For Quick Alerts
  ALLOW NOTIFICATIONS  
  For Daily Alerts

  Shwetha Srivatsav Workout Video: ಗ್ಲಾಮರ್ ಲುಕ್‌ನಲ್ಲಿರುವ ಶ್ವೇತಾ ಶ್ರಿವಾತ್ಸವ್ ವಿಡಿಯೋ ಸಿಕ್ಕಾಪಟ್ಟೆ ವೈರಲ್!

  |

  ಸೋಷಿಯಲ್ ಮೀಡಿಯಾ ಪ್ರಭಾವ ಹೆಚ್ಚಾಗುತ್ತಿದ್ದ ಹಾಗೆ, ಸಿನಿಮಾ ತಾರೆಯರು ಅಭಿಮಾನಿಗಳಿಗೆ ಸಿಗುವುದು ಸುಲಭವಾಗಿದೆ. ತಾರೆಯರು ಏನೆ ಇದ್ದರು ಈಗ ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ. ಸಿನಿಮಾ ಬಗ್ಗೆ ಆಗಿರಲಿ, ವೈಯಕ್ತಿಕ ಜೀನದ ಬಗ್ಗೆ ಆಗಿರಲಿ ಎಲ್ಲವನ್ನು ಸಾಮಾಜಿಕ ಜಾಲತಾಣದ ಮೂಲಕವೇ ಹಂಚಿಕೊಳ್ಳುತ್ತಾರೆ.

  ಅದರಲ್ಲೂ ನಟಿಯರು ರೀಲ್ಸ್‌ಗಳನ್ನು ಮಾಡುತ್ತಾ ಸದಾ ಸಕ್ರಿಯವಾಗಿ ಇರುತ್ತಾರೆ. ಟ್ರೆಂಡಿಂಗ್‌ನಲ್ಲಿ ಇರುವ ಹಾಡುಗಳು ಮತ್ತು ವಿಡಿಯೋಗಳಿಗೆ ಹೆಚ್ಚಾಗಿ ರೀಲ್ಸ್ ಮಾಡುತ್ತಾರೆ. ಇದೇ ಸಾಲಿನಲ್ಲಿ ನಟಿ ಶ್ವೇತಾ ಶ್ರಿವಾತ್ಸವ್ ಕೂಡ ಇದ್ದಾರೆ. ಈಕೆ ಯಾವುದೋ ಒಂದು ಸ್ಟೈಲ್‌ಗೆ ಸೀಮಿತಾ ಆಗಿಲ್ಲ. ಒಮ್ಮೆ ಸೀರೆಯುಟ್ಟು ಕಾಣಿಸಿ ಕೊಂಡರೆ ಮತ್ತೊಮ್ಮೆ ಜಿಮ್ ಸೂಟ್‌ನಲ್ಲಿ ಮಿಂಚುತ್ತಾರೆ.

  ನಿವೇದಿತಾಗೆ ಕಿಸ್ ಮಾಡಲು ಮಿಸ್ ಮಾಡಿಕೊಂಡ ಚಂದನ್: ದಂಪತಿ ಕಾಲೆಳೆದ ನೆಟ್ಟಿಗರು!ನಿವೇದಿತಾಗೆ ಕಿಸ್ ಮಾಡಲು ಮಿಸ್ ಮಾಡಿಕೊಂಡ ಚಂದನ್: ದಂಪತಿ ಕಾಲೆಳೆದ ನೆಟ್ಟಿಗರು!

  ಅದರಲ್ಲೂ ಕೂಡ ಶ್ವೇತಾ ಮಾಡುವ ಪುಟ್ಟ ಡ್ಯಾನ್ಸ್ ವಿಡಿಯೋಗಳಿಗೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ದಿನಕ್ಕೂಂದು ವಿಡಿಯೋವನ್ನಾದರು ಶ್ವೇತಾ ಅಪ್ಲೋಡ್ ಮಾಡುತ್ತಾರೆ. ಈಕೆಯ ಎನರ್ಜಿಗೆ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಾಗಿದ್ದರೆ ಶ್ವೇತಾ ಅವರ ವೈವಿಧ್ಯಮಯ ಪ್ರಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಮುಂದೆ ಓದಿ...

  Niveditha Gowda: ಹಾಟ್ ಅವತಾರದಲ್ಲಿ ನಿವೇದಿತಾ ಗೌಡ ಅಚ್ಚರಿಯ ಲುಕ್!Niveditha Gowda: ಹಾಟ್ ಅವತಾರದಲ್ಲಿ ನಿವೇದಿತಾ ಗೌಡ ಅಚ್ಚರಿಯ ಲುಕ್!

  ಸಿಂಪಲ್ ಸುಂದರಿ ಫಿಟ್ನೆಸ್ ಫ್ರೀಕ್!

