For Quick Alerts
  ALLOW NOTIFICATIONS  
  For Daily Alerts

  'ನವರಂಗಿ' ತಾರೆ ರೂಪಿಕಾ ಪಂಚರಂಗಿ ಚಿತ್ರಗಳು

  By ರವಿಕಿಶೋರ್
  |

  'ಖತರ್ನಾಕ್' ಬೆಡಗಿ ರೂಪಿಕಾ ಮತ್ತೆ ಗ್ಲಾಮರ್ ನೊಂದಿಗೆ ಮರಳಿದ್ದಾರೆ. ಈ ಬಾರಿಯೂ ಅವರ ಮೈಮಾಟ ಖತರ್ನಾಕ್ ಆಗಿಯೇ ಇದೆ. ತಮ್ಮ ಪಾತ್ರಕ್ಕೆ ಸಾಕಷ್ಟು ರಂಗನ್ನೂ ತುಂಬಿದ್ದಾರೆ. ಇದೊಂದು ಲವ್ ಮತ್ತು ಆಕ್ಷನ್ ಪ್ರಧಾನ ಚಿತ್ರ. ಹೆಸರು 'ನವರಂಗಿ'. [ರೂಪಿಕಾ ಖತರ್ನಾಕ್ ಕಲರ್ ಚಿತ್ರಗಳು]

  ಈಗಾಗಲೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಅದಕ್ಕೆ ರೆಸ್ಪಾನ್ಸ್ ಸಹ ಚೆನ್ನಾಗಿದೆ ಎನ್ನುತ್ತದೆ ಚಿತ್ರತಂಡ. ರಾಜೇಶ್ ರಾಮನಾಥ್ ಸಂಗೀತ ಚಿತ್ರಕ್ಕಿರುವುದು ವಿಶೇಷ. ಅವರ ಸಂಗೀತ ಇದ್ದರೆ ಚಿತ್ರ ಶೇ.65ರಷ್ಟು ಗೆದ್ದಂತೆ ಎಂಬ ಮಾತಿದೆ. ಅದಕ್ಕೆ ಪುಷ್ಟಿ ನೀಡುವಂತೆಯೂ ನವರಂಗಿ ಚಿತ್ರ ಮೂಡಿಬರುತ್ತಿದೆ.

  ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಜಿ.ಉಮೇಶ್. ಕಥೆ, ಚಿತ್ರಕಥೆ ಕೂಡ ನಿರ್ದೇಶಕರೇ ಹೆಣೆದಿದ್ದಾರೆ. ಹೊಸ ಹುಡುಗ ಪ್ರಾಣೇಶ್ ಚಿತ್ರದ ನಾಯಕ. ಚಿತ್ರದಲ್ಲಿ ಸತ್ಯಜಿತ್, ಲಯೇಂದ್ರ, ಸಾಧುಕೋಕಿಲ, ಉಮೇಶ್, ಟೆನ್ನಿಸ್ ಕೃಷ್ಣ ಸೇರಿದಂತ ಹಲವು ಕಲಾವಿದರಿದ್ದಾರೆ. ರೂಪಿಕಾ ಅವರ ನವರಂಗಿಯ ಪಂಚರಂಗಿ ಚಿತ್ರಗಳು ಸ್ಲೈಡ್ ನಲ್ಲಿ.... [ಖತರ್ನಾಕ್ ಚಿತ್ರವಿಮರ್ಶೆ]

  ನವರಸಭರಿತ ಚಿತ್ರವಿದು

  ನವರಸಭರಿತ ಚಿತ್ರವಿದು

  ಸೋಮಾರಿಯಾದ ನಾಯಕ ಹಳ್ಳಿಯಿಂದ ಪಟ್ಟಣ ಸೇರಿ ಹೀರೋ ಆಗುವ ಕಥೆಯೇ 'ನವರಂಗಿ'. ಚಿತ್ರದ ಶೀರ್ಷಿಕೆಗೆ ತಕ್ಕಂತೆ ನವರಸಗಳನ್ನು ಚಿತ್ರದಲ್ಲಿ ಕಾಣಬಹುದು ಎನ್ನುತ್ತದೆ ಚಿತ್ರತಂಡ.

  ಚಿತ್ರದಲ್ಲಿ ಹಾಸ್ಯರಸಕ್ಕೆ ಹೆಚ್ಚಿನ ಒತ್ತು

  ಚಿತ್ರದಲ್ಲಿ ಹಾಸ್ಯರಸಕ್ಕೆ ಹೆಚ್ಚಿನ ಒತ್ತು

  ಚಿತ್ರದಲ್ಲಿ ನವರಸಗಳಿದ್ದರೂ ಹೆಚ್ಚಿನ ಆದ್ಯತೆಯನ್ನು ಹಾಸ್ಯರಸಕ್ಕೆ ನೀಡಿದ್ದಾರೆ. ಈಗಾಗಲೆ ಸಾಧುಕೋಕಿಲಾ ಹಾಗೂ ಉಳಿದ ಹಾಸ್ಯ ಕಲಾವಿದರ ಸ್ಟಿಲ್ಸ್ ಬಿಡುಗಡೆಯಾಗಿರುವುದೇ ಇದಕ್ಕೆ ಸಾಕ್ಷಿ.

  ರೂಪಿಕಾ ಅವರ ಮೊದಲ ಹಾಸ್ಯ ಚಿತ್ರ

  ರೂಪಿಕಾ ಅವರ ಮೊದಲ ಹಾಸ್ಯ ಚಿತ್ರ

  ಇದೇ ಮೊದಲ ಬಾರಿಗೆ ರೂಪಿಕಾ ಅಭಿನಯಿಸಿರುವ ಹಾಸ್ಯ ಚಿತ್ರ ಇದಾಗಿದೆ. ಇತ್ತೀಚೆಗೆ ತೆರೆಕಂಡ 'ಖತರ್ನಾಕ್' ಚಿತ್ರದಲ್ಲಿ ರೂಪಿಕಾ ಮನಃಶಾಸ್ತ್ರದ ವಿದ್ಯಾರ್ಥಿನಿಯಾಗಿ ಅಭಿನಯಿಸಿದ್ದರು.

  ಕಥೆ ಗುಟ್ಟಾಗಿ ಇಟ್ಟಿರುವ ನಿರ್ದೇಶಕರು

  ಕಥೆ ಗುಟ್ಟಾಗಿ ಇಟ್ಟಿರುವ ನಿರ್ದೇಶಕರು

  ಇಷ್ಟಕ್ಕೂ ನವರಂಗಿ ಚಿತ್ರದ ಕಥೆ ಏನೆಂದರೆ ನಿರ್ದೇಶಕರು ಹೇಳುವುದು, ಇದು ಬೇರೆ ತರಹದ ಚಿತ್ರವಾಗಿದ್ದರೆ ಕಥೆ ಹೇಳಬಹುದಿತ್ತು. ಆದರೆ ಇದು ಪಕ್ಕಾ ಕಾಮಿಡಿ ಸಿನಿಮಾ ಆದ ಕಾರಣ ಕಥೆ ಈಗಲೇ ಹೇಳಿದರೆ ಥ್ರಿಲ್ ಇರಲ್ಲ ಎನ್ನುತ್ತಾರೆ.

  ಪಕ್ಕಾ ಹಾಸ್ಯ ಚಿತ್ರ ಜೊತೆಗೆ ನವರಂಗಿನಾಟ

  ಪಕ್ಕಾ ಹಾಸ್ಯ ಚಿತ್ರ ಜೊತೆಗೆ ನವರಂಗಿನಾಟ

  ಒಟ್ಟಾರೆಯಾಗಿ ಅವರು ಹೇಳುವುದು ಚಿತ್ರ ಆದಿಯಿಂದ ಅಂತ್ಯದವರೆಗೂ ಹಾಸ್ಯದ ಹೊನಲನ್ನು ಹರಿಸಲಿದೆ ಎಂಬ ಭರವಸೆಯನ್ನು ನಿರ್ದೇಶಕ ಉಮೇಶ್ ನೀಡಿದ್ದಾರೆ.

  ಇಬ್ಬರು ನಿರ್ಮಾಪಕರ ಚೊಚ್ಚಲ ಪ್ರಯತ್ನ

  ಇಬ್ಬರು ನಿರ್ಮಾಪಕರ ಚೊಚ್ಚಲ ಪ್ರಯತ್ನ

  ಶ್ರೀ ವೀರಭದ್ರೇಶ್ವರ ಮೂವಿ ಮೇಕರ್ಸ್ ಲಾಂಛನದಲ್ಲಿ ಉತ್ತರ ಕರ್ನಾಟಕ ಮೂಲದ ಅನಿವಾಸಿ ಭಾರತೀಯರಾದ ಸಂಗಮೇಶ್‌ ಮತ್ತು ಮಹಾದೇವಪ್ಪ ಹುಲಗತ್ತಿ ಚಿತ್ರಕ್ಕೆ ಹೂಡಿಕೆ ಮಾಡಿದ್ದಾರೆ.

  ನವರಂಗಿ ಚಿತ್ರದ ತಾಂತ್ರಿಕ ಬಳಗ

  ನವರಂಗಿ ಚಿತ್ರದ ತಾಂತ್ರಿಕ ಬಳಗ

  ಚಿತ್ರದ ತಾಂತ್ರಿಕ ಬಳಗದಲ್ಲಿ ರಾಜೇಶ್ ರಾಮನಾಥ್ ಸಂಗೀತ, ಕೆ.ಸಿ.ಉಮೇಶ್ ಛಾಯಾಗ್ರಹಣ, ಎಸ್ ನಾಗೇಂದ್ರ ಅರಸ್ ಸಂಕಲನ, ವಿ ಆನಂದ ಪ್ರಿಯ ಅವರ ಸಂಕಲನ ಚಿತ್ರಕ್ಕಿದೆ.

  ರೂಪಿಕಾ ಇಮೇಜ್ ಬದಲಾಗಿದೆ

  ರೂಪಿಕಾ ಇಮೇಜ್ ಬದಲಾಗಿದೆ

  ಇನ್ನು ರೂಪಿಕಾ ಅವರ ವಿಚಾರಕ್ಕೆ ಬರುವುದಾರೆ ಖತರ್ನಾಕ್ ಚಿತ್ರಗಳ ಬಳಿಕ ಅವರ ಇಮೇಜ್ ಬದಲಾಗಿದೆ. ಇದಕ್ಕೆ ತಕ್ಕಂತೆ ಅವಕಾಶಗಳೂ ಹುಡುಕಿಕೊಂಡು ಬರುತ್ತಿವೆ. ಆದರೆ ಸಿಕ್ಕ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳುತ್ತಿಲ್ಲ. ಪಾತ್ರಗಳನ್ನು ಅಳೆದು ತೂಗಿ ಆಯ್ಕೆ ಮಾಡುತ್ತಿದ್ದಾರಂತೆ ರೂಪಿಕಾ.

  English summary
  Here is the hot photos of Kannada actress Roopika from the movie Navarangi. The movie all set to release in December. The film is ready for release says G Umesh, who has penned the story, screenplay, dialogues and directed the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X