For Quick Alerts
  ALLOW NOTIFICATIONS  
  For Daily Alerts

  ಕನ್ನಡತಿಯಾಗಿ ತೆರೆ ಮೇಲೆ ಮಿಂಚಲಿದ್ದಾರೆ ನಟಿ ಅನುಷ್ಕಾ ಶೆಟ್ಟಿ

  |

  ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಮಾ ರಂಗಕ್ಕೆ ಬಂದು ಹದಿನೈದು ವರ್ಷವಾದರೂ ಸಹ ಒಮ್ಮೆಯೂ ಕನ್ನಡದಲ್ಲಿ ನಟಿಸಿಲ್ಲ.

  ಹಾಗೆ ನೋಡಿದರೆ ಅನುಷ್ಕಾ ಶೆಟ್ಟಿ ಅವರ ಮೊದಲ ಸಿನಿಮಾ ಕನ್ನಡವೇ ಆಗಬೇಕಿತ್ತು. ಆದರೆ ವಿಧಿ ಲಿಖಿತವೋ ಏನೋ ಮೊದಲ ಕನ್ನಡದಲ್ಲಿ ನಟಿಸುವ ಅವಕಾಶ ಕೈತಪ್ಪಿತ್ತು. ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿ ಅಲ್ಲಿಯೇ ನೆಲೆ ನಿಂತರು.

  ಅನುಷ್ಕಾ ಶೆಟ್ಟಿ ಈ ಹಿಂದೆ ಕೆಲವು ಸಂದರ್ಶನಗಳಲ್ಲಿ ಕನ್ನಡದಲ್ಲಿ ನಟಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಕನ್ನಡ ಮಾತೃಭಾಷೆಯ ಅವರು ಕನ್ನಡದ ಬಗ್ಗೆ ಪ್ರೀತಿಯನ್ನೂ ವ್ಯಕ್ತಪಡಿಸಿದ್ದರು.

  ಈಗ ಅನುಷ್ಕಾ ಶೆಟ್ಟಿ ಅವರ ಮುಂದೆ ಅವಕಾಶವೊಂದು ಬಂದಿದ್ದು, ಕನ್ನಡದ ಸಿನಿಮಾ ಅಲ್ಲದಿದ್ದರೂ ಕನ್ನಡತಿಯಾಗಿ ಅವರು ಬಣ್ಣ ಹಚ್ಚಲಿದ್ದಾರೆ. ಹಲವು ಐತಿಹಾಸಿಕ ಮಾತ್ರಗಳಲ್ಲಿ ಬಣ್ಣ ಹಚ್ಚಿದ್ದ ಅವರು ಮೊದಲ ಬಾರಿಗೆ ಕನ್ನಡತ ಐತಿಹಾಸಿಕ ಮಹಿಳೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

  ಹೊಸ ಸಿನಿಮಾಕ್ಕೆ ಸಹಿ ಹಾಕಿರುವ ಅನುಷ್ಕಾ ಶೆಟ್ಟಿ

  ಹೊಸ ಸಿನಿಮಾಕ್ಕೆ ಸಹಿ ಹಾಕಿರುವ ಅನುಷ್ಕಾ ಶೆಟ್ಟಿ

  ಹೌದು, ಅನುಷ್ಕಾ ಶೆಟ್ಟಿ ಅವರು ಹೊಸ ಸಿನಿಮಾ ಒಂದಕ್ಕೆ ಸಹಿ ಹಾಕಿದ್ದು, ಅದರಲ್ಲಿ ಅವರು ಮೈಸೂರಿನ ಐತಿಹಾಸಿಕ ಮಹಿಳೆಯೊಬ್ಬರ ಪಾತ್ರ ನಿರ್ವಹಿಸಲಿದ್ದಾರೆ. ಖ್ಯಾತ ಗಾಯಕಿಯೊಬ್ಬರ ಪಾತ್ರವನ್ನು ಅನುಷ್ಕಾ ಶೆಟ್ಟಿ ನಿರ್ವಹಿಸಲಿದ್ದಾರೆ.

  ಮೈಸೂರಿನ ಖ್ಯಾತ ಗಾಯಕಿಯ ಪಾತ್ರದಲ್ಲಿ ಅನುಷ್ಕಾ

  ಮೈಸೂರಿನ ಖ್ಯಾತ ಗಾಯಕಿಯ ಪಾತ್ರದಲ್ಲಿ ಅನುಷ್ಕಾ

  ಮೈಸೂರಿನ ಆಸ್ಥಾನದ ಸಂಗೀತ ವಿದ್ವಾಂಸರು, ಕರ್ನಾಟಕ ಸಂಗೀತ ಸಾಧಕಿ, ದೇವದಾಸಿಯೂ ಆಗಿದ್ದ ನಾಗರತ್ನಮ್ಮ ಪಾತ್ರವನ್ನು ಅನುಷ್ಕಾ ಶೆಟ್ಟಿ ನಿರ್ವಹಿಸಲಿದ್ದಾರೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ನಿರ್ದೇಶಿಸಲಿದ್ದಾರೆ.

  ಹಲವು ಮರೆಯದ ಸಿನಿಮಾ ಕೊಟ್ಟಿರುವ ಸಿಂಗೀತಂ ಶ್ರೀನಿವಾಸ್

  ಹಲವು ಮರೆಯದ ಸಿನಿಮಾ ಕೊಟ್ಟಿರುವ ಸಿಂಗೀತಂ ಶ್ರೀನಿವಾಸ್

  ಸಿಂಗೀತಂ ಶ್ರೀನಿವಾಸ್ ಅವರು ಕನ್ನಡದಲ್ಲಿಯೂ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ರಾಜ್‌ ಕುಮಾರ್ ಅವರ ಸಿನಿಮಾಗಳನ್ನೂ ಸಹ ಅವರು ನಿರ್ದೇಶಿಸಿದ್ದಾರೆ. ಹಾಲು-ಜೇನು, ಪುಷ್ಪಕ ವಿಮಾನ, ಆನಂದ್, ಭಾಗ್ಯದಾ ಲಕ್ಷ್ಮಿ ಬಾರಮ್ಮ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

  ನಿಶ್ಯಬ್ಧಂ ಸಿನಿಮಾ ಮುಗಿಸಿರುವ ಅನುಷ್ಕಾ ಶೆಟ್ಟಿ

  ನಿಶ್ಯಬ್ಧಂ ಸಿನಿಮಾ ಮುಗಿಸಿರುವ ಅನುಷ್ಕಾ ಶೆಟ್ಟಿ

  ಅನುಷ್ಕಾ ಶೆಟ್ಟಿ ಪ್ರಸ್ತುತ ನಿಶ್ಯಬ್ದಂ ಎಂಬ ಸಿನಿಮಾ ಮುಗಿಸಿದ್ದು, ಬಿಡುಗಡೆಗೆ ತಯಾರಾಗಿದೆ. ಕೊರೊನಾ ಭೀತಿಯಿಂದಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಅನುಷ್ಕಾ ಶೆಟ್ಟಿ ಅವರು ಸಿನಿಮಾ ರಂಗ ಪ್ರವೇಶಿಸಿ ಇತ್ತೀಚೆಗಷ್ಟೆ ಹದಿನೈದು ವರ್ಷಗಳಾಯಿತು.

  English summary
  Anushka Shetty signed new movie in which she is potraing a singer who is famous back then.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X