For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ನಂತರ 'ತಾಯಿಗೆ ತಕ್ಕ ಮಗ'ನಾದ ಅಜಯ್ ರಾವ್

  By Bharath Kumar
  |

  'ತಾಯಿಗೆ ತಕ್ಕ ಮಗ' ಎಂದಾಕ್ಷಣ ಡಾ.ರಾಜ್ ಕುಮಾರ್ ಅವರು ನೆನಪಾಗ್ತಾರೆ. ಇದೀಗ, ಅಣ್ಣಾವ್ರ ನಂತರ 'ಕೃಷ್ಣ' ಖ್ಯಾತಿಯ ಅಜಯ್ ರಾವ್ 'ತಾಯಿಗೆ ತಕ್ಕ ಮಗ'ನಾಗಿದ್ದಾರೆ.

  ಹೌದು, ಅಜಯ್ ರಾವ್ ಅಭಿನಯಿಸುತ್ತಿರುವ ಹೊಸ ಸಿನಿಮಾ 'ತಾಯಿಗೆ ತಕ್ಕ ಮಗ' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರವನ್ನ ನಿರ್ದೇಶಕ ಶಶಾಂಕ್ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾದ ಮೂಲಕ ಸ್ವಂತ ನಿರ್ಮಾಣ ಸಂಸ್ಥೆಯನ್ನ ಸ್ಥಾಪಿಸಿದ್ದಾರೆ.

  ಕನ್ನಡದ 3 ಯುವ ನಟರಿಗೆ ಮನಸೋತ ನಿರ್ದೇಶಕ ಶಶಾಂಕ್

  ಈ ಚಿತ್ರವನ್ನ ಯುವ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದರ ಜೊತೆ ಇನ್ನು ನಾಲ್ಕು ಚಿತ್ರಗಳನ್ನ ನಿರ್ಮಾಣ ಮಾಡುತ್ತಿದ್ದು, ಮುಂದಿನ ಚಿತ್ರಗಳಿಗೆ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ, ಮತ್ತು 'ಕ್ರೇಜಿಬಾಯ್' ಖ್ಯಾತಿಯ ದಿಲೀಪ್ ಕುಮಾರ್ ನಾಯಕರಾಗಿ ನಟಿಸುತ್ತಿದ್ದಾರೆ.

  ಅಂದ್ಹಾಗೆ, ಡಾ. ರಾಜ್ ಕುಮಾರ್ ಅಭಿನಯಿಸಿದ್ದ 'ತಾಯಿಗೆ ತಕ್ಕ ಮಗ' ಸಿನಿಮಾ 1978 ರಲ್ಲಿ ಬಿಡುಗಡೆಯಾಗಿತ್ತು. ಸಾಹುಕಾರ್ ಜಾನಕಿ, ಪದ್ಮಿಪ್ರಿಯಾ ನಟಿಯರಾಗಿ ಕಾಣಿಸಿಕೊಂಡಿದ್ದರು. ವಿಶೇಷ ಅಂದ್ರೆ ಮಾಸ್ಟರ್ ಲೋಹಿತ್ (ಪುನೀತ್ ರಾಜ್ ಕುಮಾರ್) ಕೂಡ ಬಾಲನಟನಾಗಿ ಅಭಿನಯಿಸಿದ್ದರು. ವಿ.ಸೋಮಶೇಖರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ ಮಾಡಿದ್ದರು.

  English summary
  Shashank Directional Ajay Rao Starrer 'Thayige Thakka Maga' movie Poster Released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X