»   » ಐಶ್ವರ್ಯ ರೈ ಬರ್ತಿಲ್ಲ, ಇವರು ಬಿಡ್ತಿಲ್ಲ.!

ಐಶ್ವರ್ಯ ರೈ ಬರ್ತಿಲ್ಲ, ಇವರು ಬಿಡ್ತಿಲ್ಲ.!

Posted By:
Subscribe to Filmibeat Kannada

ಬಾಲಿವುಡ್ ನಟಿ ಐಶ್ವರ್ಯ ರೈ 'ಎ ದಿಲ್ ಹೈ ಮುಷ್ಕಿಲ್' ಚಿತ್ರದ ಮೂಲಕ ಕಳೆದ ವರ್ಷ ಇಡೀ ದೇಶದ ಗಮನ ಸೆಳೆದಿದ್ದರು. ಯಾಕಂದ್ರೆ, ಒಂದು ಮಗುವಿನ ತಾಯಿ ಆಗಿದ್ದರೂ, ಈ ಚಿತ್ರದಲ್ಲಿ ಸಖತ್ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಚಿತ್ರಪ್ರೇಮಿಗಳಿಗೆ ಶಾಕ್ ನೀಡಿದ್ದರು. ಹೀಗಾಗಿ, ಐಶ್ವರ್ಯ ರೈ ಮುಂದಿನ ಚಿತ್ರ ಯಾವುದು ಅಭಿಮಾನಿಗಳು ಕಾದು ಕುಂತಿದ್ದಾರೆ.

'ಏ ದಿಲ್ ಮುಷ್ಕಿಲ್' ಟಿಕೆಟ್ ಬೆಲೆ ಕೇಳಿದ್ರೆ ತಲೆ ಗಿರ್ರ್ ಅನ್ನೋದು ಪಕ್ಕಾ

ಹೀಗಿರುವಾಗ, ಬಾಲಿವುಡ್ ನಲ್ಲಿ ಒಂದೇ ಚರ್ಚೆ. ನಟಿ ಐಶ್ವರ್ಯ ರೈ 'ಗುಲಾಬ್ ಜಾಮೂನ್' ಚಿತ್ರದಲ್ಲಿ ನಟಿಸ್ತಾರ ಅಥವಾ ಇಲ್ವಾ ಎನ್ನುವುದು. ಯಾಕಂದ್ರೆ, ಈ ಚಿತ್ರದಲ್ಲಿ ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾಗಿ, ಇಬ್ಬರು ಒಂದೇ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರೆ ಎಂಬ ಕುತೂಹಲ.

ಆದ್ರೆ, ಅದ್ಯಾಕೋ ಈ ಸಿನಿಮಾ ಶುರುವಾಗುವ ಲಕ್ಷಣಗಳೇ ಕಾಣ್ತಿಲ್ಲ. ಯಾಕೆ ಅಂತ ಮುಂದೆ ಓದಿ.....

ಐಶ್ವರ್ಯ ಬರ್ತಿಲ್ಲ, ಇವರು ಬಿಡ್ತಿಲ್ಲ.!

'ಗುಲಾಬ್ ಜಾಮೂನ್' ನಿರ್ಮಾಪಕ ಅನುರಾಗ್ ಕಶ್ಯಪ್ ನಿರ್ಮಾಣದ ಚಿತ್ರ. ಅನುರಾಗ್ ಕಶ್ಯಪ್ ಅವರಿಗೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ನಟಿಸಬೇಕು ಎನ್ನುವ ದೊಡ್ಡ ಆಸೆ. ಆದ್ರೆ, ಈ ಆಸೆ ಈಡೇರುವ ಒಂದೇ ಒಂದು ಸುಳಿವು ಕೂಡ ಕಾಣುತ್ತಿಲ್ಲ.

ರೆಡ್ ಕಾರ್ಪೆಟ್ ಮೇಲೆ ಮಾಜಿ ವಿಶ್ವ ಸುಂದರಿ ಐಶೂ ಬೆಡಗು ಬಿನ್ನಾಣ..

ನಿರ್ಮಾಪಕರು ಭರವಸೆ ಕೊಡ್ತಾರೆ!

ಈಗಾಗಲೇ ಬಾಲಿವುಡ್ ಗಲ್ಲಿ ಗಲ್ಲಿಯಲ್ಲೂ 'ಗುಲಾಬ್ ಜಾಮೂನ್' ಚಿತ್ರದಲ್ಲಿ ಐಶ್ವರ್ಯ ಮತ್ತು ಅಭಿಷೇಕ್ ಒಂದಾಗ್ತಿದ್ದಾರೆ ಎಂಬ ಈ ಸುದ್ದಿ ಹರಿದಾಡುತ್ತಿದೆ. ನಿರ್ಮಾಪಕರು ಕೂಡ ಎಲ್ಲೆಡೆ ಭರವಸೆ ಮೂಡಿಸಿದ್ದಾರೆ.

ಐಶ್ವರ್ಯ ಕಡೆಯಿಂದ ರಿಜೆಕ್ಟ್!

ಆದ್ರೆ, ಐಶ್ವರ್ಯ ರೈ ಮಾತ್ರ ಈ ಚಿತ್ರವನ್ನ ಮಾಡಲು ಸಾಧ್ಯವಿಲ್ಲವೆಂದು ಕಡ್ಡಿ ಮುರಿದ ಹಾಗೆ ಹೇಳಿ ಬಿಟ್ಟಿದ್ದಾರೆ. ಯಾಕಂದ್ರೆ, ಐಶ್ವರ್ಯ ರೈಗೆ 'ಗುಲಾಬ್ ಜಾಮೂನ್' ಚಿತ್ರದ ಪಾತ್ರ ಇಷ್ಟವಾಗಿಲ್ಲವಂತೆ.

ಪತಿ ಅಭಿಷೇಕ್ ಬಚ್ಚನ್ ಜೊತೆ ನಟಿಸುವ ಚಿತ್ರ ರಿಜೆಕ್ಟ್ ಮಾಡಿದ್ರು ಐಶ್ವರ್ಯ ರೈ!

ಸ್ಕ್ರಿಪ್ಟ್ ಬದಲಾಯಿಸಿ ನೋಡೋಣ

ಮೂಲಗಳ ಪ್ರಕಾರ ಐಶ್ವರ್ಯ ರೈ 'ಗುಲಾಬ್ ಜಾಮೂನ್' ಚಿತ್ರದ ಸ್ಕ್ರಿಪ್ಟ್ ಬದಲಾಯಿಸಲು ಸೂಚಿಸಿದ್ದಾರಂತೆ. ಹೀಗಾಗಿ, ಐಶ್ ಹೇಳಿದಂತೆ ಸ್ಕ್ರಿಪ್ಟ್ ಬದಲಾದರೇ ನೋಡೋಣ ಎಂಬ ಭರವಸೆ ಕೊಟ್ಟಿದ್ದಾರಂತೆ.

'ಗುಲಾಬ್ ಜಾಮೂನ್' ಬಗ್ಗೆ ಅಭಿಷೇಕ್ ಏನಂದ್ರು?

ಇನ್ನು 'ಗುಲಾಬ್ ಜಾಮೂನ್' ಚಿತ್ರದ ಬಗ್ಗೆ ಮಾತನಾಡಿರುವ ಅಭಿಷೇಕ್ ಬಚ್ಚನ್ ''ಇದು ಅನುರಾಗ್ ಕಶ್ಯಪ್ ಚಿತ್ರವಲ್ಲ, ಅವರ ಜೊತೆ ಹೊಸಬರೊಬ್ಬರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದ ಬಗ್ಗೆ ಚರ್ಚೆ ಆಗುತ್ತಿದೆ. ನಾನು ಇನ್ನು ಯಾವ ನಿರ್ಧಾರವೂ ತೆಗೆದುಕೊಂಡಿಲ್ಲ. ಒಳ್ಳೆ ಸಿನಿಮಾ ಮಾಡ್ಬೇಕು ಎಂದುಕೊಂಡಿದ್ದೇವೆ. ಎಲ್ಲ ಅಂದುಕೊಂಡಂತೆ ಆದ್ರೆ, ನಿರ್ಮಾಪಕರೇ ಘೋಷಣೆ ಮಾಡುತ್ತಾರೆ'' ಎಂದಿದ್ದಾರೆ.

