For Quick Alerts
  ALLOW NOTIFICATIONS  
  For Daily Alerts

  ಕನ್ನಡದ ನಲ್ಲ ಚಿತ್ರದ ಬೆಡಗಿ ಸಂಗೀತಾಗೆ ಹೆಣ್ಣು ಮಗು

  By Rajendra
  |

  ಕಿಚ್ಚ ಸುದೀಪ್ ನಾಯಕ ನಟನಾಗಿರುವ 'ನಲ್ಲ' ಚಿತ್ರದ ನಾಯಕಿ ಸಂಗೀತಾ ಈಗ ಹೆಣ್ಣು ಮಗುವಿನ ತಾಯಿ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಡಿಸೆಂಬರ್ 3ರಂದು ಸಂಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಅವರಿಗೆ ಚೊಚ್ಚಲ ಹೆರಿಗೆ.

  ಈ ಬಗ್ಗೆ 'ಪ್ರೇಮಲೋಕ' ಬೆಡಗಿ ಖುಷ್ಬೂ ಟ್ವೀಟಿಸಿದ್ದು, "ಹಾಯ್ ಕ್ರಿಷ್ ಹಾಗೂ ಸಂಗೀತಾ ಕಂಗ್ರಾಟ್ಸ್. ಹೊಸ ಲಿಟ್ಲ್ ಸ್ಟಾರ್ ನಿಮ್ಮ ಕುಟುಂಬದಲ್ಲಿ ಮತ್ತಷ್ಟು ಸಂತೋಷ ತರಲಿ. ತಾಯಿ ಮತ್ತು ಮಗುವಿಗೆ ಶುಭ ಕಾಮನೆಗಳು" ಎಂದಿದ್ದಾರೆ.

  ತಮಿಳಿನ 'ಪಿತಾಮಗನ್' ಹಾಗೂ ತೆಲುಗಿನ 'ಖಡ್ಗಂ' ಚಿತ್ರಗಳು ಸಂಗೀತಾ ಅಭಿನಯದ ಗಮನಾರ್ಹ ಚಿತ್ರಗಳು. ಉದಯೋನ್ಮುಖ ಗಾಯಕ ಕ್ರಿಶ್ ಅವರನ್ನು ಪ್ರೀತಿಸಿ ಫೆಬ್ರವರಿ 1, 2009ರಲ್ಲಿ ಅವರ ಕೈಹಿಡಿದರು ಸಂಗೀತಾ.

  90 ರ ದಶಕದಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ ಸಂಗೀತಾ, ಕಾಮಿಡಿಯನ್ ಆಲಿ ನಾಯಕತ್ವದ ಸಣ್ಣ ಬಜೆಟ್ ನ ಚಿತ್ರಗಳಲ್ಲಿ ನಟಿಸಿದ ನಂತರ ಕನ್ನಡದಲ್ಲಿ 'ವಜ್ರ' ಚಿತ್ರದಲ್ಲಿ ರಾಮ್ ಕುಮಾರ್ ಜತೆ ಹಾಗೂ 'ಬೆಂಗಳೂರ್ ಬಂದ್' ಚಿತ್ರದಲ್ಲಿ ನಟಿಸಿದ್ದರು.

  ಆಗ ಅವರ ಹೆಸರು ರಸಿಕಾ ಎಂದಾಗಿತ್ತು. ನಂತರ ತೆಲುಗಿನ 'ಖಡ್ಗಂ' ಚಿತ್ರದ ನಟನೆಯಿಂದ ಮನೆಮಾತಾದ ಮೇಲೆ ಹಿಂದುರಿಗಿ ನೋಡಲಿಲ್ಲ. ತಮಿಳಿನ ವಿಕ್ರಮ್, ಸೂರ್ಯ, ತೆಲುಗಿನ ರವಿತೇಜಾ ಜೊತೆ ನಟಿಸಿದ್ದಾರೆ.

  ತಮಿಳಿನ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಪಿತಾಮಗನ್ (ಕನ್ನಡದಲ್ಲಿ ಅನಾಥರು) ಹಾಗೂ ಕನ್ನಡಲ್ಲಿ ಸುದೀಪ್ ಜತೆಯಲ್ಲಿ ನಲ್ಲ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಫೆ. 1 ರಂದು ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಇಬ್ಬರು ಹಾರ ಬದಲಿಸಲಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು. (ಏಜೆನ್ಸೀಸ್)

  English summary
  Actress Sangeetha who married singer Krish in 2009 gave birth to a baby girl at a private hopspital in Chennai on Monday (Dec 3, 2012). Kushboo tweeted "Hey Krrishsinger n Sanu congratulations at the arrival of an angel who will add more love to ur family...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X