For Quick Alerts
  ALLOW NOTIFICATIONS  
  For Daily Alerts

  ಚುನಾವಣೆ ಹಿನ್ನಲೆ ಚಿತ್ರೀಕರಣಕ್ಕೆ ರಜೆ ನೀಡಿದ 'ಭರಾಟೆ' ಟೀಂ

  |

  ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ 'ಭರಾಟೆ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಸದ್ಯ ಮೈಸೂರಿನಲ್ಲಿ ಬೀಡು ಬಿಟ್ಟಿರುವ ಚಿತ್ರತಂಡ ಲಲಿತ್ ಮಹಲ್ ಸೇರಿದಂತೆ ಮೈಸೂರಿನ ಸುಂದರ ತಾಣಗಳಲ್ಲಿ, ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ಮಾಡುತ್ತಿದೆ ಭರಾಟೆ ತಂಡ.

  ರೋರಿಂಗ್ ಸ್ಟಾರ್ ಮತ್ತು ನಟಿ ಶ್ರೀಲೀಲಾ ಅವರ ರೋಮ್ಯಾಂಟಿಕ್ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡವೀಗ ದಿಢೀರನೆ ರಜೆ ಘೋಷಿಸಿದೆ. ಹೌದು, ಚುನಾವಣೆಯ ಹಿನ್ನಲೆ ಇಡೀ 'ಭರಾಟೆ' ಚಿತ್ರತಂಡಕ್ಕೆ ರಜೆ ನೀಡಲಾಗಿದೆ. ಇದೇ ತಿಂಗಳು 18ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಚಿತ್ರತಂಡದ ಮತದಾನ ಮಾಡುವ ಉದ್ದೇಶದಿಂದ ರಜೆ ನೀಡಲಾಗಿದೆ.

  ಮೈಸೂರಿನಲ್ಲಿ ಶ್ರೀಮರಳಿ-ಶ್ರೀಲೀಲಾ 'ಭರಾಟೆ' ಡ್ಯುಯೆಟ್ ಮೈಸೂರಿನಲ್ಲಿ ಶ್ರೀಮರಳಿ-ಶ್ರೀಲೀಲಾ 'ಭರಾಟೆ' ಡ್ಯುಯೆಟ್

  ಅಂದ್ಹಾಗೆ 'ಭರಾಟೆ' ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಸುಪ್ರೀತ್ ನಿರ್ಮಾಣ ವಿರುವ 'ಭಾರಟೆ' ಚಿತ್ರದಲ್ಲಿ ದೊಡ್ಡ ಕಲಾವಿದರ ದಂಡೆ ಇದೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ತಾರಾ ಚಿತ್ರತಂಡದ ರಜೆಯ ಬಗ್ಗೆ ಹೇಳುವ ಜೊತೆಗೆ ಪ್ರತಿಯೊಬ್ಬರು ಮತದಾನ ಮಾಡಿ ಎಂದು ಹೇಳುವ ಮೂಲಕ ಮತದಾನದ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

  ಕೇವಲ 18ರಂದು ಮಾತ್ರವಲ್ಲದೆ ಏಪ್ರಿಲ್ 23ರಂದು ನಡೆಯುವ ಎರಡನೇ ಹಂತದ ಮತದಾನದ ದಿನ ಸಹ 'ಭರಾಟೆ' ತಂಡ ರಜೆ ಘೋಷಿಸಿದೆ. ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿರುವ 'ಭರಾಟೆ' ಚಿತ್ರ ಸಧ್ಯದಲ್ಲೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.

  English summary
  Kannada actor Roaring star Sri Murali starrer Bharate movie team will announce holiday on April 18th for election. This movie is directed by Chethan Kumar.
  Tuesday, April 16, 2019, 18:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X