For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಲ್ಲಿ ಬಿಗ್ಎಫ್ಎಂನ #IAmNotSorry ಅಭಿಯಾನ

  By ಜೇಮ್ಸ್ ಮಾರ್ಟಿನ್
  |

  ಭಾರತದ ಅತಿದೊಡ್ಡ ರೇಡಿಯೋ ಜಾಲತಾಣ 92.7 ಬಿಗ್ ಎಫ್ಎಂ, ತನ್ನ 59 ಕೇಂದ್ರಗಳಲ್ಲಿ ವಿಕಾಸಾತ್ಮಕ ಅಭಿಯಾನದ # ಐಅಮ್ ನಾಟ್ ಸಾರಿ ಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಜನರಲ್ಲಿ ವಿಭಿನ್ನವಾಗಿ ಯೋಚಿಸುವ ಮನಸ್ಥಿತಿಯನ್ನು ಬೆಳೆಸಿ ಸಮಾಜ ಒಪ್ಪಿಕೊಳ್ಳುವಂತೆ ಮಾಡುವ ವಿಶೇಷ ಉದ್ದೇಶವನ್ನು ಹೊಂದಿದೆ.

  ಹೊಸ ವರ್ಷದ ಪ್ರಾರಂಭದೊಂದಿಗೆ, ಬಿಗ್ ಎಫ್ಎಮ್ ಈ ಧನಾತ್ಮಕ ಬದಲಾವಣೆಯ ಹೊಸ ಪ್ರಯಾಣವನ್ನು ಆರಂಭಿಸಿದ್ದು ಕೇಳುಗರಲ್ಲಿ ಹೊಸ ದೃಷ್ಟಿಕೋನವನ್ನು ಹುಟ್ಟುಹಾಕುವ ಗುರಿ ಹೊಂದಿದೆ. ತನ್ನ ಕೇಳುಗರಿಗಿರುವ ಕಟ್ಟುಪಾಡುಗಳಿಂದ ಹೊರಬಂದು ಅವರು ಮುಕ್ತವಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ವೇದಿಕೆ ಒದಗಿಸಿಕೊಡುತ್ತದೆ. ಅದರೊಂದಿಗೆ ತಾವು ಮಾಡಿದ್ದು ಸರಿ ಎಂಬುದರ ಸಮರ್ಥನೆಯನ್ನು ಶೋತೃಗಳು ಯಾವುದೇ ಭಯವಿಲ್ಲದೆ ಮಾಡಬಹುದಾಗಿದೆ.

  ಆರ್ ಜೆ ಶ್ರುತಿ, ಆರ್.ಜೆ ರೋಹಿತ್ ಮತ್ತು ಆರ್.ಜೆ. ದಿವ್ಯಶ್ರೀ ಅವರು ಹೆಚ್ಚಿನ ಕೇಳುಗರು ಪಾಲ್ಗೊಳ್ಳುವಂತೆ ಮಾಡಲು ತಮ್ಮ ಅನಪೇಕ್ಷಿತ ಕಥೆಗಳನ್ನು ಹಂಚಿಕೊಂಡಿದ್ದಾರೆ. ಆಯುಷ್ಮಾನ್ ಖುರಾನಾ, ಶಂಕರ್ ಮಹಾದೇವನ್, ಸೋನು ನಿಗಮ್, ನರ್ಗಿಸ್ ಫಕ್ರಿ, ಸನ್ನಿ ಲಿಯೋನ್ ಮುಂತಾದ ಖ್ಯಾತನಾಮರು ತಮ್ಮ 'ಐ ಆಮ್ ನಾಟ್ ಸಾರಿ' ಕಥೆಗಳನ್ನು ಹಂಚಿಕೊಂಡಿದ್ದಾರೆ.

  ನಟಿ ಸನ್ನಿ ಲಿಯೋನ್, "ನಾನು ನನ್ನ ಜೀವನದಲ್ಲಿ ಯಾವ ತಪ್ಪನ್ನೂ ಮಾಡಿಲ್ಲ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಏನು ಮಾಡುವುದಿದ್ದರೂ ಅದನ್ನು ಹೃದಯದಿಂದ ಮಾಡಬೇಕು ಎಂದು ನಂಬಿದವಳು ನಾನು" ಎಂದಿದ್ದಾರೆ.

