TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಟ್ವಿಟ್ಟರ್ ಲೋಕದಲ್ಲಿಂದು ಕಂಡು ಬಂದ ಸೆಲೆಬ್ರಿಟಿಗಳ ಟ್ವೀಟ್ಸ್
ರಮೇಶ್ ಅರವಿಂದ್ ಅವರಿಗೆ ಇಂದು ವಿಶೇಷವಾದ ದಿನ. ಯಾಕಂದ್ರೆ, ಅವರ ಸಾರಥ್ಯದಲ್ಲಿ ಹೊಸ ಕಾರ್ಯಕ್ರಮ ಇಂದಿನಿಂದ ಆರಂಭವಾಗುತ್ತಿದ್ದು, ಜನರ ಪ್ರತಿಕ್ರಿಯೆ ಹೇಗಿರಲಿದೆ ಎಂದು ಕಾಯುತ್ತಿದ್ದಾರೆ.
ನಟ ಡೆಡ್ಲಿ ಆದಿತ್ಯ ಅವರು ಅಂಡರ್ ವರ್ಲ್ಡ್ ನಿಂದ ಹೊರಗೆ ಬರ್ತಿದ್ದಾರೆ. ಆದ್ರೆ, ಸಿನಿಮಾ ಮಾತ್ರ ಅಂಡರ್ ವರ್ಲ್ಡ್ ಖ್ಯಾತಿ ಹೊಂದಿರುವ ನಿರ್ದೇಶಕರ ಜೊತೆಯೇ ಮಾಡ್ತಿದ್ದಾರೆ. ಈ ಚಿತ್ರಕ್ಕೊಂದು ಟೈಟಲ್ ಸೂಚಿಸುವ ಅವಕಾಶ ನಿಮಗೆ ಸಿಕ್ಕಿದೆ.
ಜಗ್ಗೇಶ್ ತಮ್ಮ ತಂದೆ-ತಾಯಿಯ ನೆನಪನ್ನ ಹೇಳುವ ಕಥೆಯೊಂದನ್ನ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹೊಸ ಹಾಡೊಂದನ್ನ ಶೇರ್ ಮಾಡಿದ್ದಾರೆ. ಕೆ.ಎಂ ಚೈತನ್ಯ ಕೂಡ ವಿಡಿಯೋ ಸಾಂಗ್ ಬಿಡುಗಡೆ ಮಾಡಲಿದ್ದಾರೆ. ಇಷ್ಟೆಲ್ಲಾ ಸುದ್ದಿಗಳ ಜೊತೆ ಸಿನಿಲೋಕದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನ ಟ್ವೀಟ್ ಆಫ್ ದಿ ಡೇ ವಿಶೇಷ ಸ್ಟೋರಿಯಲ್ಲಿ ನೋಡಬಹುದು. ಮುಂದೆ ಓದಿ.....
|
ಆದಿತ್ಯಗೆ ಟೈಟಲ್ ಕೊಡಿ
ಡೆಡ್ಲಿ ಆದಿತ್ಯ ಹಾಗೂ ನಿರ್ದೇಶಕ ರವಿ ಶ್ರೀವತ್ಸ ಕಾಂಬಿನೇಷನ್ ನಲ್ಲಿ ಮೂರನೇ ಸಿನಿಮಾ ಬರಲಿದ್ದು, ಈ ವಿಷ್ಯವನ್ನ ನಟ ಆದಿತ್ಯ ಖಚಿತಪಡಿಸಿದ್ದಾರೆ. ಜೊತೆಗೆ ತಮ್ಮ ಹೊಸ ಚಿತ್ರಕ್ಕೆ ಟೈಟಲ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಂಡರ್ ವರ್ಲ್ಡ್ ನಿಂದ ಆಚೆ ಬಂದ ಆದಿತ್ಯಗೆ ಒಂದು ಹೆಸರು ಕೊಡಿ
|
ಚಿತ್ರದ ಹಿಂದಿನ ಕಥೆ ಹೇಳಿದ ಜಗ್ಗೇಶ್
ಜಗ್ಗೇಶ್ ಅವರ ತಾಯಿ ಬಿಡಿಸಿದ ಚಿತ್ರವೊಂದನ್ನ ನೆನಪಿಸಿಕೊಂಡ ನವರಸಕ ನಾಯಕ, ಸುಮಾರು 40 ವರ್ಷದ ಹಿಂದಿನ ಕ್ಷಣವೊಂದನ್ನ ಸ್ಮರಿಸಿಕೊಂಡರು.
|
ಕಥೆಯೊಂದು ವಿಡಿಯೋ ಹಾಡು
ದಿಗಂತ್ ಅಭಿನಯದ 'ಕಥೆಯೊಂದು ಶುರುವಾಗಿದೆ' ಚಿತ್ರದ ವಿಡಿಯೋ ಸಾಂಗ್ ವೊಂದು ಬಿಡುಗಡೆಯಾಗಿದೆ. ಈ ಹಾಡನ್ನ ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
|
ಭಟ್ಟರಿಗೆ ಥ್ಯಾಂಕ್ಸ್ ಹೇಳಿದ ಪ್ರೇಮ್
'ದಿ ವಿಲನ್' ಚಿತ್ರದ ಟೀಸರ್ ನೋಡಲು 500 ರೂಪಾಯಿ ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ. ಇದರಿಂದ ಬಂದ ಹಣವನ್ನ ಹಿರಿಯ ನಿರ್ದೇಶಕರಿಗೆ ನೀಡಲು ಪ್ರೇಮ್ ನಿರ್ಧರಿಸಿದ್ದಾರೆ. ಈ ಕೆಲಸಕ್ಕೆ ಯೋಗರಾಜ್ ಭಟ್ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಈಗ ಭಟ್ಟರ ಆ ಖುಷಿಗೆ ಪ್ರೇಮ್ ಥ್ಯಾಂಕ್ಸ್ ಹೇಳಿದ್ದಾರೆ.
|
'ಅಮ್ಮ ಐ ಲವ್ ಯೂ' ಸಾಂಗ್ ಬಿಡುಗಡೆ
ಕೆ.ಎಂ ಚೈತನ್ಯ ನಿರ್ದೇಶನ ಹಾಗೂ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರದ 'ಈ ಮೌನವೇ' ಹಾಡಿನ ವಿಡಿಯೋ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ದೇಶಕರು ಟ್ವೀಟ್ ಮಾಡಿದ್ದಾರೆ.
|
ನಿಮಗಾಗಿ ಕಾಯುತ್ತಿದ್ದೇನೆ
ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿ ಬರಲಿರುವ 'ಕನ್ನಡದ ಕೋಟ್ಯಾಧಿಪತಿ ಸೀಸನ್ 3' ಇಂದಿನಿಂದ ಆರಂಭವಾಗುತ್ತಿದೆ. ಈ ಸಂತಸವನ್ನ ರಮೇಶ್ ಅವರು ಟ್ವಿಟ್ಟರ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ.