For Quick Alerts
  ALLOW NOTIFICATIONS  
  For Daily Alerts

  ಡ್ಯೂಪ್ ಇಲ್ಲದೆ ಸಾಹಸ, ನಟಿ ಸಂಯುಕ್ತ ಹೆಗ್ಡೆಗೆ ಗಾಯ

  |

  'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ ತಮ್ಮ ಹೊಸ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ತೀವ್ರ ಪೆಟ್ಟುಮಾಡಿಕೊಂಡಿದ್ದಾರೆ.

  ನಗರದ ಕಂಠೀರವ ಸ್ಟುಡಿಯೋದಲ್ಲಿ 'ಕ್ರೀಮ್' ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದ ನಟಿ ಸಂಯುಕ್ತಾ ಹೆಗ್ಡೆ ಡ್ಯೂಪ್ ಇಲ್ಲದೆ ಚಿತ್ರೀಕರಣ ಮಾಡಲು ಹೋಗಿ ಗಾಯಗೊಂಡಿದ್ದಾರೆ.

  ಕ್ರೀಮ್ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳಲ್ಲಿ ಸಂಯುಕ್ತಾ ಹೆಗ್ಡೆ ನಟಿಸಿದ್ದು ಸಿನಿಮಾದ ಆಕ್ಷನ್ ದೃಶ್ಯವೊಂದರ ಚಿತ್ರೀಕರಣ ಇಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಸಾಹಸ ನಿರ್ದೇಶಕರು, ಡ್ಯೂಪ್ ಬಳಸಿ ಚಿತ್ರೀಕರಣ ಮಾಡೋಣ ಎಂದಿದ್ದರಂತೆ, ಆದರೆ ಅದಕ್ಕೆ ಒಪ್ಪದೆ, ತಾವೇ ಆಕ್ಷನ್ ದೃಶ್ಯಗಳಲ್ಲಿ ನಟಿಸಲು ಮುಂದಾದ ಸಂಯುಕ್ತಾ ಹೆಗ್ಡೆ ಪೆಟ್ಟು ಮಾಡಿಕೊಂಡಿದ್ದಾರೆ.

  ಕಿಕ್ ಮಾಡುವಾಗ ಕಾಲಿನ ಮೂಳೆ ಸರಿದು ಸಂಯುಕ್ತಾಗೆ ತೀವ್ರ ಗಾಯವಾಗಿದೆ. ಚಿತ್ರೀಕರಣದ ಮಧ್ಯೆಯೇ ಕುಸಿದು ಬಿದ್ದ ಸಂಯುಕ್ತ ಹೆಗ್ಡೆಯವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಿರುವ ವೈದ್ಯರು ಕಾಲಿಗೆ ಬ್ಯಾಂಡೇಜ್ ಹಾಕಿದ್ದಾರೆ.

  ಆಸ್ಪತ್ರೆಯಿಂದಲೇ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸಂಯುಕ್ತಾ ಹೆಗ್ಡೆ, ''ಡ್ಯೂಪ್ ಬಳಸೋಣ ಎಂದು ಸಲಹೆ ನೀಡಿದರು. ಆದರೆ ನಾನು ಮಾರ್ಷಲ್ ಆರ್ಟ್ಸ್ ಕಲಿತಿದ್ದೀನಿ ಹಾಗಾಗಿ ನಾನೇ ಫೈಟ್ ದೃಶ್ಯಗಳಲ್ಲಿ ನಟಿಸಲು ಮುಂದಾದೆ. ಆಗ ಸ್ಲಿಪ್ ಆಗಿ ಹೀಗೆ ಗಾಯವಾಯಿತು'' ಎಂದಿದ್ದಾರೆ.

  ''ಮಾರ್ಷಲ್ ಆರ್ಟ್ಸ್ ಕಲಿತಿರುವ ನಾನು ಇದಕ್ಕಿಂತಲೂ ಅಪಾಯಕಾರಿ ಫೈಟ್ ದೃಶ್ಯಗಳಲ್ಲಿ ನಟಿಸಿದ್ದೀನಿ. ಆದರೆ ಈಗ ಗಾಯವಾಗಿದೆ. ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ. ಒಂದು ತಿಂಗಳ ಬಳಿಕ ನಡೆಯಲು ಪ್ರಾರಂಭಿಸುತ್ತೇನೆ'' ಎಂದಿದ್ದಾರೆ.

  Recommended Video

  Vikrant Rona Public Reaction | ಮೊದಲ ದಿನ ಪ್ರೇಕ್ಷಕ ಹೇಳಿದ್ದೇನು | Filmibeat Kannada
  English summary
  Sandalwood actress Samyuktha Hegde injured while shooting a fight sequence for her new Kannada movie Cream.
  Thursday, July 28, 2022, 10:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X