»   » ಪಂಚಭೂತಗಳಲ್ಲಿ ನಟ ಸಿ.ಆರ್. ಸಿಂಹ ಲೀನ

ಪಂಚಭೂತಗಳಲ್ಲಿ ನಟ ಸಿ.ಆರ್. ಸಿಂಹ ಲೀನ

Posted By:
Subscribe to Filmibeat Kannada

ನಟ, ಹಿರಿಯ ರಂಗಕರ್ಮಿ ಸಿ.ಆರ್.ಸಿಂಹ ಅವರ ಅಂತಿಮ ಯಾತ್ರೆ ಸಹಸ್ರ ಅಭಿಮಾನಿಗಳ ಕಣ್ಣೀರ ಧಾರೆಯೊಂದಿಗೆ ಸಾಗಿತು. ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಪಂಚಭೂತಗಳಲ್ಲಿ ಲೀನವಾದರು. ಅವರ ಪುತ್ರ ಋತ್ವಿಕ್ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಅದ್ವೈತ ಪದ್ಧತಿಯಂತೆ ವಿಧಿವಿಧಾನಗಳಂತೆ ಅವರ ಅಂತ್ಯಕ್ರಿಯೆ ಮಾಡಲಾಯಿತು. ಶನಿವಾರ ಬೆಳಗ್ಗೆ ಸುಮಾರು 9 ಗಂಟೆಗೆ ಬನಶಂಕರಿಯಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಅವರ ಪಾರ್ಥೀವ ಶರೀರವನ್ನು ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಸಚಿವ ಸಂಪುಟದ ಅನೇಕ ಸಹೋದ್ಯೋಗಿಗಳು ಅವರಿಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸಿದರು.

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಸೇರಿದಂತೆ ಅನೇಕ ಸಿನಿಮಾ ನಟ ನಟಿಯರು, ರಂಗಭೂಮಿ ಕಲಾವಿದರು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.

ಮೂರು ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕ ದರ್ಶನಕ್ಕೆ ಅವರ ಪಾರ್ಥೀವ ಶರೀರವನ್ನು ಇಡಲಾಗಿತ್ತು. ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು. (ಏನೆನ್ಸೀಸ್)

English summary
The last rites of Kannada actor C.R.Simha were performed at his Banashankari Electric Crematorium on Saturday (1st March) evening. The 72-year-old actor died in Bangalore on Friday, he was suffering from prostate cancer.
Please Wait while comments are loading...