For Quick Alerts
  ALLOW NOTIFICATIONS  
  For Daily Alerts

  ನಟ, ನಿರೂಪಕ ಅಕುಲ್ ಬಾಲಾಜಿ ವಿರುದ್ಧ ದೂರು ದಾಖಲು

  |

  ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜದ ಪರ ಕಾಳಜಿ ತೋರುವ ಸೆಲೆಬ್ರಿಟಿಗಳು ತಾವೇ ನಿಯಮಗಳನ್ನು ಮೀರಿ ಸಮಸ್ಯೆಗೆ ಸಿಕ್ಕಿಕೊಂಡು ಉದಾಹರಣೆಗಳು ಸಾಕಷ್ಟಿವೆ, ಇದಕ್ಕೆ ಹೊಸ ಸೇರ್ಪಡೆ ಅಕುಲ್ ಬಾಲಾಜಿ ಅವರದ್ದು.

  ಚಿತ್ರಾನ್ನ ಮಾಡುವಾಗ ಅಕುಲ್ ಗೆ ಬಿಗ್ ಬಾಸ್ ನೆನಪಾಗಿದ್ದೇಕೆ

  ಕೊರೊನಾ ಲಾಕ್‌ಡೌನ್ ನಿಯಮಾವಳಿಗಳ ಪ್ರಕಾರ ರೆಸಾರ್ಟ್‌, ಹೋಟೆಲ್‌ಗಳು, ಮನೊರಂಜನಾತ್ಮಕ ಸೇವೆ ಮಾರಾಟ ಕೇಂದ್ರಗಳು ತೆರೆಯುವಂತಿಲ್ಲ. ಆದರೆ ನಟ, ನಿರೂಪಕ ಅಕುಲ್ ಬಾಲಾಜಿ ಒಡೆತನದ ಸ್ಥಳದಲ್ಲಿ ನಿರ್ಮಿಸಲ್ಪಟ್ಟಿರುವ ರೆಸಾರ್ಟ್ ಒಂದು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದೆ.

  ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸನ್‌ಶೈನ್ ರೆಸಾರ್ಟ್ ನಿರ್ಮಾಣವಾಗಿರುವ ಸ್ಥಳದ ಮಾಲೀಕ ಮಾಲೀಕ ಅಕುಲ್ ಬಾಲಾಜಿ ಮತ್ತು ರೆಸಾರ್ಟ್‌ನ ಶ್ರೀನಿವಾಸಮಣಿಯಂ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  ಲಗುಮೇನಹಳ್ಳಿ ಬಳಿ ಇರುವ ಸನ್‌ಶೈನ್ ಬೈ ಜೇಡ್ ರೆಸಾರ್ಟ್

  ಲಗುಮೇನಹಳ್ಳಿ ಬಳಿ ಇರುವ ಸನ್‌ಶೈನ್ ಬೈ ಜೇಡ್ ರೆಸಾರ್ಟ್

  ಅಕುಲ್ ಬಾಲಾಜಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಲಗುಮೇನಹಳ್ಳಿ ಬಳಿಯಲ್ಲಿ ಸ್ಥಳವನ್ನು ಹೊಂದಿದ್ದು ಅಲ್ಲಿ ಸನ್ ಶೈನ್ ಬೈ ಜೇಡ್ ರೆಸಾರ್ಟ್‌ ನಿರ್ಮಿಸಲಾಗಿದೆ.

  ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ದಾಖಲು

  ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ದಾಖಲು

  ಮಂಜುನಾಥ ಎಂಬುವರು ಅಕುಲ್ ಬಾಲಾಜಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾನುವಾರ ಸಂಜೆ ದೂರು ದಾಖಲಾಗಿ, ಎಫ್‌ಐಆರ್ ಸಹ ರಿಜಿಸ್ಟರ್ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  ಶನಿವಾರ ರಾತ್ರಿ ರೆಸಾರ್ಟ್‌ ಬಂದಿದ್ದ ಜನರ ಗುಂಪು

  ಶನಿವಾರ ರಾತ್ರಿ ರೆಸಾರ್ಟ್‌ ಬಂದಿದ್ದ ಜನರ ಗುಂಪು

  ದೂರಿನ ಅನ್ವಯ, ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಸುಮಾರು 20 ಮಂದಿ ಏಕಾ-ಏಕಿ ಅಕುಲ್ ಬಾಲಾಜಿ ಒಡೆತನದ ಸನ್‌ಶೈನ್ ರೆಸಾರ್ಟ್‌ ಗೆ ಬಂದು ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ನಿಯಮಗಳ ಪ್ರಕಾರ ರೆಸಾರ್ಟ್ ತೆರೆಯುವಂತಿಲ್ಲ, ಅಲ್ಲದೆ ಯಾವುದೇ ಸಮಾರಂಭ ಸ್ಥಳೀಯ ಠಾಣೆ ಅಥವಾ ಜಿಲ್ಲಾಡಳಿತದಿಂದ ಪೂರ್ವಾನುಮತಿ ಕಡ್ಡಾಯ. ಇದನ್ನೆಲ್ಲಾ ಗಾಳಿಗೆ ತೂರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

  ಮನೆಯಲ್ಲೇ ಇರಿ ಎಂದು ಪೋಸ್ಟ್ ಹಾಕಿದ್ದ ಅಕುಲ್ ಬಾಲಾಜಿ

  ವಿಪರ್ಯಾಸವೆಂದರೆ ಅಕುಲ್ ಬಾಲಾಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಏಪ್ರಿಲ್ 1 ರಂದು ಪೋಸ್ಟ್ ಹಾಕಿ, ಎಲ್ಲರೂ ಮನೆಯಲ್ಲಿಯೇ ಇರಿ, ಎಲ್ಲರೂ ಸುರಕ್ಷಿತವಾಗಿರಿ ಎಂದಿದ್ದರು. ಬೆಂಗಳೂರು ಪೊಲೀಸರ ಪೋಸ್ಟ್ ಅನ್ನು ಶೇರ್ ಸಹ ಮಾಡಿದ್ದರು. ಆದರೆ ಈಗ ಅವರ ಒಡೆತನದ ರೆಸಾರ್ಟ್ ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿದೆ.

  English summary
  Case registered against famous actor and TV host Akul Balaji for violating Corona lock down. His resort in Doddaballapura opened and allowed costumers to celebrate marriage so complaint lodge by local people.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X