For Quick Alerts
  ALLOW NOTIFICATIONS  
  For Daily Alerts

  ಚಂದನ್‌ ಶೆಟ್ಟಿ ಮುಂದಿನ ಚಿತ್ರಕ್ಕೆ ಟೈಟಲ್ ಫಿಕ್ಸ್‌: ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ CS

  |

  ಮೂರೇ ಮೂರೇ ಪೆಗ್ಗಿಗೆ ಹಾಡಿನ ಮೂಲಕ ಜನರಿಗೆ ಹಾಡಿನ ಕಿಕ್ಕೇರಿಸಿದ್ದ ರ್ಯಾಪರ್‌ ಚಂದನ್‌ ಶೆಟ್ಟಿ , ಮತ್ತೊಂದು ಪ್ರಯತ್ನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಸಂಗೀತ ಸಂಯೋಜರಾಗಿದ್ದ ಚಂದನ್‌ ಶೆಟ್ಟಿ ಬಿಗ್‌ ಬಾಸ್‌ ವಿನ್ನರ್‌ ಆಗುವ ಮೂಲಕ ಜನಪ್ರಿಯರಾದರು. ಬಳಿಕ ಒಂದೊಂದೆ ಹಿಟ್‌ ಹಾಡುಗಳನ್ನು ನೀಡಿದರು. ಕಿರುತೆರೆ ಶೋ ರಾಜ-ರಾಣಿ ಮೂಲಕವೂ ಜನರನ್ನು ರಂಜಿಸಿದ್ದ ಚಂದನ್ ಶೆಟ್ಟಿ ಚಿತ್ರರಂಗಕ್ಕೂ ಕಾಲಿಟ್ಟದ್ದರು.

  ಎಲ್ರ ಕಾಲೆಯುತ್ತೆ ಕಾಲ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿರುವ ಚಂದನ್‌ ಶೆಟ್ಟಿ ಅವರ ಎರಡನೇ ಸಿನಿಮಾ ಕೂಡ ಸದ್ಯದಲ್ಲೇ ಸೆಟ್ಟೇರಲಿದೆ. ಚಂದನ್‌ ಶೆಟ್ಟಿ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲಕ್ಕೆ ತೆರೆ ಬಿದಿದ್ದು, ನಿನ್ನೆ(ಅಕ್ಟೋಬರ್‌ 7) ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿದೆ. ಚಂದನ್ ಶೆಟ್ಟಿ ಅಭಿನಯದ ಮುಂದಿನ ಚಿತ್ರಕ್ಕೆ ಸೂತ್ರಧಾರಿ ಎಂದು ಶೀರ್ಷಿಕೆ ಇಡಲಾಗಿದೆ.

  ಕಿರಣ್ ಕುಮಾರ್ ನಿರ್ದೇಶನ ಸೂತ್ರಧಾರಿ ಚಿತ್ರದ ಶೀರ್ಷಿಕೆ ಅದ್ಧೂರಿಯಾಗಿ ಅನಾವರಣಗೊಂಡಿದೆ. ಸೂತ್ರಧಾರಿ ಚಿತ್ರದ ಟೈಟಲ್‌ ಲಾಂಚಿಂಗ್‌ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರಾದ ಕೆ.ಸಿ.ಎನ್ ಕುಮಾರ್, ಗೋವಿಂದರಾಜು ಸೇರಿದಂತೆ ಅನೇಕರು ಉಪಸ್ಥಿರಿದ್ದರು. ಪಿ.ಆರ್‌.ಓ ಸುಧೀಂದ್ರ ವೆಂಕಟೇಶ್ ಸೂತ್ರಧಾರಿ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಚಂದನ್ ಶೆಟ್ಟಿ ನಾಯಕ ನಟರಾಗಿ ನಟಿಸುತ್ತಿರುವ ಸೂತ್ರಧಾರಿ ಚಿತ್ರದ ಚಿತ್ರೀಕರಣ ಅಕ್ಟೋಬರ್ 10ರಿಂದ ಆರಂಭವಾಗಲಿದೆ.

  ಮೈ ಮೂವೀ ಬಜಾರ್ ನ ನವರಸನ್ ನಿರ್ಮಾಣ ಮಾಡುತ್ತಿರುವ ಸೂತ್ರಧಾರಿ ಚಿತ್ರದಲ್ಲಿ ಚಂದನ್ ಶೆಟ್ಟಿಗೆ ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಚಂದನ್ ಶೆಟ್ಟಿ ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರಕ್ಕಾಗಿ ಹನ್ನೆರಡು ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹೆಸರೇ ಹೇಳುವಂತೆ ಸೂತ್ರಧಾರಿ ಒಂದು ಮರ್ಡರ್ ಮಿಸ್ಟರಿಯ ಸುತ್ತ ಚಿತ್ರದ ಕತೆ ಸುತ್ತಲಿದೆ.

  ನಾನು ನಟಿಸಿರುವ ಮೊದಲ ಸಿನಿಮಾ ಇನ್ನೂ ರಿಲೀಸ್‌ ಆಗಿಲ್ಲ. ಆಗಲೇ ಎರಡನೇ ಸಿನಿಮಾ ಆರಂಭವಾಗಿದೆ. ನನ್ನ ಮೊದಲ ಸಿನಿಮಾ ಎಲ್ಲರ ಕಾಲೆಳೆಯುತ್ತೆ ಕಾಲ ಟೀಸರ್‌ ರಿಲೀಸ್‌ ಆಗಿದೆ. ರೀ ರೆಕಾರ್ಡಿಂಗ್‌ ನಡೆಯುತ್ತಿದೆ. ಸದ್ಯದಲ್ಲೇ ಆ ಸಿನಿಮಾ ಕೂಡ ಬಿಡುಗಡೆಯಾಗುತ್ತದೆ. ನಮ್ಮ ನಿರ್ದೇಶಕರು ಎರಡು ಗಂಟೆಗಳ ಕಾಲ ಚಿತ್ರದ ಕಥೆ ಹೇಳಿದ್ದಾರೆ. ಅವರ ತೆಲೆಯಲ್ಲಿ ಸೀನ್‌ ಪ್ರಕಾರ ಕಂಟೆಟ್‌ ಇಟ್ಟುಕೊಂಡಿದ್ದಾರೆ. ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ನಮ್ಮ ನಿರ್ದೇಶಕರು ರಾತ್ರಿ ಕನಸಲ್ಲೂ ಕಥೆ ಹೇಳುತ್ತಾರೆ. ಅವರಲ್ಲಿ ಸಿನಿಮಾ ಬಗ್ಗೆ ಅಷ್ಟೊಂದು ಶ್ರದ್ಧೆ ಇದೆ. ನಮ್ಮ ನಿರ್ಮಾಪಕರ ಮೇಲೂ ನನಗೆ ಅತಿಯಾದ ನಂಬಿಕೆ ಇದೆ ಎಂದರು.

  ಇನ್ನು ಚಂದನ್‌ ಶೆಟ್ಟಿ ಅಭಿನಯದ ಮೊದಲ ಚಿತ್ರ ಎಲ್ರ ಕಾಲೆಯುತ್ತೆ ಕಾಲ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟೀಸರ್ ಹಾಗೂ ಹಾಡು ರಿಲೀಸ್‌ ಆಗಿದ್ದು, ಇದೊಂಧು 80ರ ದಶಕದ ಕಥೆಯಾಗಿದೆ. ಉಷಾ ಗೋವಿಂದರಾಜು ನಿರ್ಮಾಣದ ಎಲ್ರ ಕಾಲೆಯುತ್ತೆ ಕಾಲ ಚಿತ್ರವನ್ನು ಸುಜಯ್‌ ಶಾಸ್ತ್ರಿ ನಿರ್ದೇಶಿಸಿದ್ದಾರೆ. ಇನ್ನು ಎಲ್ರ ಕಾಲೆಯುತ್ತೆ ಕಾಲ ಚಿತ್ರದಲ್ಲಿ ಚಂದನ್‌ ಶೆಟ್ಟಿಗೆ ಅರ್ಚನಾ ಕೊಟ್ಟಿಗೆ ನಾಯಕಿಯಾಗಿದ್ದಾರೆ. ಸದ್ಯದಲ್ಲಿ ಚಿತ್ರ ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ.

  English summary
  Chandan Shetty upcoming Movie suthradhari title launch.
  Saturday, October 8, 2022, 18:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X