For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಇಬ್ಬರು ನಟರು, ಒಬ್ಬ ಮಾಜಿ ಶಾಸಕರ ಪುತ್ರನಿಗೆ ಸಿಸಿಬಿ ನೊಟೀಸ್

  |

  ಚಂದನವನದ ಕೆಲವು ನಟ-ನಟಿಯರಿಗೆ ಡ್ರಗ್ಸ್ ಜಾಲದೊಂದಿಗೆ ನಂಟಿದೆ ಎಂಬ ಬಗ್ಗೆ ಸಿಸಿಬಿ ನಡೆಸುತ್ತಿರುವ ತನಿಖೆ ದಿನೇ-ದಿನೇ ವಿಸ್ತಾರಗೊಳ್ಳುತ್ತಿದೆ.

  ಇದೇ ಪ್ರಕರಣಕ್ಕೆ ಸಂಬಧಿಸಿದಂತೆ ನಟಿ ರಾಗಿಣಿ, ಸಂಜನಾ ಈಗಾಗಲೇ ಬಂಧನಕ್ಕೆ ಒಳಗಾಗಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಗಳಾಗಿದ್ದಾರೆ. ನಟ ದಿಗಂತ್ ಹಾಗೂ ನಟಿ ಐಂದ್ರಿತಾ ಈಗಾಗಲೇ ಸಿಸಿಬಿ ಯಿಂದ ವಿಚಾರಣೆ ಎದುರಿಸಿದ್ದಾರೆ. ಈಗ ಮತ್ತೆ ಇಬ್ಬರು ನಟರಿಗೆ ಸಿಸಿಬಿ ಬುಲಾವ್ ಕಳಿಸಿದೆ.

  ನಟ, ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಶ್, ಮಾಜಿ ಶಾಸಕ ಆರ್‌.ವಿ.ದೇವರಾಜ್ ಪುತ್ರ ಯುವರಾಜ್ ಅವರುಗಳಿಗೆ ಸಿಸಿಬಿಯು ನೊಟೀಸ್ ಜಾರಿ ಮಾಡಿದೆ.

  Recommended Video

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada

  ತಮಗೆ ಸಿಸಿಬಿ ಯಿಂದ ದೂರವಾಣಿ ಮೂಲಕ ನೊಟೀಸ್ ಬಂದಿರುವುದಾಗಿ ಅಕುಲ್ ಬಾಲಾಜಿ ಹೇಳಿದ್ದಾರೆ. ನಟ ಸಂತೋಶ್ ಸಹ ನೊಟೀಸ್ ಬಂದಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಮಾಜಿ ಶಾಸಕರ ಪುತ್ರ ಯುವರಾಜ್ ಗೆ ನೊಟೀಸ್ ಹೋಗಿರುವುದು ಧೃಡವಾಗಿದೆ.

  English summary
  Notice sent to actor Akul Balaji and Santhosh and former MLA son Yuvaraj to appear before CCB related to Drugs case.
  Friday, September 18, 2020, 17:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X