»   » ಮತ್ತೊಂದು ದಾಖಲೆ ಬರೆದ ಕಿಶನ್ ಅವರ 'ಕೇರ್ ಆಫ್ ಫುಟ್ ಪಾತ್ 2'.!

ಮತ್ತೊಂದು ದಾಖಲೆ ಬರೆದ ಕಿಶನ್ ಅವರ 'ಕೇರ್ ಆಫ್ ಫುಟ್ ಪಾತ್ 2'.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಅತೀ ಸಣ್ಣ ವಯಸ್ಸಿನಲ್ಲೇ ನಿರ್ದೇಶನ ಮಾಡಿ ಎಲ್ಲರ ಗಮನವನ್ನು ತನ್ನತ್ತ ಸೆಳೆದಿರುವ ಮಾಸ್ಟರ್ ಕಿಶನ್ ಅವರ 'ಕೇರ್ ಆಫ್ ಫುಟ್ ಪಾತ್ 2' ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿ ದಾಖಲೆ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ಮತ್ತೊಂದು ದಾಖಲೆ ಸೃಷ್ಟಿಸಿದೆ.

ಡಿಸೆಂಬರ್ 4 ರಂದು ತೆರೆ ಕಾಣುತ್ತಿರುವ 'ಕೇರ್ ಆಫ್ ಫುಟ್ ಪಾತ್ 2' ಸಿನಿಮಾ ಮಾಮೂಲಿಯಾಗಿ ಬಿಡುಗಡೆಯಾಗುತ್ತಿಲ್ಲ ಬದಲಾಗಿ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ.[ಆಸ್ಕರ್ ರೇಸಿನಲ್ಲಿ ಕನ್ನಡ ಚಿತ್ರ 'ಕೇರ್ ಆಫ್ ಫುಟ್ಪಾತ್'-2]

Care of Footpath 2 all set to release in 3 language and 500 theaters

ಹೌದು ಮಾಸ್ಟರ್ ಕಿಶನ್ ಅವರ ಈ ವಿಭಿನ್ನ ಸಿನಿಮಾ ಬರೋಬ್ಬರಿ 500 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಈಗಾಗಲೇ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮನಗೆದ್ದಿರುವ ಈ ಸಿನಿಮಾ ಹಾಲಿವುಡ್ ಸಿನಿಮಾ ಪಂಡಿತರ ಮುಂದೆ ಪ್ರದರ್ಶನಗೊಂಡು ಎಲ್ಲರ ಪ್ರಶಂಸೆ ಗಿಟ್ಟಿಸಿಕೊಂಡಿದೆ.

ಒಟ್ನಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ನಿರ್ದೇಶಕ ಕಮ್ ನಟ ಮಾಸ್ಟರ್ ಕಿಶನ್ ಅವರು ಪ್ಲಾನ್ ಮಾಡಿದ್ದಾರೆ.['ಕೇರ್ ಆಫ್ ಪುಟ್ ಪಾತ್ 2' ಹಾಡುಗಳು, ನವೆಂಬರ್ 3ಕ್ಕೆ, ಮಾರುಕಟ್ಟೆಯಲ್ಲಿ]

Care of Footpath 2 all set to release in 3 language and 500 theaters

ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಿರುವ ಈ ಚಿತ್ರವನ್ನು ದೇಶ-ವಿದೇಶಗಳ ಚಿತ್ರಮಂದಿರಗಳು ಸೇರಿದಂತೆ ಒಟ್ಟು 500 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ದಾಖಲೆ ಬರೆಯುತ್ತಿದ್ದಾರೆ.

ಸ್ಟಾರ್ ನಟರ ಸಿನಿಮಾಗಳೇ 100-200 ಚಿತ್ರಮಂದಿರಗಳಲ್ಲಿ ತೆರೆ ಕಾಣುವುದೇ ದೊಡ್ಡ ಸಾಹಸ ಆಗಿರುವ ದಿನಗಳಲ್ಲಿ 'ಕೇರ್ ಆಫ್ ಫುಟ್ ಪಾತ್ 2' ಸಿನಿಮಾ ಬರೋಬ್ಬರಿ 500 ಥಿಯೇಟರ್ ಗಳಲ್ಲಿ ಬಿಡುಗಡೆಯಾಗುವ ಮೂಲಕ ಚಂದನವನದಲ್ಲಿ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದೆ.

ಮೂರು ಭಾಷೆಗಳಲ್ಲಿ ತೆರೆ ಕಾಣುತ್ತಿರುವುದರಿಂದ ಪ್ರತೀ ಭಾಷೆಗೂ 50 ಚಿತ್ರಮಂದಿರಗಳಂತೆ ಸುಮಾರು 150 ಚಿತ್ರಮಂದಿರಗಳನ್ನು ಜಾಲಿ ಹಿಟ್ಸ್ ಸಂಸ್ಥೆ ಬುಕ್ ಮಾಡಿದೆ. ಇನ್ನು ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ದೇವರಾಜ್ ಪಾಂಡೆ ಎಂಬುವವರು ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಚಿತ್ರಮಂದಿರದ ಮಾಲೀಕರು ಆಗಿರುವ ದೇವರಾಜ್ ಪಾಂಡೆ ರಾಜ್ಯದಲ್ಲೇ ಸುಮಾರು 120 ಚಿತ್ರಮಂದಿರಗಳಲ್ಲಿ ಮಾಸ್ಟರ್ ಕಿಶನ್ ಅವರ ಬಹುನಿರೀಕ್ಷಿತ ಚಿತ್ರಕ್ಕೆ ಬಿಡುಗಡೆ ಭಾಗ್ಯ ಕಲ್ಪಿಸಿದ್ದಾರೆ. ಇನ್ನುಳಿದಂತೆ ಬಾಂಬೆ, ಪೂನಾ, ಆಂಧ್ರ ಸೇರಿದಂತೆ ತೆಲುಗು ಮತ್ತು ಹಿಂದಿ ಮಾತನಾಡುವ ಪ್ರಾಂತ್ಯಗಳಲ್ಲಿ 230ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ.

English summary
Creating records, the Oscar nominated movie Care Of Footpath- 2 is all set to release in 3 language, 500 theaters. the much awaited cinema will be released on December 4th. The movie is directed by Master Kishan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada