ಅದ್ದೂರಿಯಾಗಿ ನೆರವೇರಿತು 'ಬೆಲ್ ಬಾಟಂ' ಚಿತ್ರದ ಮುಹೂರ್ತ
ಜಯತೀರ್ಥ ನಿರ್ದೇಶನದ 'ಬೆಲ್ ಬಾಟಂ' ಸಿನಿಮಾದ ಮುಹೂರ್ತ ಇಂದು ನೆರವೇರಿದೆ. ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಈ ಹೊಸ ಸಿನಿಮಾ ಸೆಟ್ಟೆರಿದೆ. ತಮ್ಮ ಹೊಸ ಚಿತ್ರದ ಸಂತಸವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಟಿ ಹರಿಪ್ರಿಯಾ ಹಂಚಿಕೊಂಡಿದ್ದಾರೆ.
ಈ ಸಿನಿಮಾದ ಮೂಲಕ 'ಕಿರಿಕ್ ಪಾರ್ಟಿ' ನಿರ್ದೇಶಕ ರಿಷಬ್ ಶೆಟ್ಟಿ ನಾಯಕ ಆಗಿದ್ದಾರೆ. ರಿಷಬ್ ಶೆಟ್ಟಿಗೆ ಹರಿಪ್ರಿಯಾ ಜೋಡಿಯಾಗಿದ್ದಾರೆ. ಈ ಹಿಂದೆ ಹರಿಪ್ರಿಯಾ ಜಯತೀರ್ಥ ಅವರ 'ಬುಲೆಟ್ ಬಸ್ಯಾ' ಚಿತ್ರದಲ್ಲಿ ಮತ್ತು ರಿಷಬ್ ಶೆಟ್ಟಿ ಅವರ 'ರಿಕ್ಕಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ 'ಬೆಲ್ ಬಾಟಂ'ನಲ್ಲಿಯೂ ಈ ಕಾಂಬಿನೇಶನ್ ಗಳು ಒಂದಾಗಿದೆ.

'ಬೆಲ್ ಬಾಟಂ' ಒಂದು ಪತ್ತೇದಾರಿ ಕಥೆಯ ಸಿನಿಮಾವಾಗಿದೆ. ಇಡೀ ಸಿನಿಮಾ 80ರ ದಶಕದಲ್ಲಿ ನಡೆಯಲಿದೆ. ಆ ಕಾಲದ ಹಳ್ಳಿಯಲ್ಲಿ ಸಿನಿಮಾ ಕಥೆ ಸಾಗುತ್ತದೆ. ಇಲ್ಲಿ ಹರಿಪ್ರಿಯಾ ಸುಮ ಎಂಬ ಹುಡುಗಿ ಪಾತ್ರವನ್ನು ಮತ್ತು ರಿಷಬ್ ಶೆಟ್ಟಿ ದಿವಾಕರ್ ಎಂಬ ಪಾತ್ರ ಮಾಡುತ್ತಿದ್ದಾರೆ.
More from Filmibeat
English summary
Rishab Shetty and Haripriya's 'Bell Bottom' Kannada movie launched Today. The movie is directed by Jayatheertha
haripriya rishab shetty jayatheertha kannada movies sandalwood ಹರಿಪ್ರಿಯಾ ಜಯತೀರ್ಥ ಕನ್ನಡ ಸಿನಿಮಾ ಸ್ಯಾಂಡಲ್ ವುಡ್


Click it and Unblock the Notifications











