For Quick Alerts
  ALLOW NOTIFICATIONS  
  For Daily Alerts

  ಚಂದನ್ ಶೆಟ್ಟಿ ನಂತರ ಅರ್ಜುನ್ ಜನ್ಯ ಮೇಲೆ ಸಿಸಿಬಿ ಕಣ್ಣು.!

  By Bharath Kumar
  |
  ಸಂಕಷ್ಟದಲ್ಲಿ ಅರ್ಜುನ್ ಜನ್ಯ..! | Filmibeat Kannada

  Rap ಸಿಂಗರ್ ಚಂದನ್ ಶೆಟ್ಟಿ ಅವರಿಗೆ ಸಿಸಿಬಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಐದು ವರ್ಷದ ಹಿಂದೆ ಚಂದನ್ ಶೆಟ್ಟಿ ಹಾಡಿದ್ದ ಹಾಡೊಂದರಲ್ಲಿ ಗಾಂಜಾ ಬಗ್ಗೆ ಪ್ರಚೋದನಾತ್ಮಕವಾಗಿ ಸಾಹಿತ್ಯ ಬಳಸಲಾಗಿದೆ ಎಂಬ ಕಾರಣಕ್ಕೆ ವಿವರಣೆ ನೀಡಿ ಎಂದು ಸಿಸಿಬಿ ಪೊಲೀಸರು ಸೂಚಿಸಿದ್ದರು.

  ಇದೀಗ, ಚಂದನ್ ಶೆಟ್ಟಿಯ ನಂತರ ಕನ್ನಡದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಮೇಲೆ ಸಿಸಿಬಿ ಕಣ್ಣಾಕಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡಿನಲ್ಲೂ ಮಾದಕ ವಸ್ತುಗಳ ಬಗ್ಗೆ ಪ್ರಚೋದನೆ ನೀಡಲಾಗಿದೆ ಎಂಬ ಕಾರಣಕ್ಕೆ ಅವರಿಗೂ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

  ಶರಣ್ ಅಭಿನಯಿಸಿದ್ದ Rambo 2 ಚಿತ್ರದಲ್ಲಿ ''ಧಮ್ ಮಾರೋ ಧಮ್'' ಎಂದು ಒಂದು ಹಾಡಿದೆ. ಈ ಹಾಡಿನಲ್ಲಿ ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಕಿಡಿಕಾರಿದ್ದಾರೆ. ಅರ್ಜುನ್ ಜನ್ಯ ಸೇರಿದಂತೆ ಇತರರಿಗೂ ಸಮನ್ಸ್ ನೀಡಲು ಸಿಸಿಬಿ ಪೊಲೀಸರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

  ಮೇ ತಿಂಗಳಲ್ಲಿ ತೆರೆಕಂಡಿದ್ದ ಈ ಚಿತ್ರವನ್ನ ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದರು. ಮುತ್ತು ಎಂಬುವರು ''ಧಮ್ ಮಾರೋ ಧಮ್'' ಹಾಡಿಗೆ ಸಾಹಿತ್ಯ ಬರೆದಿದ್ದು, ಖ್ಯಾತ ಕಲಾವಿದ ಅರುಣ್ ಸಾಗರ್ ಅವರ ಪುತ್ರಿ ಅಧಿತಿ ಸಾಗರ್ ಹಾಡಿದ್ದಾರೆ. ಹಾಡಿನಲ್ಲಿ ನಟಿ ಐಂದ್ರಿತಾ ರೈ ಹೆಜ್ಜೆ ಹಾಕಿದ್ದರು.

  ಕೇವಲ ಈ ಹಾಡಿಗಳಿಗೆ ಮಾತ್ರವಲ್ಲ, ಮತ್ತಷ್ಟು ಹಾಡುಗಳನ್ನ ವಿಶೇಷವಾಗಿ ಪರಿಗಣಿಸಿ ಅದಕ್ಕೆ ಸಂಬಂಧಪಟ್ಟ ಕಲಾವಿದರಿಗೆ ಸಿಸಿಬಿ ಪೊಲೀಸರು ವಿವರಣೆ ಕೇಳಲಿದ್ದಾರೆ ಎನ್ನಲಾಗಿದೆ.

  English summary
  Bangalore CCB police likely to give summons arjun janya for Dum Maro Dum song of Kannada Movie Rambo 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X