  ನಟಿ ಶ್ವೇತಾ ಶ್ರಿವಾತ್ಸವ್ ಫಿಟ್ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಹಾಗಾಗಿ ಒಂದಷ್ಟು ವರ್ಕೌಟ್ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಜಿಮ್ ಸೂಟ್ ತೊಟ್ಟು ವರ್ಕೌಟ್ ಮಾಡುವ ವಿಡಿಯೋಗಳನ್ನು ಹೆಚ್ಚಾಗಿ ಅಪ್ಲೋಡ್ ಮಾಡುತ್ತಾರೆ. ಇತ್ತೀಚೆಗೆ ಸಣ್ಣ ಆಗಿರುವ ಶ್ವೇತಾ ಅವರು ಮತ್ತೊಬ್ಬರಿಗೂ ತಮ್ಮ ಎನರ್ಜಿಟಿಕ್ ವಿಡಿಯೋಗಳ ಮೂಲಕ ಸ್ಪೂರ್ತಿ ತುಂಬುತ್ತಾ ಇದ್ದಾರೆ.

  ಮಗಳು ಅಶ್ಮಿತಾ ಜೊತೆಗೂ ಶ್ವೇತಾ ವರ್ಕೌಟ್!

  ಇನ್ನು ನಟಿ ಶ್ವೇತಾ ಶ್ರಿವಾತ್ಸವ್ ಗೆ ಇರುವ ಬೆಸ್ಟ್ ಪಾರ್ಟನರ್ ಅಂದರೆ ಅದು ಅವರ ಮಗಳು ಅಶ್ಮಿತಾ. ಅಮ್ಮನ ಜೊತೆಗೆ ಸೇರಿಕೊಂಡು ಅಶ್ಮಿತಾ ಆಗಾಗ ವರ್ಕೌಟ್ ಮಾಡುತ್ತಾಳೆ. ಮಗಳ ವಿಡಿಯೋ ಹಂಚಿಕೊಂಡ ಶ್ವೇತಾ ನನ್ನ ಬೆಸ್ಟ್ ಜಿಮ್ ಪಾರ್ಟ್ನರ್ ಅಶ್ಮಿತಾ ಎಂದು ತಮ್ಮ ಪೋಸ್ಟ್‌ಗಳಲ್ಲಿ ಬರೆದುಕೊಂಡಿದ್ದಾರೆ. ಅಶ್ಮಿತಾ ಕೂಡ ಮುದ್ದಾಗಿ ವರ್ಕೌಟ್ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಾಳೆ.

  ಶ್ವೇತಾ ಹಾಟ್‌ ಲುಕ್‌ಗೆ ಅಭಿಮಾನಿಗಳು ಫಿದಾ!

  ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ನಾಯಕಿ ಆಗಿ ಎಂಟ್ರಿ ಕೊಟ್ಟ ಶ್ವೇತಾ ಶ್ರಿವಾತ್ಸವ್ ಮಗು ಆದ ಬಳಿಕ ಕೊಂಚ ಗ್ಯಾಪ್ ತೆಗೆದು ಕೊಂಡಿದ್ದರು. ಈಗ ಮತ್ತೆ ಕಮ್ ಬ್ಯಾಕ್ ಮಾಡುತ್ತಾ ಇದ್ದಾರೆ. ಗ್ಲಾಮಸರ್ ಲುಕ್ ಹಾಗೆ ಕಾಪಾಡಿಕೊಂಡು ಬಂದಿರುವ ನಟಿ ಶ್ವೇತಾ ತಮ್ಮ ಇನ್‌ಸ್ಟಾ ರೀಲ್‌ಗಳಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಶ್ವೇತಾಳ ಈ ಗ್ಲಾಮ್ ಲುಕ್‌ಗೆ ಮಹಿಳಾ ಮಣಿಯರು ಕಮೆಂಟ್ ಬಾಕ್ಸ್‌ನಲ್ಲಿ ಜೈಕಾರ ಹಾಕುತ್ತಾ ಇರುತ್ತಾರೆ.

  ಜಗ್ಗೇಶ್ ಜೊತೆಗೆ ಶ್ವೇತಾ ಕಮ್‌ಬ್ಯಾಕ್!

  ಮಗು ಆದ ಬಳಿಕ ಸಣ್ಣ ಗ್ಯಾಪ್‌ ತೆಗೆದುಕೊಂಡು ಮತ್ತೆ ಸಿನಿ ಜರ್ನಿಯನ್ನು ಶ್ವೇತಾ ಮುಂದುವರೆಸಿದ್ದಾರೆ. ಸದ್ಯ ನಟ ಜಗ್ಗೇಶ್ ಜೊತೆಗೆ 'ರಾಘವೇಂದ್ರ ಸ್ಟೋರ್‌' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ವೇತಾ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ಶೂಟಿಂಗ್ ಹಂತದಲ್ಲಿ ಇದ್ದು, ಸದ್ಯದಲ್ಲೇ ಶ್ವೇತಾ ಅವರ ಲುಕ್ ರಿವೀಲ್ ಆಗಲಿದೆ.

  English summary
  Actress Shwetha Srivatsav New Workout Video Went Viral
  Friday, March 25, 2022, 9:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X