»   » ಅಂಬಿ ದಂಪತಿಗೆ ಶುಭಕೋರಿದ ದರ್ಶನ್ ಮತ್ತು ಕಿಚ್ಚ ಸುದೀಪ್

ಅಂಬಿ ದಂಪತಿಗೆ ಶುಭಕೋರಿದ ದರ್ಶನ್ ಮತ್ತು ಕಿಚ್ಚ ಸುದೀಪ್

Posted By:
Subscribe to Filmibeat Kannada
ಅಂಬಿ ದಂಪತಿಗೆ ಶುಭಕೋರಿದ ದರ್ಶನ್ ಮತ್ತು ಕಿಚ್ಚ ಸುದೀಪ್ | Filmibeat Kannada

ಕನ್ನಡ ಸಿನಿಮಾದ ಆದರ್ಶ ದಂಪತಿಗಳ ಸಾಲಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಪ್ರಮುಖರು. ಚಿತ್ರಗಳಲ್ಲಿ ಮಾತ್ರವಲ್ಲದೆ ಖಾಸಗಿ ಬದುಕಿನಲ್ಲಿಯೂ ಮತ್ತೊಬ್ಬರಿಗೆ ಆದರ್ಶವಾಗಿರುವ ಈ ತಾರಾದಂಪತಿಗಳಿಗೆ ಇಂದು (ಡಿಸೆಂಬರ್ 8) ವಾರ್ಷಿಕೋತ್ಸವದ ಸಂಭ್ರಮ.

ಇಪ್ಪತ್ತಾರು ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಾ ಬಂದಿರುವ ಸುಮಲತಾ ಹಾಗೂ ಅಂಬರೀಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳು ಶುಭಕೋರಿದ್ದಾರೆ. ವಿಶೇಷ ಅಂದರೆ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಅಂಬರೀಶ್-ವಿಷ್ಣುವರ್ಧನ್ ರಂತೆ ಸ್ನೇಹಿತರಾಗಿದ್ದ ದರ್ಶನ್ ಹಾಗೂ ಸುದೀಪ್, ತಮ್ಮದೇ ಸ್ಟೈಲ್ ನಲ್ಲಿ ವಿಶ್ ಮಾಡಿದ್ದಾರೆ.

ದರ್ಶನ್, ಸುದೀಪ್ ಜೊತೆಯಲ್ಲಿ ಇನ್ನೂ ಇಬ್ಬರು ವಿಶೇಷ ವ್ಯಕ್ತಿಗಳು ವಾರ್ಷಿಕೋತ್ಸವದ ಶುಭಾಶಯ ಹೇಳಿದ್ದಾರೆ. ಯಾರದು ಮುಂದೆ ಓದಿ ?

ಮದರ್ ಇಂಡಿಯಾಗೆ ವಿಶ್ ಮಾಡಿದ ದರ್ಶನ್

ಟ್ವಿಟ್ಟರ್ ಮೂಲಕ ನಟ ದರ್ಶನ್, ಅಂಬರೀಶ್ ಹಾಗೂ ಸುಮಲತಾ ಇಬ್ಬರಿಗೂ ಮದುವೆ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ. ದರ್ಶನ್ ಅಭಿನಯದ ಮೆಜೆಸ್ಟಿಕ್ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಅಂಬಿ ಹಾಗೂ ಸುಮಲತಾ ಜೊತೆ ತೆಗಿಸಿಕೊಂಡಿದ್ದ ಫೋಟೋ ವನ್ನ ಹಾಕಿ ಶುಭಾಶಯ ತಿಳಿಸಿದ್ದಾರೆ ಡಿ ಬಾಸ್ .

ಆಮಂತ್ರಣ ಪತ್ರದ ಜೊತೆ ವಿಶ್ ಮಾಡಿದ ಕಿಚ್ಚ

ನಟ ಕಿಚ್ಚ ಸುದೀಪ್ ಕೂಡ ತುಂಬಾ ವಿಶೇಷವಾಗಿ ವಾರ್ಷಿಕೋತ್ಸವದ ಶುಭಾಶಯವನ್ನ ತಿಳಿಸಿದ್ದಾರೆ. ಆನಿವರ್ಸರಿಯ ವಿಶೇಷ ಆಮಂತ್ರಣ ಪತ್ರವನ್ನ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಸುದೀಪ್ ಅತ್ಯಂತ ಪ್ರೀತಿ ಮಾಡುವ ಅಂಬರೀಶ್ ಹಾಗೂ ಸುಮಲತಾ ಅವರಿಗೆ ವಿಶ್ ಮಾಡಿದ್ದಾರೆ.

ತಾರಾ ದಂಪತಿಗಳಿಗೆ ಸ್ಟಾರ್ ಪತ್ನಿಯರ ವಿಶ್

ದರ್ಶನ್, ಸುದೀಪ್ ಜೊತೆಯಲ್ಲಿ ಸ್ಟಾರ್ ಪತ್ನಿಯರಾದ ವಿಜಯಲಕ್ಷ್ಮಿ ದರ್ಶನ್ ಹಾಗೂ ಪ್ರಿಯಾ ಸುದೀಪ್ ಕೂಡ ಟ್ವಿಟ್ಟರ್ ಮೂಲಕ ಶುಭಾಶಯವನ್ನ ಕೋರಿದ್ದಾರೆ. ವಿಜಯಲಕ್ಷ್ಮೀ ದರ್ಶನ್ ಆದರ್ಶ ಜೋಡಿಗಳಿಗೆ ಶುಭಾಶಯ ಎಂದು ಟ್ವೀಟ್ ಮಾಡಿದ್ರೆ, ಪ್ರಿಯಾ ಸುದೀಪ್ ಅಂತ್ಯವಿಲ್ಲ ಪ್ರೇಮ ಕತೆ ಇರುವ ನಿಮ್ಮಬ್ಬರಿಗೂ ವಾರ್ಷಿಕೋತ್ಸವದ ಶುಭಾಶಯ ಎಂದಿದ್ದಾರೆ.

ಕಿಚ್ಚ-ದರ್ಶನ್ ಫ್ಯಾಮಿಲಿಗೆ ಸ್ಫೂರ್ತಿ ಅಂಬಿ-ಸುಮಲತಾ

ಅಂಬರೀಶ್ ಹಾಗೂ ಸುಮಲತಾ ಸಾಕಷ್ಟು ಬಾರಿ ದರ್ಶನ್ ಮತ್ತು ಸುದೀಪ್ ದಂಪತಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಅನೇಕ ಬಾರಿ ವಿವಾದಗಳಾದಾಗ ಇವರಿಬ್ಬರು ಮಧ್ಯ ಪ್ರವೇಶ ಮಾಡಿ ಎಲ್ಲವನ್ನೂ ಅಂತ್ಯ ಮಾಡಿದ್ದಾರೆ. ಅದಷ್ಟೇ ಅಲ್ಲದೆ ಚಿತ್ರರಂಗದ ಅದೆಷ್ಟೋ ವಿವಾದಗಳಿಗೂ ಅಂಬಿ ಅಂತ್ಯ ಹಾಡಿರೋ ಸಾಕಷ್ಟು ಉದಾಹರಣೆಗಳಿವೆ.

English summary
Kannada cinema star Ambarish and Sumalatha celebrate 26th wedding anniversary. Sudeep, Priya Sudeep and Darshan wishes for Ambarish-Sumalatha's wedding anniversary

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada