For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್‌ಕುಮಾರ್ ಸರ್ ನನ್ನ ಜೀವನದಲ್ಲಿ 3 ಪ್ರಮುಖ ಪಾತ್ರ ವಹಿಸಿದ್ದಾರೆ : ಶೈನ್‌ ಶೆಟ್ಟಿ

  |

  ನಟ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ನಿಧನ ಹೊಂದಿ 13 ದಿನ ಕಳೆದು ಎರಡು ವಾರ ಆಗುತ್ತಾ ಇದೆ. ಆದರೆ ಅಪ್ಪು ಅವರನ್ನು ಯಾರಿಂದಲೂ ಅಷ್ಟು ಸುಲಭಕ್ಕೆ ಬಿಟ್ಟು ಕೊಡಲು ಸಾಧ್ಯ ಆಗುತ್ತಾ ಇಲ್ಲ. ಹಾಗಾಗಿ ಸಾಕಷ್ಟು ಅಪ್ಪು ಒಡನಾಡಿಗಳು ಅವರ ಬಗ್ಗೆ ಪ್ರತಿ ದಿನ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ. ಈಗ ಬಿಗ್‌ ಬಾಸ್‌ ಖ್ಯಾತಿಯ ಶೈನ್‌ ಶೆಟ್ಟಿ ಅಪ್ಪು ಬಗ್ಗೆ ಸುಧೀರ್ಘವಾಗಿ ಬೆರೆದುಕೊಂಡಿದ್ದಾರೆ. ಪುನೀತ್‌ ರಾಜ್‌ಕುಮಾರ್ ತನ್ನ ಜೀವದಲ್ಲಿ ಹೇಗೆ ಮುಖ್ಯ ಆದರು ಎನ್ನುವುದನ್ನು ವಿವರಿಸಿದ್ದಾರೆ.

  ಪುನೀತ್‌ ರಾಜ್‌ಕುಮಾರ್ ಅವರನ್ನ ನೆನೆದು ನಟ ಶೈನ್‌ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಕೊಂಡಿದ್ದು ಹೀಗೆ .

  "ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ. ಆ ಸಿನಿಮಾದ ಚಿತ್ರ ಕಥೆಯಲ್ಲಿ 3 ಭಾಗ, ಹಾಗೆಯೆ ಪುನೀತ್ ರಾಜ್‌ಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ. ಮೊದಮೊದಲು ನನ್ನ ಈ ಕಲಾ ಪ್ರವಾಸ ಶುರುವಾದಾಗ, ಪುನೀತ್ ಸರ್ ಅವರನ್ನು ಕನ್ನಡ ಚಿತ್ರರಂಗದ ಪವರ್‌ ಸ್ಟಾರ್ ಆಗಿ ಎದುರು ನೋಡುತ್ತಿದ್ದೆ. ಬೆಳ್ಳಿ ಪರದೆಯ ಮೇಲೆ ಅವರು ಮೂಡಿಸಿದ ಜಾದೂಗೆ ಬೆರಗಾಗಿದ್ದೆ" .

  "ಅವರ ಜೊತೆ ನಟಿಸಲು ಹಾಗು ಹಲವಾರು ಬಾರಿ ರಂಗ ಮಂಚಿಕೆ ಹಂಚಿಕೊಳ್ಳಲು ಅವಕಾಶ ದೊರೆತಾಗ, ಒಂದು ಪುಟ್ಟ ಗೆಳೆತನ ಚಿಗುರೊಡೆಯಿತು. ನನ್ನ ಆಸೆ , ಪ್ರತಿಭೆಗಳನ್ನು ಹೊಗಳಿದಲ್ಲದ್ದೆ, ಅವರ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡಿ ನನ್ನ ಗುರಿಯನ್ನು ತಲುಪಲು ಪ್ರೇರಿಪಿಸಿದರು. ಈ ಸಿನೆಮಾ ಫೀಲ್ಡ್‌ ನಲ್ಲಿ ಉಳಿಯೋದಕ್ಕೆ, ಬೆಳೆಯೋದಕ್ಕೆ ಅಪ್ಪು ಸರ್ ರವರ ಪ್ರೋತ್ಸಹ ಒಂದು ಕಾರಣ ಎಂದು ಹೇಳಿದರೆ ತಪ್ಪಾಗಲಾರದು" .

  "ಆ ಸ್ನೇಹ ಭ್ರಾತೃತ್ವದ ರೂಪ ಪಡೆಯಲು ಬಹಳ ಸಮಯ ಬೇಕಾಗಿರಲಿಲ್ಲ. ಪುನೀತ್ ಸರ್ ರವರನ್ನು ಅಷ್ಟು ಕೊಂಡಾಡಲು ಅವರ ಸುತ್ತ ಮುತ್ತ ಇದ್ದ ಜನರನ್ನು ವೃತಿಯಲ್ಲಷ್ಟೇ ಅಲ್ಲ ವೈಯಕ್ತಿಕ ವಿಚಾರದಲ್ಲಿಯೂ ಹುರಿದುಂಬಿಸುತ್ತಿದ್ದರೆಂಬುದೇ ಸಾಕ್ಷಿ. ಗಲ್ಲಿ ಕಿಚನ್ ಶುರುವಾದಾಗ , ತಮ್ಮ ಬೆಂಬಲದ ಜೊತೆಗೆ ಉತ್ತಮ ಉದ್ಯಮಿಯಾಗುವ ಹಲವಾರು ಆಲೋಚನೆಗಳನ್ನೂ ವ್ಯಕ್ತಪಡಿಸಿದರು" .

  "ಬೆಳಿತಾ ಬೆಳಿತಾ ಆ ಮಿನುಗು ತಾರೆ, ಕಷ್ಟ ಪಡ್ತಾ ಆ ಸಲಹೆಗಾರ, ಕಾಲ ಕ್ರಮೇಣ ಪ್ರೀತಿಯ ಸಹೋದರನಾಗಿ ಬದಲಾಗಿ ನನ್ನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. ನೀವು ಕಲಿಸಿದ ಪಾಠ ,ಮೌಲ್ಯಗಳನ್ನು ಎಂದಿಗೂ ಜೀವಂತವಾಗಿ ಇರಿಸಿಕೊಳುತ್ತಾ... ಹೋಗ್ಬನ್ನಿ ಪುನೀತ್ ಸರ್".

  Big Boss Fame Shine Shetty Wrote letter About Puneeth Rajkumar

  ಈ ರೀತಿಯಾಗಿ ಬಿಗ್‌ ಬಾಸ್ ಖ್ಯಾತಿಯ ಶೈನ್‌ ಶೆಟ್ಟಿ ಅಪ್ಪು ಬಗ್ಗೆ ಬರೆದು ಕೊಂಡಿದ್ದಾರೆ. ಅಷ್ಟಕ್ಕೂ ಶೈನ್‌ ಶೆಟ್ಟಿ ಮಾತ್ರವಲ್ಲ. ಅಪ್ಪು ಸಿನಿಮಾ ರಂಗದಲ್ಲಿ ಬಹಳ ಮಂದಿಗೆ ಸ್ಪೂರ್ತಿ ಆಗಿದ್ದ ವ್ಯಕ್ತಿ. ಯಾರಾದರು ಒಮ್ಮೆ ಅವರನ್ನು ಭೇಟಿ ಮಾಡಿದರು ಸಾಕು ಆ ಭೇಟಿ ಹಾಗೆ ನೆನಪಿನಲ್ಲಿ ಶಾಸ್ವತವಾಗಿ ಉಳಿದು ಬಿಡುತ್ತದೆ. ಕಾರಣ ಪುನೀತ್‌ ರಾಜ್‌ಕುಮಾರ್‌ ಅಷ್ಟು ವಿನಯವಂತ ವ್ಯಕ್ತಿ. ಜೊತೆಗೆ ಹೊಸ ಬರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು.

  ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಪುನೀತ್‌ ರಾಜ್‌ಕುಮಾರ್ ಪಿಆರ್‌ಕೆ ಪ್ರೊಡಕ್ಷನ್ ಆರಂಭಿಸಿದ್ದು. ಪುನೀತ್‌ ರಾಜ್‌ಕುಮಾರ್ ಒಬ್ಬ ದೊಡ್ಡ ಸ್ಟಾರ್ ನಟ. ಅವರಿಗಾಗಿ ಸಾಕಷ್ಟು ನಿರ್ಮಾಪಕರು ಕಾಯುತ್ತಿದ್ದರು. ಅದೆಷ್ಟೋ ನಿರ್ದೇಶಕರು ನಿರ್ಮಾಪಕರನ್ನು ಹುಡುಕಿ ಕೊಂಡು ಬಂದು ಅಪ್ಪು ಕಾಲ್‌ ಸೀಟ್‌ಗಾಗಿ ಕಾಯುತ್ತಿದ್ದರು. ಹೀಗಿರುವಾಗ ಅಪ್ಪಿ ಪಿಆರ್‌ಕೆ ನಿರ್ಮಾಣ ಮಾಡಿದ್ದು, ತಮ್ಮ ಸಿನಿಮಾಗಳನ್ನ ನಿರ್ಮಾಣ ಮಾಡಿ ದುಡ್ಡು ಮಾಡಲು ಅಲ್ಲ. ಬದಲಿಗೆ ಹೊಸಬರಿಗೆ ಬೆನ್ನುಲುಬಾಗಿ ನಿಲ್ಲಲು ಅಪ್ಪು ಈ ಕಾರ್ಯಕ್ಕೆ ಕೈ ಹಾಕಿದ್ದರು.

  ಅಂತೆಯೆ ಶೈನ್‌ ಶೆಟ್ಟಿ ಗಲ್ಲಿ ಕಿಚನ್ ಆರಂಭದ ವೇಳೆಯೂ ಅಪ್ಪು ಪ್ರೋತ್ಸಾಹ ಮಾಡಿದ್ದರು, ಜೊತೆಗೆ ಸಿನಿಮಾ ಬದುಕನ್ನು ಕಟ್ಟಿಕೊಳ್ಳಲು ಸಾಕಷ್ಟು ಸಲಹೆಗಳನ್ನ ನೀಡಿದ್ದಾರೆ ಎಂದು ಶೈನ್ ಶೆಟ್ಟಿ ಸಾಮಾಜಿಕಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ.

  English summary
  Big Boss Fame Actor Shine Shetty Wrote letter About Puneeth Rajkumar Importance in His Life,
  Thursday, November 11, 2021, 16:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X