  ಬಾಲಿವುಡ್ ತಾರೆಯರಿಂದ ಅನುಭವ ಹಂಚಿಕೆ

  ಬಾಲಿವುಡ್ ತಾರೆಯರಿಂದ ಅನುಭವ ಹಂಚಿಕೆ

  ನಿಷೇಧಿತ ವಿಷಯಗಳ ಸುತ್ತ ಚಿತ್ರ ಮಾಡಿದ ಕುರಿತು ನಟ ಆಯುಶ್ಮನ್ ಖುರಾನಾ # ಐ ಅಮ್ ನಾಟ್ ಸಾರಿ ವೀಡಿಯೊವಿದ್ದರೆ, ನರ್ಗಿಸ್ ಫಕ್ರಿ ತನ್ನ ಜೀವನದ ಆಯ್ಕೆಗಳ ಬಗ್ಗೆ, ಸುತ್ತಮುತ್ತ ಶುಚಿಗೊಳಿಸುವ ಸವಾಲುಗಳ ಬಗ್ಗೆ ಸೋನು ಸೂದ್ ಅವರ ಮಾತುಗಳು ಎಫ್ ಎಂ ಮತ್ತು ಡಿಜಿಟಲ್ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಗಳಿಸಿದೆ. ಈ ಅಭಿಯಾನ ಆರಂಭವಾದ ಬಳಿಕ ಟ್ವಿಟ್ಟರ್ ನಲ್ಲಿ 4 ನೇ ಸ್ಥಾನದಲ್ಲಿದ್ದು ಕಾರ್ಯಾಚರಣೆಯು ಭಾರೀ ಯಶಸ್ಸನ್ನು ಕಂಡಿದೆ.

  ಪಾತ್ರಗಳ ಆಯ್ಕೆ ಬಗ್ಗೆ ಆಯುಷ್ಮಾನ್ ಖುರಾನಾ

  ಪಾತ್ರಗಳ ಆಯ್ಕೆ ಬಗ್ಗೆ ಆಯುಷ್ಮಾನ್ ಖುರಾನಾ

  "ವಿಕಿ ಡೊನೊರ್ ನನ್ನು ಆಯ್ದುಕೊಂಡಿದ್ದಕ್ಕೆ ನನಗೆ ಬೇಸರವಿಲ್ಲ, ಏಕೆಂದರೆ ಅದು ನಿಷೇಧದ ವಿಷಯವಾಗಿತ್ತು. ಬದಲಿಗೆ, ಇದು ಜನರ ಸಮೀಪಕ್ಕೆ ಕರೆದೊಯ್ಯಿತು ಮತ್ತು ಚರ್ಚೆಗಳಿಗೆ ಆಸ್ಪದ ನೀಡಿತು. ನಾನು 'ದಮ್ ಲಗಾ ಕೆ ಹೈಸಾ' ಚಿತ್ರವನ್ನು ಮಾಡಿದ್ದೆ.

  ಅಲ್ಲಿ ನಾನು ದಪ್ಪಗಿನ ಹುಡುಗಿಯನ್ನು ಮದುವೆಯಾದೆ. ನಾನು ಚಲನಚಿತ್ರಗಳನ್ನುಆಯ್ದುಕೊಂಡ ಕೆಚ್ಚೆದೆಯ ಬಗ್ಗೆ ಬೇಸರ ಹೊಂದಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಕೆಲವು ಪಾತ್ರಗಳನ್ನು ನಾನು ತಿರಸ್ಕರಿಸಿದ್ದೇನೆ. ನನ್ನ ಚಲನಚಿತ್ರಗಳು ಮತ್ತು ನನ್ನ ನಿರ್ಧಾರಗಳು ಸಫಲವಾಗಿವೆ ಎಂಬ ಖುಷಿ ನನಗಿದೆ. ಈ ಚಲನಚಿತ್ರಗಳು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ; ಅವು ಚಲನಚಿತ್ರ-ಮಾಧ್ಯಮಕ್ಕೆ ಮೌಲ್ಯವನ್ನು ಸೇರಿಸುತ್ತವೆ" ಎಂದಿದ್ದಾರೆ.

  ಆರ್ಥಪೂರ್ಣ ಸಂದೇಶ ನೀಡಲಿದೆ

  ಆರ್ಥಪೂರ್ಣ ಸಂದೇಶ ನೀಡಲಿದೆ

  ರೇಡಿಯೋ ನೆಟ್ ವರ್ಕ್ ಕಾರ್ಯಾಚರಣೆಯ ಅವಧಿ ಉದ್ದಕ್ಕೂ ವಿಶೇಷ ನಿರ್ಧಾರಗಳನ್ನು ಕೈಗೊಂಡು ಸಫಲರಾದ ಜನರ ಕಥೆಗಳನ್ನು ಪ್ರಸಾರ ಮಾಡಲಿದೆ. ಸಾಮೂಹಿಕ ಪ್ರೇಕ್ಷಕರಿಗೆ ಉದ್ದೇಶಿಸಿರುವ ಈ ಕಾರ್ಯಕ್ರಮದಲ್ಲಿ ವ್ಯಕ್ತಿಯು ತೆಗೆದುಕೊಳ್ಳುವ ಕೆಚ್ಚೆದೆಯ ನಿರ್ಧಾರದ ಬಗ್ಗೆ ಅರ್ಥಪೂರ್ಣ ಸಂದೇಶಗಳನ್ನು ನೀಡಲಿದೆ.

  ಸೆಲೆಬ್ರಿಟಿಗಳಿಂದ ಅನುಭವ ಹಂಚಿಕೆ

  ಸೆಲೆಬ್ರಿಟಿಗಳಿಂದ ಅನುಭವ ಹಂಚಿಕೆ

  ಕಾರ್ಯಕ್ರಮ ಆರಂಭವಾದ ಕೆಲವೇ ದಿನಗಳಲ್ಲಿ ಇದು ಬಿಗ್ ಎಮ್ ಜೆಗಳಿಂದ ಪ್ರಸಿದ್ಧ ವ್ಯಕ್ತಿಗಳಾದ ನಟ ಅಲಿ ಫಾಸಲ್, ಹಿರಿಯ ಗಾಯಕ ಶಂಕರ್ ಮಹಾದೇವನ್, ನಟಿ ಸನ್ನಿ ಲಿಯೋನ್, ನಟಿ ರಿಚಾ ಚಡ್ಡಾ, ಭಾರತೀಯ ಗೀತರಚನೆ ಕಾರ ಮತ್ತು ಸಿಬಿಎಫ್ ಸಿಯ ಮುಖ್ಯಸ್ಥ ಪ್ರಾಸೂನ್ ಜೋಶಿ ಅವರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

  ನಿಜ ಜೀವನದ 'ಐ ಅಮ್ ನಾಟ್ ಸಾರಿ' ಕತೆಗಳು

  ನಿಜ ಜೀವನದ 'ಐ ಅಮ್ ನಾಟ್ ಸಾರಿ' ಕತೆಗಳು

  ಈ ಕಲಾವಿದರು ತಮ್ಮ ನಿಜ ಜೀವನದ 'ಐ ಅಮ್ ನಾಟ್ ಸಾರಿ' ಕತೆಗಳನ್ನು ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಮತ್ತು ಹೆಚ್ಚಿನ ಕಥೆಗಳನ್ನು ಹಂಚಿಕೊಳ್ಳುವಂತೆ ಉದ್ಯಮದ ಸ್ನೇಹಿತರಿಗೆ ಸವಾಲು ಹಾಕುತ್ತಿದ್ದಾರೆ.

  English summary
  Big FM launches #IAmNotSorry campaign. The campaign revolves around the concept of breaking barriers and inspiring listeners with stories of individuals breaking stereotypes and the ones who are not afraid or apologetic of their choices.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X