»   » ನಟಿ ಸಂಜನಾಗೆ ರಾತ್ರಿ ಕರೆಗಳು, ಫುಲ್ ಡೀಟೇಲ್

ನಟಿ ಸಂಜನಾಗೆ ರಾತ್ರಿ ಕರೆಗಳು, ಫುಲ್ ಡೀಟೇಲ್

Posted By:
Subscribe to Filmibeat Kannada

ನಟಿ ಸಂಜನಾ ಗಲ್ರಾಣಿಗೆ ಅನಾಮಿಕನೊಬ್ಬ ರಾತ್ರಿ ವೇಳೆ ಕರೆ ಮಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡದಿದ್ದರೂ ತಮ್ಮ ಸಂಕಟವನ್ನು ಟ್ವಿಟ್ಟರ್ ನಲ್ಲಿ ತೋಡಿಕೊಂಡಿದ್ದಾರೆ. ಕರೆ ಮಾಡಿ ಟಾರ್ಚರ್ ಕೊಡುತ್ತಿದ್ದವನ ನಂಬರ್ ಸಹ ಹಾಕಿ ಅವನನ್ನು ವಿಚಾರಿಕೊಳ್ಳುವ ಚಾನ್ಸ್ ಅಭಿಮಾನಿಗಳಿಗೇ ಬಿಟ್ಟಿದ್ದಾರೆ.

ಕಳೆದ ಒಂದು ವಾರದಿಂದ ಸಂಜನಾ ಅವರು ತೀವ್ರ ಯಾತನೆ ಅನುಭವಿಸಿದ್ದಾರಂತೆ. ಒಂದಷ್ಟು ಜನ ಕುಡಿದು ಯಾವಾಗಂದ್ರೆ ಆವಾಗ ಸಂಜನಾರಿಗೆ ಕರೆ ಮಾಡಿ ಕಿರಿಕಿರಿ ಕೊಡುತ್ತಿದ್ದಾರೆ. ಒಮ್ಮೊಮ್ಮೆ ಮಧ್ಯರಾತ್ರಿ ವೇಳೆಯಲ್ಲೂ ಕರೆಗಳು ಬರುತ್ತಿವೆಯಂತೆ. [ನಟಿ ಸಂಜನಾ ಬಗ್ಗೆ ನಿಮಗೆ ತಿಳಿದಿರದ ರಹಸ್ಯಗಳು]

ಈ ರೀತಿ ಕಿರುಕುಳ ಕೊಡುತ್ತಿರುವವರನ್ನು ತರಾಟೆಗೆ ತೆಗೆದುಕೊಳ್ಳೋಣ ಎಂದು ಅವರು ಕಾಲ್ ರಿಸೀವ್ ಮಾಡುತ್ತಿದ್ದರಂತೆ. ಆದರೆ ಆ ಕಡೆಯವರು ಕುಡಿದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಈ ಬಗ್ಗೆ ನಾನು ಪೊಲೀಸ್ ಕಂಪ್ಲೇಂಟ್ ಕೊಡೋಣ ಎಂದಿದ್ದೆ. ಆದರೆ ಎಷ್ಟು ಬಾರಿ ಪೊಲೀಸರಿಗೆ ಕಂಪ್ಲೇಂಟ್ ಕೊಡಲು ಸಾಧ್ಯ.

ಅಭಿಮಾನಿಗಳು ಕರೆ ಮಾಡುತ್ತಿರುತ್ತಾರೆ

ಸಾಕಷ್ಟು ಸಲ ಅಭಿಮಾನಿಗಳು ಕರೆ ಮಾಡಿ ನಿಮ್ಮ ಆ ಸಿನಿಮಾ ಇಷ್ಟವಾಯ್ತು, ಈ ಪಾತ್ರ ಇಷ್ಟವಾಯಿತು ಎಂದು ಹೇಳುತ್ತಿರುತ್ತಾರೆ. ಕೆಲವರಂತೂ ತೀರಾ ವೈಯಕ್ತಿಕ ವಿಚಾರಗಳನ್ನು ಕೇಳಿಬಿಡುತ್ತಾರೆ. ಅಂತಹರವನ್ನು ಹೇಗೆ ನಿಭಾಯಿಸಬೇಕು ಎಂದು ತಮಗೆ ಗೊತ್ತು. ಆದರೆ ಈ ರೀತಿ ಯಾವಾಗಂದ್ರೆ ಆವಾಗ ಕರೆ ಮಾಡುವವರನ್ನು ಹೇಗೆ ನಿಭಾಯಿಸುವುದು? ಎನ್ನುತ್ತಾರೆ ಸಂಜನಾ.

ಅನಾಮಿಕನ ಫೋನ್ ನಂಬರ್ ಇದೇ

ಕಳೆದ ಮೂರು ದಿನಗಳಿಂದ ತಮಗೆ 09886201455 ಈ ಫೋನ್ ನಂಬರ್ ನಿಂದ ಕರೆಬರುತ್ತಿದೆ. ಅವರ್ಯಾರು ಎಂದು ತಮಗೆ ಗೊತ್ತಿಲ್ಲ. ರಾತ್ರಿ 2 ಗಂಟೆ ಆಗಿತ್ತು. ತಂಗಿ ಪಕ್ಕದಲ್ಲಿ ಮಲಗಿದ್ದರು. ಆ ಸಮಯದಲ್ಲಿ ಕರೆ ಮಾಡಿದ್ದಾರೆ. ನಾನು ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಗೊತ್ತಾಗಲಿಲ್ಲ.

ತಮ್ಮ ಸಂಕಟ ಅಭಿಮಾನಿಗಳ ಮುಂದಿಟ್ಟಿದ್ದೇನೆ

ಕೊನೆಯದಾಗಿ ಸಂಜನಾ ಅವರು ತಮ್ಮ ಸಂಕಟವನ್ನು ಹೇಳಿಕೊಂಡಿದ್ದು ಅಭಿಮಾನಿಗಳ ಮುಂದೆ. ಟ್ವಿಟ್ಟರ್ ನಲ್ಲಿ ತಮಗಾದ ನೋವನ್ನು ಹಂಚಿಕೊಂಡರು. ತಮಗೆ ಕರೆ ಬರುತ್ತಿರುವ ಫೋನ್ ನಂಬರನ್ನೂ ಕೊಟ್ಟಿದ್ದಾರೆ. ಸಂಜನಾ ಅಭಿಮಾನಿಗಳು ಕರೆ ಮಾಡಿದ ಅನಾಮಿಕನಿಗೆ ವಾಚಾಮಗೋಚರ ಬೆಂಡೆತ್ತಿದ್ದಾರೆ.

ಈಗ ಕೈಕಾಲು ಮುಗೀತೀನಿ ಅಂತಿದ್ದಾನೆ

ಈಗ ಅನಾಮಿಕ ಸಂಜನಾಗೆ ಕರೆ ಮಾಡಿ ಫ್ರೆಂಡ್ಸ್ ಜೊತೆ ಪಾರ್ಟಿಯಲ್ಲಿ ಕುಡಿದು ಹೀಗೆ ಅಸಭ್ಯವಾಗಿ ವರ್ತಿಸಿಬಿಟ್ಟೆ. ತಪ್ಪಾಯಿತು ಕ್ಷಮಿಸಿ. ಟ್ವಿಟ್ಟರ್ ನಿಂದ ನನ್ನ ಮೊಬೈಲ್ ನಂಬರನ್ನು ದಯವಿಟ್ಟು ತೆಗೆಯಿರಿ. ಕೈಕಾಲು ಮುಗೀತೀನಿ. ಪ್ಲೀಸ್ ನನ್ನನ್ನು ದಯವಿಟ್ಟು ಬಿಟ್ಟುಬಿಡಿ ಎಂದು ಮೆಸೇಜ್ ಕಳುಹಿಸಿ ಗೋಗರೆಯುತ್ತಿದ್ದಾನೆ ಎಂದು ಸಂಜನಾ ಹೇಳಿದ್ದಾರೆ.

ನಮಗೆ ಪ್ರೈವೇಸಿ ಅನ್ನುವುದೇ ಇಲ್ವಾ

ಪ್ರತಿವಾರ ನನಗೆ ಈ ರೀತಿ ಫೋನ್ ಮಾಡುತ್ತಿರುತ್ತಾರೆ. ನಮಗೆ ಮಾಡಕ್ಕೆ ಬೇರೆ ಕೆಲಸ ಇಲ್ವಾ, ಹಾಗಾಗಿ ಕಂಪ್ಲೇಂಟ್ ಕೊಡಕ್ಕೆ ಹೋಗಲಿಲ್ಲ. ಈ ನಂಬರನ್ನು ಬ್ಲಾಕ್ ಮಾಡಿದರೆ, ಇನ್ನೊಂದು ನಂಬರಿಂದ ಮಾಡುತ್ತಾರೆ. ನಮಗೆ ಪ್ರೈವೇಸಿ ಅನ್ನುವುದೇ ಇಲ್ವಾ. ಕಳೆದ ಮೂರು ದಿನಗಳಿಂದ ಇದೇ ರೀತಿ ಆಗುತ್ತಿತ್ತು.

ರೋಸಿ ಹೋಗಿ ಟ್ವಿಟ್ಟರ್ ಮೊರೆ ಹೋದೆ

ರೋಸಿ ಹೋಗಿ ಕಡೆಗೆ ಟ್ವಿಟ್ಟರ್ ನಲ್ಲಿ ನನ್ನ ಸಂಕಟ ತೋಡಿಕೊಂಡೆ. ಇಂಥವರಿಂದ ನನಗೆ ಕರೆ ಬರುತ್ತಿದೆ. ಏನು ಮಾಡಬೇಕು ಎಂದು ಅಭಿಮಾನಿಗಳನ್ನು ಕೇಳಿದೆ. ಯಾರಿಂದ ಕರೆಬರುತ್ತಿದೆ ನಂಬರ್ ಕೊಡಿ ಎಂದು ಫ್ಯಾನ್ಸ್ ಕೇಳಿದರು, ಕೊಟ್ಟೆ.

ಹೋಗೆ ಬಾರೆ ಎಂದೆಲ್ಲಾ ಮಾತನಾಡುತ್ತಿದ್ದಾರೆ

ನನ್ನ ಪ್ರೈವೆಸಿಗೆ ಅವರು ಮರ್ಯಾದೆ ಕೊಡಲಿಲ್ಲ ಅಂದ್ರೆ ಅವರ ಪ್ರೈವೇಸಿಗೆ ನಾನ್ಯಾಕೆ ಮರ್ಯಾದೆ ಕೊಡಬೇಕು ಅನ್ನಿಸಿ ಅವರ ನಂಬರ್ ಕೊಟ್ಟಿದ್ದೇನೆ. ರಾತ್ರಿ ಎರಡು ಗಂಟೆಗೆ ಕುಡಿದಿರುವ ಹುಡುಗರು ಗುಂಪಲ್ಲಿ ಕರೆ ಮಾಡಿ ಹೋಗೆ ಬಾರೆ ಎಂದೆಲ್ಲಾ ಮಾತನಾಡುತ್ತಿದ್ದಾರೆ. ನನ್ನನ್ನು ಏಕವಚನದಲ್ಲಿ ಮಾತನಾಡು ಹಕ್ಕು ಅವರಿಗೆ ಏನಿದೆ? ಎಂದಿದ್ದಾರೆ ಸಂಜನಾ.

ಮೇಡಂ ನಿಮ್ಮ ಕಾಲಿಗೆ ಬೀಳ್ತೀನಿ ಎಂದು ಗೋಗರೆಯುತ್ತಿದ್ದಾನೆ

ಅಭಿಮಾನಿಗಳಾದರೆ ಕರೆ ಮಾಡಿ ಪ್ರೀತಿ ತೋಡಿಕೊಳ್ಳುತ್ತಾರೆ. ನಮ್ಮ ಬಗ್ಗೆ ಪ್ರೀತಿ ವ್ಯಕ್ತಪಡಿಸಿ ಮಾತನಾಡುತ್ತಾರೆ. ಆದರೆ ಇವರ್ಯಾರೋ ರಾತ್ರಿ ಹೊತ್ತು ಕರೆ ಮಾಡಿ ನನ್ನ ನೆಮ್ಮದಿ ಕೆಡಿಸಿದ್ದಾರೆ. ಮೇಡಂ ನಿಮ್ಮ ಕಾಲಿಗೆ ಬೀಳ್ತೀನಿ ಎಂದು ಗೋಗರೆಯುತ್ತಿದ್ದಾರೆ. ಈಗ ಅವರಿಗೆ ಬುದ್ಧಿ ಬಂದಂತಿದೆ ಎಂದು ಸಂಜನಾ ಕಿಲಕಿಲ ಎಂದು ನಕ್ಕರು.

ನಟಿ ಸಂಜನಾಗೆ ರಾತ್ರಿ ಕರೆಗಳು,

ನಟಿ ಸಂಜನಾಗೆ ರಾತ್ರಿ ಕರೆಗಳು, ಫುಲ್ ಡೀಟೇಲ್

ನಟಿ ಸಂಜನಾಗೆ ರಾತ್ರಿ ಕರೆಗಳು,

ನಟಿ ಸಂಜನಾಗೆ ರಾತ್ರಿ ಕರೆಗಳು, ಫುಲ್ ಡೀಟೇಲ್

English summary
Kannada actress Sanjjana harassed by anonymous calls in midnight. Over the past one week she is distressed such calls. Finally, the actress just decided to seek the help of her Twitter followers, by posting the number of her harasser.
Please Wait while comments are loading...