»   » ಬೆಂಕಿ ಜೊತೆ ಸರಸವಾಡಿದ 'ಲಕ್ಷ್ಮಣ' ಹೀರೋ ಅನೂಪ್

ಬೆಂಕಿ ಜೊತೆ ಸರಸವಾಡಿದ 'ಲಕ್ಷ್ಮಣ' ಹೀರೋ ಅನೂಪ್

Posted By:
Subscribe to Filmibeat Kannada

ಬಟ್ಟ ಬಯಲಿನಲ್ಲಿ ಕೇಡಿಗಳ ಜೊತೆ ನಾಯಕ ಸೆಣಸಾಡುತ್ತಿರುತ್ತಾನೆ. ಆಗ, ಇದ್ದಕ್ಕಿದ್ದಂತೆ ಪಕ್ಕದಲ್ಲಿದ್ದ ಕಾರ್ ಬ್ಲಾಸ್ಟ್ ಆಗುತ್ತೆ. ಅದರಿಂದ ಎಸ್ಕೇಪ್ ಆಗುವ ನಾಯಕ, ಬೆನ್ನಿಗೆ ಬೆಂಕಿ ತಾಕಿರುವುದನ್ನೂ ಲೆಕ್ಕಿಸದೇ ವಿಲನ್ ಗಳ ಜೊತೆ ಹೊಡೆದಾಡುತ್ತಾನೆ.

ಇದು 'ಲಕ್ಷ್ಮಣ' ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶ. ಇತ್ತೀಚೆಗಷ್ಟೇ ಬೆಂಗಳೂರಿನ ಹೊರವಲಯದಲ್ಲಿ ಈ ಸನ್ನಿವೇಶ ಚಿತ್ರೀಕರಿಸಲಾಯ್ತು. ಡೇರಿಂಗ್ ಸ್ಟಂಟ್ಸ್ ಮಾಡುವುದರಲ್ಲಿ ಅನೂಪ್ ಗೆ ಕೊಂಚ ಕೂಡ ಭಯವಿದ್ದಹಾಗಿಲ್ಲ. ಹೀಗಾಗಿ ಬೆನ್ನಿಗೆ ಬೆಂಕಿ ಹಚ್ಚಿಕೊಂಡು ಸೂಪರ್ ಸ್ಟಂಟ್ಸ್ ಮಾಡಿದ್ದಾರೆ. ['ಲಕ್ಷ್ಮಣ'ನಿಗೆ 'ದಶರಥ'ನಾದ ಕ್ರೇಜಿಸ್ಟಾರ್ ರವಿಚಂದ್ರನ್]

Anup Revanna's Fire stunt for 'Lakshmana'

ಸಾಮಾನ್ಯವಾಗಿ ಇಂತಹ ಸನ್ನಿವೇಶಗಳಿಗೆ ಕೆಲವರು ಡ್ಯೂಪ್ ಹಾಕ್ತಾರೆ. ಆದ್ರೆ, ಯಾವುದೇ ಡ್ಯೂಪ್ ಬಳಸದೇ, ಬೆಂಕಿ ಜೊತೆ ಸರಸವಾಡಿದ್ದಾರೆ 'ಲಕ್ಷ್ಮಣ' ಚಿತ್ರದ ಹೀರೋ ಅನೂಪ್. ಮೊದಲ ಚಿತ್ರದಲ್ಲೇ ಕಾಂಗ್ರೆಸ್ ನಾಯಕ ರೇವಣ್ಣ ಪುತ್ರ ಅನೂಪ್ ಇಂತಹ ಸಾಹಸ ಮಾಡಿರುವುದಕ್ಕೆ ನಿರ್ದೇಶಕ ಆರ್.ಚಂದ್ರು ಫುಲ್ ಇಂಪ್ರೆಸ್ ಆಗಿದ್ದಾರೆ. [ಆರ್ ಚಂದ್ರು 'ಲಕ್ಷ್ಮಣ' ನಿಗೆ ತೆಲುಗಿನ 'ಅತನೊಕ್ಕಡೆ' ಸ್ಪೂರ್ತಿ]

Anup Revanna's Fire stunt for 'Lakshmana'

'ಲಕ್ಷ್ಮಣ' ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಖಾಕಿ ತೊಟ್ಟು ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಮೇಘನಾ ರಾಜ್, 'ಬಾಹುಬಲಿ' ಪ್ರಭಾಕರ್, ಸಾಧು ಕೋಕಿಲ, ಚಿಕ್ಕಣ್ಣ ಮುಂತಾದವರು ಚಿತ್ರದಲ್ಲಿದ್ದಾರೆ.

English summary
Newcomer Anup Revanna has done Fire Stunt for his debut 'Lakshmana'. Crazy Star V.Ravichandran is playing his father's role. The movie is directed by R.Chandru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada