»   » 'ಮಂಡ್ಯದ ಗಂಡು' ಅಂಬರೀಶ್ ಮನೆಯಲ್ಲಿ ಬುದ್ಧಾವತಾರ

'ಮಂಡ್ಯದ ಗಂಡು' ಅಂಬರೀಶ್ ಮನೆಯಲ್ಲಿ ಬುದ್ಧಾವತಾರ

Posted By: ಹರ್ಷಿತಾ ರಾಕೇಶ್
Subscribe to Filmibeat Kannada

'ಮಂಡ್ಯದ ಗಂಡು' ಅಂಬರೀಶ್ ಸ್ಯಾಂಡಲ್ ವುಡ್ ನಲ್ಲಿ ರೆಬೆಲ್ ಸ್ಟಾರ್ ಅಂತ ಫೇಮಸ್ ಆಗಿರ್ಬಹುದು. ಆದ್ರೆ ನಿಜ ಜೀವನದಲ್ಲಿ ಮಾತ್ರ ಅವರು 'ಗೋಲ್ಡನ್' ಸ್ಟಾರ್. ನೋಡೋಕೆ ಒರಟಾದರೂ, ಅವರ ಮನಸ್ಸು ಮಾತ್ರ ಚಿನ್ನ.

ಚಿತ್ರರಂಗದಲ್ಲಿ ಹಾಗೂ ರಾಜಕೀಯದಲ್ಲಿ ಅನೇಕರಿಗೆ ಕಂಡೂ ಕಾಣದಂತೆ ಸಹಾಯ ಮಾಡಿರುವ ಅಂಬರೀಶ್ 'ಹೃದಯವಂತ' ಅಂತಲೇ ಜನಜನಿತ. ಇಂತಿಪ್ಪ ಅಂಬಿಗೆ ಅಭಿಮಾನಿ ಬಳಗವೊಂದು ಬುದ್ಧನ ಪ್ರತಿಮೆಯನ್ನ ಇತ್ತೀಚೆಗಷ್ಟೆ ಉಡುಗೊರೆಯಾಗಿ ನೀಡ್ತು.

Buddha statue at Kannada Actor Ambareesh's house

ಹೇಳಿ ಕೇಳಿ ಬುದ್ಧ ಶಾಂತ ಚಿತ್ತ. ಸದಾ ಒಳಿತನ್ನೇ ಬಯಸುವ ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿ. ಆದ್ದರಿಂದ, ಬುದ್ಧನ ಪ್ರತಿಮೆ ತಮಗೆ ಮಾತ್ರ ಸೀಮಿತವಾಗಿರಬಾರದು, ತಮ್ಮ ಮನೆಗೆ ಬರುವ ಎಲ್ಲರಿಗೂ ದರ್ಶನವಾಗಬೇಕು ಎಂಬ ಕಾರಣಕ್ಕೆ ತಮ್ಮ ಮನೆಯ ಮುಂಭಾಗದಲ್ಲಿರುವ ಮಂಟಪದಲ್ಲಿ ತಮಗೆ ಉಡುಗೊರೆಯಾಗಿ ಬಂದ ಬುದ್ಧನ ಪ್ರತಿಮೆಯನ್ನ ಅಂಬರೀಶ್ ಸ್ಥಾಪನೆ ಮಾಡಿದ್ದಾರೆ.

Buddha statue at Kannada Actor Ambareesh's house

ಬೆಳಗ್ಗೆ ಎದ್ದ ಕೂಡಲೆ ಬುದ್ಧನ ದರ್ಶನ ಮಾಡುವ ಅಂಬರೀಶ್, ಮನೆಗೆ ಬರುವ ಎಲ್ಲರನ್ನೂ ಕೂರಿಸಿ ಮಾತನಾಡುವುದು ಇದೇ ಬುದ್ಧನ ಮಂಟಪದ ಎದುರಿಗೆ. ಬುದ್ಧ ನೀಡಿರುವ ಒಳ್ಳೆಯ ಸಂದೇಶ ತಮ್ಮ ಎಲ್ಲಾ ಅತಿಥಿಗಳಿಗೂ ತಲುಪಲಿ ಎಂಬ ಆಶಯ ಅಂಬರೀಶ್ ರದ್ದು. (ಫಿಲ್ಮಿಬೀಟ್ ಕನ್ನಡ)

English summary
By placing Buddha Statue in his house, Kannada Actor Ambareesh is spreading Buddha's message of hope and harmony to all the guests who visits his home.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada