»   » 'ಕಾಮನಬಿಲ್ಲು' ಸರಿತಾ ಸಂಸಾರದಲ್ಲಿ 'ತಪ್ಪಿದ ತಾಳ'

'ಕಾಮನಬಿಲ್ಲು' ಸರಿತಾ ಸಂಸಾರದಲ್ಲಿ 'ತಪ್ಪಿದ ತಾಳ'

By: ಉದಯರವಿ
Subscribe to Filmibeat Kannada

ಎಪ್ಪತ್ತು, ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರಪ್ರೇಮಿಗಳನ್ನು ಅಪಾರವಾಗಿ ಕಾಡಿದ ತಾರೆ ಸರಿತಾ (54). ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ತನ್ನದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಂತಹ ಅಭಿನೇತ್ರಿಯ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ.

ತನ್ನ ಪತಿಯ ಕಿರುಕುಳದಿಂದ ನೊಂದ ಘಟನೆ ಬೆಳಕಿಗೆ ಬಂದಿದೆ. ಮಲಯಾಳಂ ಜನಪ್ರಿಯ ನಟ ಮುಕೇಶ್ ಅವರನ್ನು 1988ರಲ್ಲಿ ವರಿಸಿದ್ದರು. ಇವರ ಅನುರೂಪ ದಾಂಪತ್ಯದ ಫಲವೇ ಶ್ರಾವಣ್ ಮತ್ತು ತೇಜಸ್.

ಈಗ ತನಗೆ ವಿಚ್ಛೇದನ ನೀಡದೆ ತಮ್ಮ ಪತಿ ಮುಕೇಶ್ ಮತ್ತೊಬ್ಬರನ್ನು ವರಿಸಿದ್ದಾರೆ ಎಂದು ಸರಿತಾ ಆರೋಪಿಸಿದ್ದಾರೆ. ಮುಕೇಶ್ ಅವರು ನೃತ್ಯ ಕಲಾವಿದೆ ಮೆಥಿಲ್ ದೇವಿಕಾರನ್ನು ಮದುವೆಯಾಗಿದ್ದಾರೆ. ಇದು ಅಕ್ರಮ ಮದುವೆ ಎಂಬುದು ಸರಿತಾ ಆರೋಪ.

ಮಕ್ಕಳ ಜೊತೆ ದುಬೈನಲ್ಲಿರುವ ಸರಿತಾ

ಸದ್ಯಕ್ಕೆ ಸರಿತಾ ಅವರು ತಮ್ಮ ಇಬ್ಬರು ಪುತ್ರರ ಜೊತೆ ದುಬೈನಲ್ಲಿ ನೆಲೆಸಿದ್ದಾರೆ. 2007ರಲ್ಲೇ ಸರಿತಾ ಮತ್ತು ಮುಕೇಶ್ ವಿಚ್ಛೆದನಕ್ಕೆ ಮೊರೆ ಹೋಗಿದ್ದರು. 2009ರಲ್ಲಿ ಇವರಿಬ್ಬರಿಗೂ ವಿಚ್ಛೇದನಕ್ಕೆ ಅನುಮತಿ ನೀಡಲಾಗಿದೆ ಎನ್ನುತ್ತವೆ ಮೂಲಗಳು.

ಸರಿತಾ ಅವರಿಗೂ ಇದು ಎರಡನೇ ಮದುವೆ

ಮುಕೇಶ್ ಅವರನ್ನು ಕೈಹಿಡಿಯುವುದಕ್ಕೂ ಮುನ್ನ ಸರಿತಾ ಅವರಿಗೆ 16ನೇ ವಯಸ್ಸಿನಲ್ಲೇ ತೆಲುಗು ನಟ ವೆಂಕಟ ಸುಬ್ಬಯ್ಯ ಎಂಬುವವರ ಜೊತೆ ಮದುವೆಯಾಗಿತ್ತು. ಆದರೆ ಆ ಮದುವೆ ಬಹಳ ಕಾಲ ನಿಲ್ಲಲಿಲ್ಲ. ಆರು ತಿಂಗಳಿಗೇ ಮುರಿದುಬಿತ್ತು. 1988ರಲ್ಲಿ ಸುಬ್ಬಯ್ಯ ಅವರಿಂದ ಸರಿತಾ ವಿಚ್ಛೇದನ ಪಡೆದಿದ್ದರು.

ಸರಿತಾ ಅಭಿನಯದ ಕನ್ನಡ ಚಿತ್ರಗಳು

ಕನ್ನಡದ ಬಹಳಷ್ಟು ಸದಭಿರುಚಿಯ ಚಿತ್ರಗಳಲ್ಲಿ ಸರಿತಾ ಅವರು ಅಭಿನಯಿಸಿದ್ದಾರೆ. ಅವುಗಳಲ್ಲಿ ತಪ್ಪಿದ ತಾಳ, ಚಲಿಸುವ ಮೋಡಗಳು, ಹೊಸಬೆಳಕು, ಎರಡು ರೇಖೆಗಳು, ಭಕ್ತ ಪ್ರಹ್ಲಾದ, ಕಾಮನಬಿಲ್ಲು, ಬ್ರಹ್ಮಗಂಟು, ಮುಗಿಲ ಮಲ್ಲಿಗೆ, ಬಾಳೊಂದು ಭಾವಗೀತೆ ಮುಂತಾದ ಚಿತ್ರಗಳನ್ನು ಹೆಸರಿಸಬಹುದು.

ಮುಕೇಶ್ ಒಬ್ಬ ಪ್ರತಿಭಾವಂತ ನಟ

ಮಲೆಯಾಳಂನ ಮುಕೇಶ್ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಂ ಚಿತ್ರರಂಗ ಕಂಡಂತಹ ಒಬ್ಬ ಪ್ರತಿಭಾವಂತ ನಟ.

ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದ ಸರಿತಾ

ಸರಿತಾ ಅವರ ಆಪಾದನೆ ಏನೆಂದರೆ, ನಾನು ಭಾರತದಲ್ಲಿಲ್ಲದ ವೇಳೆ ಮುಕೇಶ್ ನನಗೆ ವಿಚ್ಛೇದನ ಇನ್ನೊಂದು ಮದುವೆಯಾಗಿದ್ದಾರೆ. ನನಗೆ ಜೀವನಾಂಶವನ್ನೂ ಕೊಟ್ಟಿಲ್ಲ. ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದಿದ್ದಾರೆ.

English summary
Yesteryear Kannada actress Saritha has accused Malayalam actor Mukesh of committing an illegal act of bigamy. Mukesh, who has acted in close to 300 Malayalam films, entered into wedlock for the second time last week. He married danseuse Methil Devika at a function held at his residence in Kerala.
Please Wait while comments are loading...