»   » ಅರ್ಜುನ್ ಸರ್ಜಾ ಹನುಮ ದೇವಾಲಯ ಚಿತ್ರಗಳು

ಅರ್ಜುನ್ ಸರ್ಜಾ ಹನುಮ ದೇವಾಲಯ ಚಿತ್ರಗಳು

Posted By:
Subscribe to Filmibeat Kannada

ತಮಿಳು ಚಿತ್ರರಂಗದಲ್ಲಿ ಬಲು ಎತ್ತರಕ್ಕೆ ಏರಿದ ಕರ್ನಾಟಕ ಮೂಲದ ನಟ ಅರ್ಜುನ್ ಸರ್ಜಾ. ಈಗವರು ಅಭಿಮನ್ಯು ಎಂಬ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಅರ್ಜುನ್ ಸರ್ಜಾ ಹನುಮಂತನ ದೇವಸ್ಥಾನ ನಿರ್ಮಿಸುತ್ತಿರುವ ಬಗ್ಗೆ ಒನ್ಇಂಡಿಯಾ ಕನ್ನಡ ಕಾಲಕಾಲಕ್ಕೆ ವರದಿ ಮಾಡಿತ್ತು.

ಈ ವಿಗ್ರಹ ಕೆತ್ತನೆ ಕಾರ್ಯ ನಡೆದದ್ದು ನಮ್ಮ ಕರ್ನಾಟಕದಲ್ಲಿ ಎಂಬುದು ವಿಶೇಷ. ಸುಮಾರು 35 ಅಡಿ ಎತ್ತರದ ಈ ಏಕಶಿಲಾ ವಿಗ್ರಹ ಈಗ ಸಿದ್ಧವಾಗಿದೆ. ಶಿಲ್ಪಿ ಅಶೋಕ್ ಗುಡಿಗಾರ್ ಅವರ ನೇತೃತ್ವದಲ್ಲಿ ಈ ವಿಗ್ರಹನ್ನು ಕೆತ್ತಲಾಗಿದೆ. ಧ್ಯಾನದ ಭಂಗಿಯಲ್ಲಿರುವ ಹನುಮನ ವಿಗ್ರಹ ಕೆತ್ತನೆ ಕಾರ್ಯ ನಡೆದದ್ದು ದೇವನಹಳ್ಳಿಯಲ್ಲಿ.

ಈ ಏಕಶಿಲಾ ಹನುಮ ವಿಗ್ರಹವನ್ನು ಚೆನ್ನೈನ ತಮ್ಮ ಫಾರ್ಮ್ ಹೌಸ್ ನಲ್ಲಿ ಅರ್ಜುನ್ ಸರ್ಜಾ ಪ್ರತಿಷ್ಠಾಪಿಸಿದ್ದಾರೆ. ಶೀಘ್ರದಲ್ಲೇ ಕುಂಭಾಭಿಷೇಕವನ್ನೂ ಮಾಡುವುದಾಗಿ ತಿಳಿಸಿದ್ದಾರೆ. ಸುಂದರ ಹನುಮನ ವಿಗ್ರಹದ ಚಿತ್ರಗಳನ್ನು ಸ್ಲೈಡ್ ಗಳಲ್ಲಿ ನೋಡಿ.

ರಾಮದೂತನ ಬಗ್ಗೆ ಎಲ್ಲಿಲ್ಲದ ಭಕ್ತಿ

ರಾಮನ ಪರಮಭಕ್ತ ರಾಮದೂತ ಹನುಮಂತನ ಭಕ್ತಿ ಶಕ್ತಿಗೆ ಯಾರು ತಾನೆ ಪರವಶರಾಗುವುದಿಲ್ಲ. ಅರ್ಜುನ್ ಸರ್ಜಾ ಅವರ ಕುಟುಂಬಿಕರಿಗಂತೂ ಹನುಮಂತನ ಬಗ್ಗೆ ಎಲ್ಲಿಲ್ಲದ ಭಕ್ತಿ ಗೌರವಗಳಿವೆ.

ಫಾರ್ಮ್ ಹೌಸ್ ನಲ್ಲಿ ನಿರ್ಮಾಣ

ಚೆನ್ನೈನ ಗೇರುಗಂಬಕ್ಕಂ ಪ್ರದೇಶದಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ಈ ದೇವಾಯಲ ನಿರ್ಮಿಸಲಾಗಿದೆ.

ಸುಮಾರು 35 ಅಡಿ ಎತ್ತರದ ಹನುಮನ ವಿಗ್ರಹ

ಸುಮಾರು 35 ಅಡಿ ಎತ್ತರದ ಹನುಮನ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಆಲಯ ನಿರ್ಮಾಣಕ್ಕಾಗಿ ಸುಮಾರು 27 ಟನ್ ಕಬ್ಬಿಣವನ್ನು ಬಳಸಿಕೊಳ್ಳುತ್ತಿರುವುದು ವಿಶೇಷ.

ಅರ್ಜುನ್ ನಿಂತು ನಿರ್ಮಿಸಿದ ದೇವಾಲಯ

ತಮ್ಮ ಚಿತ್ರಗಳ ನಿರ್ಮಾಣದ ಜೊತೆಗೆ ಅರ್ಜುನ್ ಸರ್ಜಾ ಅವರು ಆಲಯ ನಿರ್ಮಾಣದ ಜವಾಬ್ದಾರಿಯನ್ನೂ ಸ್ವತಃ ತಾವೇ ಹೊತ್ತಿದ್ದಾರೆ. ಅವರೇ ನಿಂತು ಕೆಲಸ ಮಾಡಿಸುತ್ತಿರುವುದು ಹನುಮಂತನ ಮೇಲಿರುವ ಭಕ್ತಿಗೆ ನಿದರ್ಶನ.

ಅರ್ಜುನ್ ಕನಸಿನ ಪ್ರಾಜೆಕ್ಟ್ ನನಸು

ಈ ಬಗ್ಗೆ ಮಾತನಾಡಿರುವ ಅರ್ಜುನ್ ಸರ್ಜಾ, "ನನ್ನ ಕನಸಿನ ಪ್ರಾಜೆಕ್ಟ್ ನನಸಾಗುತ್ತಿದೆ. ಈಗಷ್ಟೇ ಒಂದು ರೂಪ ಪಡೆಯುತ್ತಿದ್ದು ಶೀಘ್ರದಲ್ಲೇ ನಿಜವಾಗಲಿದೆ. ಶೀಘ್ರದಲ್ಲೇ ಮಹಾಕುಂಭಾಭಿಷೇಕ ಹಮ್ಮಿಕೊಂಡಿದ್ದೇವೆ. ಆಲಯ ನಿರ್ಮಾಣದ ಬಳಿಕ ಭಕ್ತಾದಿಗಳಿಗೆ ಪೂಜೆಗೆ ಅನುವು ಮಾಡಿಕೊಡುತ್ತೇವೆ" ಎಂದಿದ್ದಾರೆ.

ಶೀಘ್ರದಲ್ಲೇ ಮಹಾಕುಂಭಾಭಿಷೇಕ

"ಶೀಘ್ರದಲ್ಲೇ ಮಹಾಕುಂಭಾಭಿಷೇಕ ಹಮ್ಮಿಕೊಂಡಿದ್ದೇವೆ. ಆಲಯ ನಿರ್ಮಾಣದ ಬಳಿಕ ಭಕ್ತಾದಿಗಳಿಗೆ ಪೂಜೆಗೆ ಅನುವು ಮಾಡಿಕೊಡುತ್ತೇವೆ" ಎಂದಿದ್ದಾರೆ.

English summary
South Indian Actor Action King Arjun Sarja established A large size Anjaneya statue in his Hanuman temple at Gerugambakkam in Chennai. A 35 feet statue of the deity was sculpted exclusively for the temple.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada