For Quick Alerts
  ALLOW NOTIFICATIONS  
  For Daily Alerts

  ಮಂಚಕ್ಕೆ ಕರೆದವರ ಮಾವನ ಮನೆಗೆ ಅಟ್ಟಿದ ನಟಿ

  By ರವಿಕಿಶೋರ್
  |

  ಸಿನೆಮಾ ನಟಿಯೊಬ್ಬರನ್ನು ಮಂಚಕ್ಕೆ ಆಹ್ವಾನಿಸಿದ ಇಬ್ಬರು ಕೀಚಕರು ಈಗ ಮಾವನ ಮನೆ ಕಂಬಿ ಎಣಿಸುವಂತಾಗಿದೆ. ಮೊದಲು ತಾರೆಗೆ ಐಟಂ ಡಾನ್ಸ್ ನಲ್ಲಿ ಆಫರ್ ಕೊಡುವುದಾಗಿ ಹೇಳಿ ಬಳಿಕ ಪಲ್ಲಂಗಕ್ಕೆ ಆಹ್ವಾನಿಸಿದ್ದಾರೆ. ತಿರಸ್ಕರಿಸಿದ ನಟಿಗೆ ಕಿರುಕುಳ ಕೊಡಲು ಆರಂಭಿಸಿದ್ದಾರೆ. ಈಗ ಪೊಲೀಸರ ಆತಿಥ್ಯವನ್ನು ಸ್ವೀಕರಿಸುತ್ತಿದ್ದಾರೆ.

  ಸಪ್ನಾ ಎಂಬ ತಾರೆ ಕೊಟ್ಟ ದೂರಿನ ಮೇರೆಗೆ ಮುಂಬೈ ವರ್ಸೋವಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಜೈಸ್ವಾಲ್ ಹಾಗೂ ಪಾಂಡೆ ಎಂಬುವವರೆ ಬಂಧಿತ ಆರೋಪಿಗಳು. ಇವರಿಬ್ಬರೂ ಸಪ್ನಾಗೆ ಐಟಂ ಡಾನ್ಸ್ ಆಫರ್ ನೀಡುವುದಾಗಿ ಹೇಳಿ ಬಳಿಕ ತಮ್ಮ ಲೈಂಗಿಕ ಆಸೆ ನೆರವೇರಿಸುವಂತೆ ಕೇಳಿಕೊಂಡಿದ್ದರು.

  ಇದಕ್ಕೆ ನಿರಾಕರಿಸಿದ ಕಾರಣ ಬಳಿಕ ಈಕೆಯ ಮೊಬೈಲ್ ಫೋನಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದಾರೆ. ಈಕೆಯ ಸೋಷಿಯಲ್ ನೆಟ್ ವರ್ಕ್ ಸೈಟಿನಲ್ಲೂ ಈಕೆಯ ಫೋಟೋಗಳನ್ನು ಅಶ್ಲೀಲವಾಗಿ ಸೃಷ್ಟಿಸಿ ಪೋಸ್ಟ್ ಮಾಡಿದ್ದಾರೆ.

  ಬಳಿಕ ಈಕೆ ತನ್ನ ಮೊಬೈಲ್ ನಲ್ಲಿ ಇವರಿಬ್ಬರ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಪ್ನಾ ಕೊಟ್ಟ ದೂರಿನ ಮೇರೆ ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ. ಇವರು ಬಳಸಿರುವ ಕಂಪ್ಯೂಟರ್ ಗಳ ಐಪಿ ವಿಳಾಸಗಳೂ ಹೊಂದಾಣಿಕೆಯಾಗಿವೆ.

  ಇವರಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇವರು ಇದೇ ಮೊದಲ ಬಾರಿಗೆ ಈ ರೀತಿ ವರ್ತಿಸಿದ್ದಾರೆಯೇ ಅಥವಾ ಹಿಂದೆಯೂ ಇದೇ ರೀತಿ ಮಾಡಿದ್ದಾರೆಯೇ ಎಂಬುದು ತಮ್ಮದೇ ಆದ ಶೈಲಿಯಲ್ಲಿ ಬಾಯ್ಬಿಡಿಸುತ್ತಿದ್ದಾರೆ.

  English summary
  Versova police arrested a small-time writer and a film producer for allegedly sending lewd messages to Sapna, an actress, on her mobile phone, and posting vulgar comments about her on a social networking website.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X