India
  For Quick Alerts
  ALLOW NOTIFICATIONS  
  For Daily Alerts

  'ಮಗಧೀರ'ನ ಮೋಡಿಯಿಂದ ಗೆಲುವಿನ ಗದ್ದುಗೆ ಏರಿದ 'ಯುವರಾಜ'

  By ಹರಾ
  |

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬೆಂಗಳೂರಲ್ಲಿ ಮತ್ತೊಮ್ಮೆ ಕಮಲ ಅರಳಿದೆ. ನಿರೀಕ್ಷಿಸಿದ ಮಟ್ಟಕ್ಕೆ ಕಾಂಗ್ರೆಸ್ ಪ್ರಾಬಲ್ಯ ಮೆರೆದಿಲ್ಲ.

  ಆದರೆ, ಗೆಲುವಿನ ಸರದಾರ ಅಂತಲೇ ಗುರುತಿಸಿಕೊಂಡಿದ್ದ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ (ವಾರ್ಡ್ ನಂಬರ್ 118) ಸುಧಾಮನಗರ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಯುವರಾಜ್ ನಿರೀಕ್ಷಿಸಿದಂತೆ ಜಯ ಸಾಧಿಸಿದ್ದಾರೆ.

  ಕಾಂಗ್ರೆಸ್ ನಾಯಕ ಆರ್.ವಿ.ದೇವರಾಜ್ ಪುತ್ರ ಯುವರಾಜ್ ಪರವಾಗಿ ಇಡೀ ಸುಧಾಮನಗರದ ಬೀದಿ ಬೀದಿಗಳಲ್ಲಿ ಮತಯಾಚಿಸಿದ್ದು 'ಮಗಧೀರ' ಚಿತ್ರದ ವಿಲನ್ ಪಾತ್ರಧಾರಿ ದೇವ್ ಗಿಲ್. [ಬೆಂಗಳೂರಿನ ಬೀದಿ-ಬೀದಿಗಳಲ್ಲಿ 'ಕೈ' ಬೀಸಿದ 'ಮಗಧೀರ' ಕೇಡಿ]

  ಚುನಾವಣಾ ಪ್ರಚಾರದ ಮೊದಲ ದಿನದಿಂದಲೂ ಯುವರಾಜ್ 'ಕೈ' ಹಿಡಿದು ಪ್ರಚಾರ ಮಾಡಿದವರು ದೇವ್ ಗಿಲ್. ಇಬ್ಬರೂ ಫ್ಯಾಮಿಲಿ ಫ್ರೆಂಡ್ಸ್ ಆದ ಕಾರಣ ಚುನಾವಣೆಯ ದಿನದಂದೂ ಸಹ ಯುವರಾಜ್ ಗೆ ಸಾಥ್ ಕೊಟ್ಟು ದೇವ್ ಗಿಲ್ ಮತದಾನ ವೀಕ್ಷಿಸಿದರು. [ಸುಧಾಮನಗರದಲ್ಲಿ ಯುವರಾಜ್ ಜೊತೆ 'ಮಗಧೀರ' ದೇವ್ ಗಿಲ್]

  ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬಿಜಿಯಿದ್ದರೂ, ಯುವರಾಜ್ ಗೆಲುವಿಗಾಗಿ ದೇವ್ ಗಿಲ್ ಶ್ರಮಿಸಿದರು. ''ಯುವ ಶಕ್ತಿಗೆ ಚಾನ್ಸ್ ಕೊಡಬೇಕು. ಯುವರಾಜ್ ಖಂಡಿತ ಉತ್ತಮ ಕೆಲಸ ಮಾಡುತ್ತಾರೆ'' ಅಂತ ದೇವ್ ಗಿಲ್ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ ಮನೆಮನೆಗೆ ತೆರಳಿ ಎಲ್ಲರ ಬಳಿ ಯುವರಾಜ್ ಗೆ ಮತ ಹಾಕುವಂತೆ ಕೇಳಿಕೊಂಡರು.

  devgill-yuvaraj

  'ಮಗಧೀರ'ನ ಮೋಡಿಯಿಂದ ಮತ್ತು ತಂದೆ ಆರ್.ವಿ.ದೇವರಾಜ್ ಶ್ರಮದಿಂದ ಯುವರಾಜ್ ಗೆಲುವಿನ ನಗೆ ಬೀರಿದ್ದಾರೆ. ''Until You start believing in yourself, you ain't gonna have a life'' ಅನ್ನೋ ಧ್ಯೇಯ ವಾಕ್ಯವನ್ನ ನಂಬಿರುವ ಯುವರಾಜ್, ಆತ್ಮವಿಶ್ವಾಸದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ 2998 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  ಗೆಲುವನ್ನ ಸುಧಾಮನಗರದ ಜನತೆಗೆ ಅರ್ಪಿಸಿರುವ ಯುವರಾಜ್, ಎಲ್ಲರ ವಿಶ್ವಾಸವನ್ನ ಉಳಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಯುವರಾಜ್ ಗೆಲುವಿನ ಸುದ್ದಿ ಕೇಳಿ ದೇವ್ ಗಿಲ್ ಶುಭ ಹಾರೈಸಿದ್ದಾರೆ.

  English summary
  Tollywood Actor Dev Gill campaign has helped Congress candidate Yuvaraj, Son of Congress leader R.V.Devaraj. Yuvaraj has won in Sudhamanagar Ward, BBMP Elections 2015.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X