For Quick Alerts
  ALLOW NOTIFICATIONS  
  For Daily Alerts

  'ನಾಗರಹಾವು' ಚಿತ್ರವನ್ನ ಸುಹಾಸಿನಿ ಎಂದೆಂದಿಗೂ ಮರೆಯಲ್ಲಾ ಯಾಕೆ.?

  By Bharath Kumar
  |

  ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ ಚೊಚ್ಚಲ ಸಿನಿಮಾ 'ನಾಗರಹಾವು' ಚಿತ್ರವನ್ನ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಚಿತ್ರೋಧ್ಯಮಿಗಳು ಹಾಗೂ ಜನ ಸಾಮಾನ್ಯರು ಈ ಸಿನಿಮಾ ಜೊತೆ ಒಬ್ಬೊಬ್ಬರು ಒಂದೊಂದು ರೀತಿ ಸಂಬಂಧ ಹೊಂದಿದ್ದಾರೆ.

  ಇದೀಗ, ಬಹುಭಾಷಾ ನಟಿ ಸುಹಾಸಿನಿ 'ನಾಗರಹಾವು' ಬಗ್ಗೆ ಮಾತನಾಡಿದ್ದಾರೆ. ಹೊಸ ತಂತ್ರಜ್ಞಾನದಲ್ಲಿ ಮತ್ತೆ ಬಿಡುಗಡೆಯಾಗಿರುವ ಚಿತ್ರದ ಬಗ್ಗೆ ತಮ್ಮ ಹಳೇಯ ನೆನಪನ್ನ ಬಹಿರಂಗಪಡಿಸಿದ್ದಾರೆ.

  ವಿಷ್ಣುವರ್ಧನ್ ಹಾಗೂ ಸುಹಾಸಿನಿ ಜೋಡಿ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಕಾಂಬಿನೇಷನ್. ಇಂತಹ ಸುಹಾಸಿನಿ ಇಂಡಸ್ಟ್ರಿಗೆ ಬರುವ ಮುಂಚೆಯೇ 'ನಾಗರಹಾವು' ನೋಡಿ ಕ್ಲೀನ್ ಬೋಲ್ಡ್ ಆಗಿದ್ದರು. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಬಗ್ಗೆ ಸುಹಾಸಿನಿಗೆ ಒಲವು ಮೂಡಲು ಈ ಚಿತ್ರವೇ ಕಾರಣ. ಅದು ಹೇಗೆ ಎಂಬುದನ್ನ ಅವರೇ ಹೇಳಿಕೊಂಡಿದ್ದಾರೆ. ಮುಂದೆ ಓದಿ....

  ನಾನು ನೋಡಿದ ಮೊದಲ ಕನ್ನಡ ಸಿನಿಮಾ

  ನಾನು ನೋಡಿದ ಮೊದಲ ಕನ್ನಡ ಸಿನಿಮಾ

  ''ನನಗೆ ಆಗ 13 ವರ್ಷ. ಮೊದಲ ಸಲ ನಾನು ತಮಿಳುನಾಡು ಬಿಟ್ಟು ಬೇರೆ ರಾಜ್ಯಕ್ಕೆ ಅಥ್ಲೆಟಿಕ್ ನಲ್ಲಿ ಭಾಗವಹಿಸಲು ಹೋಗಿದ್ವಿ. ಕರ್ನಾಟಕ ವಿರುದ್ಧ ಪಂದ್ಯ ಸೋತ್ವಿ. ಆ ದಿನ ಸಂಜೆ ಒಂದು ಸಿನಿಮಾ ನೋಡೋಣ ಅಂತ ಹೋದ್ವಿ. ಅದೇ ನಾಗರಹಾವು.''

  ಡಾ ವಿಷ್ಣು ಸಾವಿಗೂ ಮುನ್ನ ಸುದೀಪ್ ಬಳಿ ಈ ವಿಷ್ಯವನ್ನ ಚರ್ಚಿಸಿದ್ರಂತೆ ಡಾ ವಿಷ್ಣು ಸಾವಿಗೂ ಮುನ್ನ ಸುದೀಪ್ ಬಳಿ ಈ ವಿಷ್ಯವನ್ನ ಚರ್ಚಿಸಿದ್ರಂತೆ

  ಕಮಲ್ ಹಾಸನ್ ನಂತರ ವಿಷ್ಣು

  ಕಮಲ್ ಹಾಸನ್ ನಂತರ ವಿಷ್ಣು

  ''ಅಲ್ಲಿಯವರೆಗೂ ಕಮಲ್ ಹಾಸನ್ ನನಗೆ ಬೆಸ್ಟ್ ಆಕ್ಟರ್. ಯಾಕಂದ್ರೆ ಅವರು ನನ್ನ ಅಂಕಲ್. ನಾಗರಹಾವು ಚಿತ್ರದಲ್ಲಿ ಯಾರೋ ಹೊಸ ಹೀರೋ, ಬಹುತೇಕ ಎಲ್ಲ ಆಕ್ಟರ್ ಹೊಸಬರು. ದೊಡ್ಡ ಡೈರೆಕ್ಟರ್ ಅಂತ ಹೇಳಿದ್ರು. ನೋಡಿದ್ಮೇಲೆ ನನಗೆ ಶಾಕ್ ಆಯ್ತು. ಹ್ಯಾಂಡ್ ಸಮ್ ನಟ, ಅವರ ಲುಕ್ ಅಬ್ಬಾ....ಆ ಪಾತ್ರದ ಒಳಗೆ ಹೋಗಿಬಿಟ್ಟಿದ್ದಾರೆ''

  ಕಿಚ್ಚ ಸುದೀಪ್ 'ನಾಗರಹಾವು' ಚಿತ್ರವನ್ನ ಯಾವುದಕ್ಕೆ ಹೋಲಿಸಿದ್ರು.? ಕಿಚ್ಚ ಸುದೀಪ್ 'ನಾಗರಹಾವು' ಚಿತ್ರವನ್ನ ಯಾವುದಕ್ಕೆ ಹೋಲಿಸಿದ್ರು.?

  ಅಮಿತಾಬ್ ಗೂ ಮುಂಚೆ ವಿಷ್ಣು

  ಅಮಿತಾಬ್ ಗೂ ಮುಂಚೆ ವಿಷ್ಣು

  ''ಅಮಿತಾಬ್ ಬಚ್ಚನ್ ಅವರನ್ನ ಎಲ್ಲರೂ 'ಆಂಗ್ರಿ ಯಂಗ್ ಮ್ಯಾನ್' ಅಂತಾರೆ. ಆದ್ರೆ, ಅಮಿತಾಬ್ ಅವರಿಗೂ ಮುಂಚೆ ನಾನು 'ಆಂಗ್ರಿ ಯಂಗ್ ಮ್ಯಾನ್' ನೋಡಿದ್ದು 'ನಾಗರಹಾವು' ಚಿತ್ರದಲ್ಲಿ. ತಮಿಳಿನಲ್ಲಿ ಒಳ್ಳೆ ಸಿನಿಮಾಗಳು ನೋಡಿದ್ದೆ. ಆದ್ರೆ, ನಾಗರಹಾವು ನೋಡಿದ್ಮೇಲೆ ಕನ್ನಡ ಸಿನಿಮಾಗಳು ಹೇಗೆ ಎನ್ನುವುದು ಗೊತ್ತಾಯ್ತು.''

  'ನಾಗರಹಾವು' ಚಿತ್ರದಲ್ಲಿ ಉಪ್ಪಿಗೆ ಹೆಚ್ಚು ಕಾಡುವ ದೃಶ್ಯ ಯಾವುದು.? 'ನಾಗರಹಾವು' ಚಿತ್ರದಲ್ಲಿ ಉಪ್ಪಿಗೆ ಹೆಚ್ಚು ಕಾಡುವ ದೃಶ್ಯ ಯಾವುದು.?

  ಆರತಿ ನನ್ನ ಮೊದಲ ಕನ್ನಡ ನಟಿ

  ಆರತಿ ನನ್ನ ಮೊದಲ ಕನ್ನಡ ನಟಿ

  ''ನಾನು ಮೊದಲ ಸಲ ಕನ್ನಡ ಸಿನಿಮಾ ಮಾಡುವ ವೇಳೆ, ಪಕ್ಕದ ಜಾಗದಲ್ಲಿ ಆರತಿ ಅವರ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅವರ ಬಳಿ ಹೇಳಿದ್ದೆ, ನಾನು ಕನ್ನಡದಲ್ಲಿ ನೋಡಿದ ಮೊದಲ ನಟಿ ನೀವೇ. ನಿಮ್ಮಲ್ಲಿ 10 ರಷ್ಟು ನನಗೆ ಅಭಿನಯ ಸಿಕ್ಕರೇ ನಾನು ದೊಡ್ಡ ಅದೃಷ್ಟವಂತೆ ಅಂದಿದ್ದೆ. ಶುಭ ಅವರು ಕೂಡ ಅಷ್ಟೇ. ಅಂಬರೀಶ್ ಅವರು ಅಷ್ಟೇ ಒಂದು ಸಣ್ಣ ಪಾತ್ರ ಮಾಡಿದ್ದು, ಈಗ ಅವರ ದೊಡ್ಡ ನಟ'' ಎಂದು ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.

  'ನಾಗರಹಾವು' ಚಿತ್ರಕ್ಕಾಗಿ ಮತ್ತೆ ವಿಷ್ಣು ಫ್ಯಾನ್ ಆದ ರಾಕಿಂಗ್ ಸ್ಟಾರ್'ನಾಗರಹಾವು' ಚಿತ್ರಕ್ಕಾಗಿ ಮತ್ತೆ ವಿಷ್ಣು ಫ್ಯಾನ್ ಆದ ರಾಕಿಂಗ್ ಸ್ಟಾರ್

  English summary
  Kannada actress suhasini has spoke about dr vishnuvardhan's first movie 'nagarahavu'. movie directed by puttanna kanagal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X