ಸಚಿನ್ ರನ್ನ ಐಶ್ವರ್ಯ ಅಪ್ಪಿಕೊಂಡಿದ್ದಕ್ಕೆ ಮುಖ ಗಂಟಿಕ್ಕಿದ್ರಾ ಅಭಿಶೇಕ್.?

ಐಶ್ವರ್ಯ ರೈ ಮುಂದಿನ ಸಿನಿಮಾ

ಅನುರಾಗ್ ಕಶ್ಯಪ್ ಚಿತ್ರವನ್ನ ರಿಜೆಕ್ಟ್ ಮಾಡಿರುವ ಐಶ್ವರ್ಯ, ತಮ್ಮ ಮುಂದಿನ ಚಿತ್ರವನ್ನ ಅನಿಲ್ ಕಪೂರ್ ಜೊತೆ ಅಭಿನಯಿಲಿಸಲಿದ್ದಾರಂತೆ. ಈ ಚಿತ್ರಕ್ಕೆ 'ಫನ್ನಿ ಖಾನ್' ಎಂದು ಟೈಟಲ್ ಕೂಡ ಅಂತಿಮವಾಗಿದೆ.

ಸಂಜಯ್ ಲೀಲಾ ಬನ್ಸಾಲಿ ಮುಂದಿನ ಚಿತ್ರದಲ್ಲಿ ಶಾರುಖ್-ಐಶ್ವರ್ಯ?

ಮಣಿರತ್ನಂ ಚಿತ್ರಕ್ಕೂ ಗ್ರೀನ್ ಸಿಗ್ನಲ್!

ಈ ಮಧ್ಯೆ ಸ್ಟಾರ್ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಚಿತ್ರಕ್ಕೂ ಐಶ್ವರ್ಯ ರೈ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸದ್ಯದಲ್ಲೇ ಆ ಚಿತ್ರವೂ ಶುರುವಾಗಲಿದೆಯಂತೆ.

ಐಶ್ವರ್ಯ ರೈ-ರಾಮ್ ಚರಣ್ ಬಗ್ಗೆ ಇಂಥದೊಂದು ಸುದ್ದಿ! ನಿಜವೇ?

'ಗುಲಾಬ್ ಜಾಮೂನ್' ಕಥೆ ಏನಾಗುತ್ತೆ?

ಇಷ್ಟೆಲ್ಲಾ ಪ್ಲಾನ್ ಮಾಡಿಕೊಂಡಿರುವ ಐಶ್ವರ್ಯ ರೈ, ಅನುರಾಗ್ ಕಶ್ಯಪ್ ಅವರು 'ಗುಲಾಬ್ ಜಾಮೂನ್' ಚಿತ್ರಕ್ಕೆ ಒಪ್ಪಿಗೆ ಕೊಡ್ತಾರ ಗೊತ್ತಿಲ್ಲ. ಮತ್ತೊಂದೆಡೆ ಐಶ್ವರ್ಯ ರೈ ಅವರನ್ನೇ ನಟಿಸಬೇಕು ಎಂದುಕೊಂಡಿರುವ ಚಿತ್ರತಂಡ, ಸ್ಕ್ರಿಪ್ಟ್ ಬದಲಾಯಿಸಿ ಐಶ್ ಅವರನ್ನ ಒಪ್ಪಿಸುತ್ತಾರ ಗೊತ್ತಿಲ್ಲ. ಒಟ್ನಲ್ಲಿ, 'ಗುಲಾಬ್ ಜಾಮೂನ್' ಗಾಗಿ ಐಶ್ ಬರ್ತಿಲ್ಲ, ಇವರು ಬಿಡ್ತಿಲ್ಲ ಎನ್ನುವುದು ಮಾತ್ರ ವಾಸ್ತವ.

English summary
Aishwarya Rai Bachchan and Abhishek Bachchan were expected to costar in Gulab Jamun produced by Anurag Kashyap. But, Aishwarya has said 'No' to the film as she didn’t like her role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada