»   » ಕಂದನ ನಿರೀಕ್ಷೆಯಲ್ಲಿ ಸ್ನೇಹಾ; ಶೀಘ್ರದಲ್ಲೇ ಗುಡ್ ನ್ಯೂಸ್

ಕಂದನ ನಿರೀಕ್ಷೆಯಲ್ಲಿ ಸ್ನೇಹಾ; ಶೀಘ್ರದಲ್ಲೇ ಗುಡ್ ನ್ಯೂಸ್

Posted By:
Subscribe to Filmibeat Kannada

ಕನ್ನಡದ 'ಒಗ್ಗರಣೆ' ಚಿತ್ರದಲ್ಲಿ ಪ್ರಕಾಶ್ ರೈ ಜೊತೆ ಅಭಿನಯಿಸಿರುವ ಸ್ನೇಹಾ ಈಗ ಚೊಚ್ಚಲ ಕಂದನ ನಿರೀಕ್ಷೆಯಲ್ಲಿದ್ದಾರೆ. ನಟ ಪ್ರಸನ್ನ ಅವರನ್ನು ಕೈಹಿಡಿದು ಮೂರು ವರ್ಷಗಳಾಗುತ್ತಿದೆ. ಇನ್ನೂ ಗುಡ್ ನ್ಯೂಸ್ ಇಲ್ವಾ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಶೀಘ್ರದಲ್ಲೇ ಅವರ ಕಿವಿಗೆ ಸಿಹಿ ಸುದ್ದಿ ಕೊಡಲಿದ್ದಾರೆ ಸ್ನೇಹಾ ದಂಪತಿಗಳು. ಅವರ ಪತಿ ಪ್ರಸನ್ನ ಅವರೇ ಈ ಸುದ್ದಿಯನ್ನು ಖಚಿತಪಡಿಸಿದ್ದು, ಶೀಘ್ರದಲ್ಲೇ ಸ್ನೇಹಾ ತಾಯಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ. 'ಒಗ್ಗರಣೆ' (2014) ಚಿತ್ರದ ಬಳಿಕ ಅವರು ಸಣ್ಣಪುಟ್ಟ ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡಿದ್ದಾರೆ. [ಮಧುಚಂದ್ರ ಮುಗಿಸಿಕೊಂಡು ಬಂದ ತಾರೆ ಸ್ನೇಹಾ]

actress-sneha-expecting-her-first-child

"ಈ ಶುಭ ದಿನ ನಿಮ್ಮಲ್ಲರೊಂದಿಗೂ ನಾನು ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ಶೀಘ್ರದಲ್ಲೇ ನಮ್ಮ ಮನೆಗೆ ವಿಶೇಷ ಅತಿಥಿಯ ಆಗಮನವಾಗುತ್ತಿದೆ" ಎಂದಿದ್ದಾರೆ ಸ್ನೇಹಾ ಅವರ ಪತಿ ಪ್ರಸನ್ನ.

ಇತ್ತೀಚೆಗೆ ಬಿಡುಗಡೆಯಾಗಿರುವ ತೆಲುಗಿನ 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲೂ ಸ್ನೇಹಾ ಬಣ್ಣ ಹಚ್ಚಿದ್ದಾರೆ. ಕನ್ನಡದ 'ರವಿಶಾಸ್ತ್ರಿ' ಸೇರಿದಂತೆ 7'ಓ ಕ್ಲಾಕ್, 'ಆಗೋದೆಲ್ಲಾ ಒಳ್ಳೇದಕ್ಕೆ' ಚಿತ್ರಗಳಲ್ಲಿ ಅಭಿನಯಿಸಿದ್ದ ಸ್ನೇಹಾ ಮತ್ತೆ ಕನ್ನಡದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ.

ಮೇ1, 2012ರಂದು ಸ್ನೇಹಾ ಮದುವೆ ಚೆನ್ನೈನ ಶ್ರೀವಾರು ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಇವರಿಬ್ಬರದ್ದೂ ಪ್ರೇಮವಿವಾಹ. 'ಅಚ್ಚಮುಂಡು ಅಚ್ಚಮುಂಡು' ಎಂಬ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಆರಂಭವಾದ ಇವರಿಬ್ಬರ ನಡುವಿನ ಕಣ್ಣಾಮುಚ್ಚಾಲೆಗೆ ಗಟ್ಟಿಮೇಳದ ಪರದೆ ಬಿದ್ದದ್ದು 2012ರಲ್ಲಿ. (ಏಜೆನ್ಸೀಸ್)

English summary
Actress Sneha and actor Prasanna who got married in 2012 are one happy couple in the film fraternity. Both their career graph at the moment looks good and soon they will be welcoming a new member into their family.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada