯದ ಮುಂದಿನ ಸಿನಿಮಾ 'ಹೊಯ್ಸಳ'. ಈ ಚಿತ್ರದಲ್ಲಿ ನಾಯಕ ನಟರಾಗಿ ಧನಂಜಯ್ ಅಭಿನಯಿಸುತ್ತಿದ್ದಾರೆ. ವಿಶೇಷ ಎಂದರೆ, ಖಾಕಿ ತೊಟ್ಟು ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಶುರುವಾಗಿದೆ. ಈಗಾಗಲೇ ಮೈಸೂರಿನಲ್ಲಿ ಒಂದು ಹಂತದ ಶೂಟಿಂಗ್ ಮಾಡಿ ಮುಗಿಸಿದೆ ಚಿತ್ರತಂಡ. ಸದ್ಯ ಭರ್ಜರಿಯಾಗಿ ಶೂಟಿಂಗ್ ನಡೆಯುತ್ತಿದ್ದು ಸದ್ಯದಲ್ಲಿಯೇ ಸಿನಿಮಾದ ಮುಂದಿನ ಅಪ್ಡೇಟ್ ಕೊಡಲಿದೆ ಚಿತ್ರತಂಡ. ಆದರೆ ಈಗ ಇದ್ದಕ್ಕಿದ್ದ ಹಾಗೆ 'ಹೊಯ್ಸಳ' ಚಿತ್ರತಂಡದ ಜೊತೆಗೆ ನಟಿ ರಮ್ಯಾ ಹೆಸರು ಕೇಳಿಬರುತ್ತಿದೆ. ಹಾಗಂತ ರಮ್ಯಾ ಹೊಯ್ಸಳ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎನ್ನುವ ಶಂಕೆ ಮೂಡಬಹುದು. ಆದರೆ ವಿಷಯ ಅದಲ್ಲ.

  ಮಾನವೀಯರಾಗಿ, ಮನುಷ್ಯರಾಗಿ ಎಂದವರು ದೇಶದ್ರೋಹಿಗಳೇ? ಸಾಯಿ ಪಲ್ಲವಿಗೆ ರಮ್ಯಾ ಬೆಂಬಲಮಾನವೀಯರಾಗಿ, ಮನುಷ್ಯರಾಗಿ ಎಂದವರು ದೇಶದ್ರೋಹಿಗಳೇ? ಸಾಯಿ ಪಲ್ಲವಿಗೆ ರಮ್ಯಾ ಬೆಂಬಲ

  'ಹೊಯ್ಸಳ' ಶೂಟಿಂಗ್ ಸ್ಪಾಟ್ ನಲ್ಲಿ ರಮ್ಯಾ!

  ಹೌದು, ನಟಿ ರಮ್ಯಾ, ಧನಂಜಯ್, ಅಮೃತ ಅಯ್ಯಂಗಾರ್ ಅಭಿನಯದ 'ಹೊಯ್ಸಳ' ಸಿನಿಮಾ ತಂಡದ ಜೊತೆಗೆ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ಚಿತ್ರೀಕರಣದ ಸ್ಥಳಕ್ಕೆ ರಮ್ಯಾ ಭೇಟಿ ಕೊಟ್ಟಿದ್ದಾರೆ. ಮೋಹಕ ತಾರೆ ಭೇಟಿಯಿಂದಾಗಿ ಇಡೀ ಚಿತ್ರತಂಡ ಖುಷಿಯಲ್ಲಿ ತೇಲಾಡಿದೆ. ಈ ವೇಳೆ ಚಿತ್ರದ ನಾಯಕ ನಟ ಧನಂಜಯ್, ನಟಿ ಅಮೃತ ಅಯ್ಯಂಗಾರ್ ಮತ್ತು ನಿರ್ಮಾಪಕ ಕೆ ಆರ್ ಜಿ ಸ್ಟುಡಿಯೋದ ಕಾರ್ತಿಕ್ ಸೇರಿದಂತೆ ಚಿತ್ರತಂಡ ಹಾಜರಿತ್ತು. ಇನ್ನು ರಮ್ಯಾ ಕೆಲಕಾಲ ಶೂಟಿಂಗ್ ಸ್ಪಾಟ್ ನಲ್ಲಿ ಕಾಲಕಳೆದು ಒಂದಷ್ಟು ಚಿತ್ರದ ದೃಶ್ಯಗಳನ್ನು ಕಣ್ತುಂಬಿಕೊಂಡು ಹಿಂತಿರುಗಿದ್ದಾರೆ. ನಟಿ ರಮ್ಯಾ ಭೇಟಿಕೊಟ್ಟಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ಹಂಚಿಕೊಂಡಿದೆ.

  ಮೋಹಕ ತಾರೆಗೆ 'ಹೊಯ್ಸಳ' ತಂಡ ಧನ್ಯವಾದ!

  ನಟಿ ರಮ್ಯಾ 'ಹೊಯ್ಸಳ' ಶೂಟಿಂಗ್ ಸ್ಪಾಟ್ ಗೆ ಭೇಟಿಕೊಟ್ಟಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ಹಂಚಿಕೊಂಡಿದೆ. ವಿಡಿಯೋ ಹಂಚಿಕೊಂಡಿರುವ ಧನಂಜಯ್ ನಟಿ ರಮ್ಯಾಗೆ ಧನ್ಯವಾದವನ್ನು ತಿಳಿಸಿದ್ದಾರೆ. ಅದಕ್ಕೆ ರಮ್ಯಾ ಕೂಡ ಪ್ರತಿಕ್ರಿಯಿಸಿ ಚಾಕಲೇಟ್ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ರಮ್ಯಾ ಅವರ ಭೇಟಿಯಿಂದಾಗಿ ಇಡೀ ಚಿತ್ರ ತಂಡ ಖುಷಿಯಲ್ಲಿ ತೇಲಾಡಿದೆ ಎನ್ನುವುದನ್ನು ಧನಂಜಯ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಇನ್ನು ನಟಿ ಅಮೃತ ಅಯ್ಯಂಗಾರ್ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

  ಸದ್ಯದಲ್ಲೇ ರಮ್ಯಾ ಕಮ್ ಬ್ಯಾಕ್!

  ಸದ್ಯದಲ್ಲೇ ರಮ್ಯಾ ಕಮ್ ಬ್ಯಾಕ್!

  ಇನ್ನು ನಟಿ ರಮ್ಯಾ ಎಲ್ಲೇ ಕಾಣಿಸಿಕೊಂಡರು, ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದರೂ ಕೂಡ ಅವರ ಬಗ್ಗೆ ಮೂಡುವುದು ಒಂದೇ ಪ್ರಶ್ನೆ. ಅಭಿಮಾನಿಗಳು ಕೇಳುವುದು ಇದೊಂದೇ ಪ್ರಶ್ನೆ. ಮತ್ತೆ ರಮ್ಯಾ ಕಮ್ ಬ್ಯಾಕ್ ಯಾವಾಗ? ಮುಂದಿನ ಸಿನಿಮಾ ಯಾವುದು? ಯಾವ ಚಿತ್ರದ ಮೂಲಕ ಮತ್ತೆ ಬೆಳ್ಳಿ ತೆರೆಮೇಲೆ ಬರುತ್ತಾರೆ ಎನ್ನುವ ಪ್ರಶ್ನೆ ರಮ್ಯಾ ಅವರಿಗೆ ಸದಾ ಎದುರಾಗುತ್ತೆ. ಅವರೇ ಹೇಳಿಕೊಂಡಂತೆ ರಮ್ಯಾ ಒಂದಷ್ಟು ಸಿನಿಮಾ ಕಥೆಗಳನ್ನು ಕೇಳುತ್ತಿದ್ದಾರೆ. ಅವರಿಗೆ ಇಷ್ಟವಾದ ಕಥೆಯನ್ನು ಒಪ್ಪಿ ಸಿನಿಮಾ ಕೂಡ ಮಾಡುತ್ತಾರಂತೆ. ಆದರೆ, ಸದ್ಯಕ್ಕೆ ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ರಮ್ಯಾ ಯಾವ ಸಿನಿಮಾದಲ್ಲಿ ಮತ್ತೆ ಪರದೆ ಮೇಲೆ ಬರಲಿದ್ದಾರೆ ಎನ್ನುವುದು ಇನ್ನೂ ಕೂಡ ಗುಟ್ಟಾಗಿ ಉಳಿದಿದೆ. ಆದರೂ ರಮ್ಯಾ ರೀ ಎಂಟ್ರಿಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

  English summary
  Actress Ramya Visited Dhananyaj Starerr Hoysala Shooting Spot In Mysore, know more,
  Monday, July 11, 2022, 9:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X